ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಟನದ ’ರಜಾ-ಮಜಾ’ ಫೋಟೋ ಆಲ್ಬಂ

ಖ್ಯಾತ ಚಲನಚಿತ್ರ ನಟ ಹಾಗೂ ರಂಗಭೂಮಿ ನಿರ್ದೇಶಕ ಶ್ರೀ ಮಂಡ್ಯ ರಮೇಶ್ ಅವರ ನೇತೃತ್ವದ ನಟನಾ ರಜಾಮಜಾ ಬೇಸಿಗೆ ಶಿಬಿರ 2014ಕ್ಕೆ ನಾಡಿನ ಹೆಸರಾಂತ ಕವಿ ಶ್ರೀ ಏಚ್ ಎಸ್ ವೆಂಕಟೇಶ್ ಮೂರ್ತಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹೆಸರಾಂತ ನಟಿ ಶ್ರೀ ಭಾರ್ಗವಿ ನಾರಾಯಣ್, ಶ್ರೀಮತಿ ಸುಧಾ ಬೆಳವಾಡಿ ಹಾಗೂ ಯುವನಟಿ ಸಂಯುಕ್ತ ಭಾಗವಸಿದ್ದರು.
ಮನಮೋಹಕ ರಂಗಗೀತೆಗಳು, ಮೈ ಜುಮ್ಮೆನಿಸಿದ ಡೊಳ್ಳು ಕುಣಿತ, ಪುಟಾಣಿ ಮಕ್ಕಳ ಚಟಪಟ ಮಾತಿನ ನಿರೂಪಣೆ, ತುಂಬು ಗಾಂಭೀರ್ಯದ ‘ಕಂಸಾಯಣ’ ನಾಟಕ, ಪ್ರತಿಯೊಬ್ಬ ಅತಿಥಿಗಳ ಶ್ರೇಷ್ಠ ಮಾತುಗಳು, ಪ್ರೇಕ್ಷಕರ ಮಹಾಪೂರ, ‘ನಟನ’ದ ಧನ್ಯತಾ ಭಾವ, ಅದ್ಭುತ ರಂಗ ಸಜ್ಜಿಕೆ, ವರ್ಣ ರಂಜಿತ ಬೆಳಕು, ಕಾರ್ಯಕ್ರಮದ ಚೈತನ್ಯ ಶೀಲತೆ, ರಂಗಭೂಮಿಯ ಆದರ್ಶ…. ಒಂದಕ್ಕಿಂತ ಒಂದು ಸಕಾರಾತ್ಮಕ ಗುಣಗಳು ಅಲ್ಲಿ ಸ್ಪರ್ದೆಗಿಳಿದಿದ್ದವು. ‘ನಟನ’ದ ಕಾರ್ಯಕ್ರಮವೆಂದರೇ ಜನ ಮುಗಿಬೀಳುವುದು ಇದಕ್ಕಾಗಿಯೇ ಏನೋ… ಆರಿಸಿದ ಒಂದಷ್ಟು ಝಲಕ್ ನಿಮ್ಮ ಮುಂದೆ…

ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಚಿತ್ರ ಕೃಪೆ : ಮಂಡ್ಯ ರಮೇಶ್

‍ಲೇಖಕರು avadhi

22 April, 2014

1 Comment

  1. prabhakar joshi

    mandya ramesh makkala rangbhoomiya putani nakshatra

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading