ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಕ್ಕುಬಿಡು ಸುಮ್ಮನೆ!

ಕವಲು ದಾರಿ 

-ಮನು ಗುರುಸ್ವಾಮಿ

ಒಮ್ಮೆ ನಿಟ್ಟುಸಿರು ತೆಗೆದಿಕೋ,
ಇನ್ನೂ ಮುಂದೆ ನಮ್ಮ ಭೇಟಿ
ಸಾಧ್ಯವೇ ಇಲ್ಲವೆಂದು!

ವಯಸ್ಸು ಮೂವತ್ತರಿಂದ ಆರವತ್ತಾಗಿ
ಮುಂದೊಂದು ದಿನ ನೀ ನನ್ನ
ಎದುರುಗೊಂಡರೂ ಮಾತನಾಡಬೇಡ;
ನಕ್ಕುಬಿಡು ಸುಮ್ಮನೆ!

ನಮ್ಮಿಬ್ಬರಲ್ಲಿ ಯಾರಾದರೊಬ್ಬರು
ಮಣ್ಣಾಗಿ ಬಿಡುತ್ತೇವೆ ಕೊನೆಗೆ!

ನಾ ಸತ್ತರೆ, ನಾನಿಲ್ಲದೆ ಕಳೆದ
ಪ್ರತಿನಿಮಿಷಗಳ ಲೆಕ್ಕವಾಕು;
ನೀ ಸತ್ತರೆ, ನೀ ಕೊಟ್ಟ ಅಷ್ಟೂ
ಭರವಸೆಗಳ ಎಣಿಸಿಕೊಳ್ಳುವೆ!
ಇಬ್ಬರಲ್ಲಿ ಒಬ್ಬರಿಗಾದರೂ
ಪಶ್ಚಾತ್ತಾಪ ಕಾಡಬೇಕಲ್ಲವೆ?

ಅಥವಾ, ಏನೋ ಒಂದು ನಡೆದು
ಇಬ್ಬರೂ ಜೊತೆಯಾಗಿ ಬದುಕಿಬಿಟ್ಟರೆ
ಎದೆಯೆತ್ತರಕ್ಕೆ ಬೆಳೆದು ನಿಂತ
ಮಗನ ಕನಸುಗಳ ಪಟ್ಟಿ ಮಾಡುವ!

ಆ ಪಟ್ಟಿಯೊಳಗೆ ನೀನೊಬ್ಬಳೇ ಇದ್ದರೆ
ಅಥವಾ ನಾನೊಬ್ಬನೇ ಇದ್ದರೆ
ನಮ್ಮ ದಾರಿ ಮತ್ತೆ ಇಬ್ಭಾಗವಾಗಲಿ;
ಯೋಚಿಸುವುದೇ ಬೇಡ!

ಒಂದುವೇಳೆ ನಾವಿಬ್ಬರೂ ಇದ್ದರೆ,
ಕೈ ಕುಲುಕಿ ನಮ್ಮ ಮನಸ್ತಾಪಗಳಿಗೆ
ರಾಜಿನಾಮೆ ಕೊಟ್ಟು ಬಿಡುವ!

ಗಿಡಕ್ಕೆ ಬೇರೆಷ್ಟು ಮುಖ್ಯವೋ
ಅಷ್ಟೇ ಮುಖ್ಯವಲ್ಲವೇ ಎಲೆಗಳು?!”

‍ಲೇಖಕರು Admin

12 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading