ಇಲ್ಲಿರುವ ಹನಿಗಳನ್ನು ಬರೆದವರು ಪತ್ರಕರ್ತ, ಕವಿ, ದಿ. ಬಿ.ಎಂ. ರಶೀದ್. ಅವರ “ಪರುಷ ಮಣಿ’ ಸಂಕಲನದಿಂದ ಆರಿಸಿ ಕೊಡಲಾಗಿದೆ.
ಗುಜರಿ ಅ೦ಗಡಿ 1 ಈ ಜಗತ್ತಿನಲ್ಲಿ ಗಾಯಕಿಯಂತೆ ಮೈ ಮರೆತು ಬದುಕು ‘‘ಜಗತ್ತು ನಿನಗೆ ಅಪೂರ್ವ ಸಂಗೀತ’’ ಶ್ರೋತೃಳಂತೆ ಮನ ತೆರೆದೆಯೋ ವಿಷಾದದಿಂದ ಉದ್ಗರಿಸಲಿರುವೆ; ‘‘ಜಗತ್ತು ಅಪೂರ್ವ ಸಂಗೀತ ನಿಜ ಆದರೆ, ಅವೆಷ್ಟೊಂದು ಅಪಸ್ವರಗಳು’’ 2 ನಿನ್ನೆದೆಯೊಳಗೆ ಗರ್ಭ ಕಟ್ಟಿದ ದುಃಖ ಹಡೆದದ್ದು ಆ ಕಣ್ಣೀರು ನನ್ನೆದೆಯ ಅಸಹಾಯಕ ಕೈಗಳು ಹೊಸೆದದ್ದು ಈ ಕವನದ ಕರವಸ್ತ್ರ ತಗೋ ಇದನ್ನು ಒರೆಸಿ ಪಕ್ಕಕ್ಕೆಸೆ ಅದನ್ನು 3 ಸಾವು ಸಹಿ ಮಾಡಿದ ಖಾಲಿ ಚೆಕ್ಕು ಈ ಬದುಕು! ಕಂಡ ಕನಸುಗಳೇ ಬರೆಯಬಹುದಾದ ಅಖಂಡ ಅಂಕೆಗಳು… ಆದರೆ ನನಗೆ ದಕ್ಕಿದ್ದು ಮಾತ್ರ ಖೋಟಾ ಚೆಕ್ಕು!! 4 ನಿನಗೆಲ್ಲವೂ ಇದೆ ‘ಇದೆ’ಯೆನ್ನುವುದೊಂದರ ಹೊರತು… ನನಗೆಲ್ಲವೂ ಇಲ್ಲ ‘ಇಲ್ಲ’ವೆನ್ನುವುದೊಂದರ ಹೊರತು… 5 ನಿನ್ನ ಹೃದಯದ ಬಾಗಿಲೆಂದು ಮುಚ್ಚಿಕೊಂಡವೋ ನಿರ್ದಾಕ್ಷಿಣ್ಯವಾಗಿ… ಹೆಂಡದಂಗಡಿಯ ಬಾಗಿಲಂದು ತೆರೆದುಕೊಂಡವು ಹಾರ್ದಿಕವಾಗಿ… 6 ನಾನು ತುಟಿ ತೆರೆದು ಕಾದಂದು ನೀನು ಕಿವಿ ಮುಚ್ಚಿ ನಡೆದೆ ನೀನು ಕಿವಿ ತೆರೆದು ನಿಂತಂದು ನಾನು ತುಟಿ ಮುಚ್ಚಿ ನಡೆದೆ 7 ಕಣ್ಣು ಬಿಡಲಾರದ ಅಂಧಕಾರದೊಳಗೆ ನನ್ನ ದಾರಿ ಕಳೆದು ಹೋಗಿದೆ ಬೆಳಗಿ ಮೊರೆವ ದಾರಿ ಕೊರೆವ ಮಿಂಚಿಗಾಗಿ ಕಾಯುತ್ತಿದ್ದೇನೆ 8 ಸಾವಿಗವಳು ಕೊನೆಯ ಕಂತನ್ನು ಒಪ್ಪಿಸಲಿದ್ದಾಳೆ ಒಪ್ಪಿಸಲಿ ಬಿಡು, ವಿಷಾದವಿಲ್ಲ! ಸಾವಿಗೆಷ್ಟೊಂದು ಕಂತುಗಳನ್ನು ತೆತ್ತಳವಳು, ಲೆಕ್ಕವಿಲ್ಲ!! 9 ಗತವನ್ನು ಕೆದಕಲು ನಾನು ಇಚ್ಛಿಸುವುದಿಲ್ಲ! ಯಾಕೆಂದರೆ ಗತದ ಹಿನ್ನೆಲೆಯಲ್ಲಿ ಭೂಗತಗೊಂಡ ನನ್ನ ಕನಸುಗಳಿವೆ 10 ಶಬ್ದಗಳು ಒಲ್ಲೆನೆಂದರೂ ನಿನ್ನ ಕವನಿಸಿದೆ ನಲ್ಲೇ ಆದರದು ಕವನವಾಗಲಿಲ್ಲ! ಒಂದು ಅಪಚಾರವಾಯಿತು. ]]>ನನಗೇನೂ ಇಲ್ಲ, ’ಇಲ್ಲ’ವೆನ್ನುವುದರ ಹೊರತು…
ನಿಮಗೆ ಇವೂ ಇಷ್ಟವಾಗಬಹುದು…





superb……….