ಶೋಭಾರಾಣಿ
ದಿಟ, ನನ್ನ ನಾಳೆಗಳಲ್ಲಿ ಅವನಿಲ್ಲ
ಆದರೂ ಇಳಿ ಸಂಜೆಯ ತಿಳಿ ಸೂರ್ಯನ ನೋಡಿದಾಗಲೆಲ್ಲ
ಬಿಡದೆ ನೆನಪಾಗಿ ಕಾಡುತ್ತಿದೆ ಅವನ ಗುಳಿಗಲ್ಲ
ನನ್ನ ತಿಳಿಗೊಳದಲ್ಲಿ ಒಲವಿನ ಅತಿಯೆಬ್ಬಿಸಿದವನು ಅವನೇ
ಇಂದು ಕೊಟ್ಟು ಪಡೆದ ಪ್ರೀತಿ ಮರೆತಂತೆ ನಟನೆ
ನಕ್ಕು ಹಗುರಾಗುತ್ತಿದ್ದೇನೆ ನನ್ನಷ್ಟಕ್ಕೆ ನಾನೇ
ಬಿಸಿ ಅಪ್ಪುಗೆಯ ಹಸಿ ಪಿಸುಮಾತುಗಳ ಲೆಕ್ಕವಿಟ್ಟಲ್ಲಿ ನಾನು
ಅಂಗೈಯೊಳಗೆ ಕೈಯಿಟ್ಟು ನಡೆದ ಹಾದಿಗೆ ಸಾಕ್ಷಿ ಕೇಳುತ್ತಿದ್ದಾನೆ ಅವನು
ಸಾಕ್ಷಿ ಕೊಟ್ಟು ಪಡೆದುಕೊಳ್ಳಲು ಉಳಿದಿರುವುದಾದರೂ ಏನು
ಕಣ್ಣಂಚಿನ ಕಣ್ಣೀರ ಕಂಡು ಕಾಣದಂತೆ ನಡೆದ ಆತ
ನಿಂತೇ ಇದ್ದೇ ತಿರುವಿನಲ್ಲಿ ಕೊನೆಗಳಿಗೆಯಲ್ಲೂ ಆಡಲಿಲ್ಲ ಒಂದು ಮಾತು
ನನ್ನ ನಿಷ್ಟಾಪಿ ಭಾವನೆಗಳಿಗೆ ಬಲವಂತದ ಗರ್ಭಪಾತ.







ಶೋಭಾರಾಣಿ ಜಿ, ಸುಂದರ ತುಮುಲಗಳ, ಒಲವುಗಳ ನವಿರು ಚೆಲ್ಲುತ್ತ, ಕೊನೆಗೆ ನಿಷ್ಪಾಪಿ ಗರ್ಭಪಾತಕ್ಕೂ ಎಳಸುವ ನಿಷ್ಪಾಪಿ ಮನ. ಸುಂದರ ಕವನ
ಚಂದದ ಪದಗಳಲ್ಲಿ ಸುಂದರ ಭಾವಗಳನ್ನಿಡಿದ ಕವಿತೆ.
sundara bhaavuka kavite