
ಸ್ಪೂರ್ತಿ ಗಿರೀಶ್
ಮುರಿದ ಕೊಳಲನು ಮತ್ತೆ ಕೂಡಿಸದ ಕಾಲಕರೆಯುತ್ತಿಹುದು ರಾಗವನು
ಯಾವುದೋ ಪ್ರಳಯದ ಸುಳಿಗೆ
ಹೂವಿಡಿದು
ಫಲವಿಡಿದು
ಮಣ್ಣಿಗೆ ಮರಳುವ ಹಣ್ಣೆಲೆ
ತೊಟ್ಟು ಕಳಚುವ ಮುನ್ನ
ಸಂತೈಸುವುದೇ ಬಳ್ಳಿಯ ಚಿಗುರು ಬೆರಳು
ಹೆಜ್ಜೆ ಕುಣಿತದಲ್ಲಿ ಗೆಜ್ಜೆ
ಚೆಲ್ಲಿಹೋಗುವುದ ಗುರುತಿಸಲೊಲ್ಲದೇ
ಉಸಿರುಗಟ್ಟಿ ಸೆಟೆದುಕೊಂಡ
ಈ
ಧಾವಂತದ ಬದುಕು
ನಡೆದಷ್ಟು ದಾರಿ
ಸವೆದ ಬೆನ್ನುಹುರಿ
ದೇಹಕ್ಕಂಟಿದ ಈ ಜೀವದ ಪರಿ
ಹೋಗುವುದಾದರು ಹೇಗೆ
ಈ
ಲೋಕದ ಎಲ್ಲಾ ಸೆಳೆತ ಮೀರಿ






0 Comments