ದೂರದ ನೈಲ್ ನದಿಗೆ ಹೋಗಿ ಅಲ್ಲಿ ಕಾಲು ಇಳಿಬಿಟ್ಟು ಕುಳಿತ ಎಚ್ ಎನ್ ಆರತಿ ಬರೆದುಕೊಂಡದ್ದು ಹೀಗೆ-
ತಕ್ಷಣ ರಂಗಕರ್ಮಿ ಉಗಮ ಶ್ರೀನಿವಾಸ್ ಸಿ ಜಿಕೆ ನೆನಪು ಮಾಡಿಬಿಟ್ಟರು

ಎಚ್ ಎನ್ ಆರತಿ
ತನ್ನ ಗಾಢವರ್ಣದಲ್ಲಿ, ಅಗಾಧತೆಯಲ್ಲಿ, ಆಳದಲ್ಲಿ, ಹರಿವಿನಲ್ಲಿ, ವಿಸ್ತಾರದಲ್ಲಿ… ಪ್ರೀತಿಯಂತೆಯೇ ಇರುವ ಬಹುರೂಪಧಾರಿಣಿ ನೈಲ್ ನದಿಯನ್ನು ನೋಡಬೇಕೆಂಬ, ಮುಟ್ಟಿ ಮಾತನಾಡಿಸಬೇಕೆಂಬ ದಶಕಗಳ ಕನಸು ನನಸಾದ ಘಳಿಗೆ!
ನೈಲ್ ಎಂಬ ಮಾಯಾವಿಯೇ, ನಿನ್ನ ಒಳಸುಳಿಗಳಲ್ಲಿ ನಾನು ಕರಗಿ ಹೋದಂತಿದೆ!!!
Ugama Srinivas ಸಿಜಿಕೆ ಅವರಿಗೊಂದು ಆಸೆ ಇತ್ತು. ನಿಮ್ಮ ಹಾಗೆ ನೈಲ್ ನದಿಯಲ್ಲಿ ಕಾಲು ಇಳಿಬಿಟ್ಟು ಕೂರುವ ಆಸೆ. ನಾನು ಬೆಂಗಳೂರಿನಲ್ಲಿ ಇದ್ದ ದಿನಗಳಲ್ಲಿ ವಾರಕ್ಕೆ ಕನಿಷ್ಟ 3 ದಿವಸ ಸಂಸ ಬಯಲು ರಂಗಮಂದಿರದಲ್ಲಿ ಕೂತು ಹೇಳುತ್ತಿದ್ದದ್ದು ಇದೇ ಮಾತು. ನಿಮ್ಮ ನೈಲ್ ನದಿ ಪ್ರವಾಸದ ಮೂಲಕ ಸಿಜಿಕೆ ನೆನಪಾದರು
Arathi Hn ನೀವು ಸಿಜಿಕೆ ಬಯಕೆ ಹೇಳುವುದರ ಮೂಲಕ ನನ್ನನ್ನು ಅಳಿಸಿಬಿಟ್ಟಿರಿ 😓
ನನ್ನ ನೆಚ್ಚಿನ ಗುರು, ಬಂಧು, ಸ್ನೇಹಿತ ಎಲ್ಲವೂ ಆಗಿದ್ದ CGK ಗೋಸ್ಕರ ಮತ್ತೊಮ್ಮೆ ನಾನು ನೈಲ್ ನಲ್ಲಿ ಕಾಲು ಇಳಿಬಿಟ್ಟು ಕೂರುತ್ತೇನೆ! ಸಿಜಿಕೆಯಾಗಿ..





0 Comments