
ಗುಲಾಬಿ ಬಿಳಿಮಲೆ
ಇಂದು ಗಾಲಿ ಕುರ್ಚಿಯ ಗಾಲಿಗಳನ್ನು ತರಲು ಹೋಗಿದ್ದೆ.
ಬಿಲ್ ತಗೊಂಡರೆ GST 850 ರೂ ಬೀಳುತ್ತದೆ ಎಂದು ಗೊತ್ತಾಯ್ತು.
ಬಿಲ್ ಬೇಡ ಅಂದೆ.

ಕೆಲ ದಿನಗಳ ಹಿಂದೆ ಕನ್ನಡಕ ಮಾಡಿಸಲು ಕೊಟ್ಟಿದ್ದೆ. ಸ್ವಲ್ಪ ಒಳ್ಳೆಯ ಲೆನ್ಸ್ ಹಾಕಲು ಹೇಳಿದ್ದೆ.
GST Rs 1500 ಆಗುತ್ತದೆ ಅಂದರು.
ಬಿಲ್ ಬೇಡ ಅಂದೆ.
ನನಗೀಗ ವಿಪರೀತ ಬೇಜಾರಿದೆ. ಈವರೆಗೆ ಎಲ್ಲಿಯೂ ಬಿಲ್ ತೆಗೆದುಕೊಳ್ಳದೆ ನಾನು ಪೇಮೆಂಟ್ ಮಾಡಿದ್ದಿಲ್ಲ.
ನನಗೆ ಕಷ್ಟದಲ್ಲಿ ತಿಂಗಳು ತಳ್ಳುವಷ್ಟೇ ಆದಾಯ ಇರುವುದು. ಒಂದೊಂದು ಹೆಚ್ಚುವರಿ ಖರ್ಚುಗಳು ಬಂದಾಗಲೂ ತಲೆಬಿಸಿಯಾಗುವ ಪರಿಸ್ಥಿತಿ. ಇಂತದ್ದರಲ್ಲಿ ಅಶಕ್ತರು ಬಳಸುವ ಗಾಲಿಕುರ್ಚಿಗೂ, ದೃಷ್ಟಿ ದೋಷದ ಕನ್ನಡಕಕ್ಕೂ ಜಿ ಎಸ್ ಟಿ ವಿಧಿಸಿದ ಸರಕಾರ ನನ್ನಂತಹ ಪ್ರಾಮಾಣಿಕರನ್ನೂ ಭ್ರಷ್ಟತೆಯತ್ತ ತಳ್ಳಿ ಬಿಟ್ಟಿದೆಯಲ್ಲ… ತುಂಬಾ ಹಿಂಸೆಯಾಗುತ್ತಿದೆ…
ಆರೋಗ್ಯಕಾಳಜಿಯ ವಸ್ತುಗಳಿಗೇ ಹೀಗಾದರೆ ಇನ್ನು ಪ್ರಸನ್ನನಂತವರ ಕೈ ಮಗ್ಗದ ಉತ್ಪನ್ನಗಳ ಬಗ್ಗೆ ಏನು ಹೇಳೋಣ?






ಏನ್ ಹೇಳೋಕು ಗೊತ್ತಾಗ್ತಾ ಇಲ್ಲ, ಇದು ನಿಮ್ಮ ತಪ್ಪಲ್ಲ ಬಿಡಿ.