-ಚೈತ್ರ ರೆಡ್ಡಿ
ನಮ್ಮದು ಕನಸುಗಳಲ್ಲಿ ಬದುಕು
ಎಚ್ಚರದಲ್ಲಿ ನಿದ್ರೆ
ಕಾಲು ಹೂತುಕೊಂಡ ಬೇರುಗಳು
ಚಿಗುರೆಲೆಯಂತೆ ಹಗುರು ಕೂಡಾ
ನಾವು ಸೇರುವ ನದಿಯೂ ಹೌದು
ಮತ್ತು ಸೇರಿಸಿಕೊಳ್ಳುವ ಸಾಗರವೂ
ನನ್ನದಲ್ಲದ ಏನೂ ನಿನ್ನಲ್ಲಿಲ್ಲ
ನಿನ್ನದೆಲ್ಲವೂ ನನ್ನಲಿಯೇ
ನಿನ್ನೊಂದಿಗೆ ನಾನು ಎಲ್ಲವೂ
ಮತ್ತು ನೀನಿಲ್ಲದೇ ಏನಿಲ್ಲ,
ನಮ್ಮೆಲ್ಲಾ ಕನಸುಗಳ ದಾರಿಗಳು ನಮ್ಮಡೆಗೇ
ಪ್ರತಿ ದಾರಿಯ ಕೊನೆಯೂ ನಾವೇ
ನಾವು
ಏಕಕಾಲದಲ್ಲಿ ಆತ್ಮಕ್ಕೆ ಅಂಟಿದ ಕಲೆಗಳು
ಮತ್ತು ಆತ್ಮೋಧ್ದಾರಕರು
ನಾವು ಒಬ್ಬರಲ್ಲಿಯೂ ಇಬ್ಬರು ಮತ್ತು ಎಂದಿಗೂ ಒಬ್ಬರೇ
ನಾವು ದ್ವೈತವೂ
ಮತ್ತು ನಾವೇ ಅದ್ವೈತವೂ…






0 Comments