ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಕ್ಕಿದೆ ಚಳಿ!

ಚಳಿಗವನಗಳು
-ಗೋವಿಂದ ಹೆಗಡೆ

ಗಡಗಡ ನಡುಗಿಸ್ತಿದೆ
ಬೆಂಗಳೂರಿನ ಚಳಿ
ಕರೆದಿರಾ ಯಾರಾದ್ರೂ
“ಎಲ್ಲಿ, ನೀ come-ಬಳಿ “

ಏರಿಸ್ತಾ ಒಂದೊಂದೇ ಪೆಗ್ಗು
ಹೇಳ್ತಾನೆ ಜಗ್ಗು
“ಏನ್ಮಹಾ ಚಳಿ, ಬೇಕಿಲ್ಲ ರಗ್ಗು !”

ಮೀಸೆ ಕುಣಿಸಿ
ಹೇಳ್ತಿದೆ ಹುಳು –
“ನಾನ್ಯಾಕೆ ಹೊದ್ದೆ
ಕಂಬಳಿ, ತಿಳೀತೇ?”

ಕೈಗವಸು, ಮೈಮುಚ್ಚುವ ಬಟ್ಟೆ, ತಲೆಯ ಮೇಲೆ ‘ಹುಡೀ’
ಕೊರೆಯುವ ಚಳಿಗೆ ಬೆಂಗಳೂರಿಗ ಆಗಿದ್ದಾನೆ ‘ಝಾಂಬಿ’

ಕೊರೆಯುವ ಚಳಿಯಿಂದ ಪಾರಾಗಲು
ಈ ಮರ ಗಿಡ ಬೆಟ್ಟ
ಪಾಪ, ಮಂಜನ್ನೇ ಹೊದ್ದು
ಥರಥರಿಸಿವೆ!

ಮಂಜಿನ ಮನೆಯಾಗಿದೆ ಮೂಡಣದ ಬಯಲು
ಸೂರ್ಯನಿಗೂ ನಡುಕ, ಹೊದ್ದಿದ್ದಾನೆ ಮುಗಿಲು

ಏರುತ್ತಿದೆ ಚಳಿ, ಹೊದೆ
-ಸುವೆ ಹನಿಗಂಬಳಿ
ಮುಖ ಸಡಲಿಸಿ ನಗಲು,
ಇಟ್ಟಂತೆ ಕಚಗುಳಿ!

ಬಿಗಿದಿದೆ ಮುಖ
ಕಟಕಟಿಸಿವೆ ಹಲ್ಲು
ಈ ಚಳಿಯಲ್ಲಿ
ಹೇಗೆ ಸಾಧ್ಯ ನಗಲು?!

ಹೊದ್ದು ಮಲಗಿದ್ದಾಳೆ ಇಳೆ,
ಮಂಜುಗಂಬಳಿ
ತನ್ನ ಬಲ ಹೆಚ್ಚಿತೆಂದು
ನಕ್ಕಿದೆ ಚಳಿ!

“ಚಿಟಿಕೆ ಹೊಡೆಯೋದ್ರಲ್ಲಿ ಇಡೀ ಜಗತ್ತನ್ನು ಸುತ್ತಿ ಬರಬಲ್ಲೆ”
ಜಂಬ ಕೊಚ್ಚಿದ ಗಂಡನಿಗೆ, ಹೇಳಿದಳು ಹೆಂಡತಿ –
“ಈ ಚಳಿಯಲ್ಲಿ ತಣ್ಣೀರು ಸ್ನಾನ ಮಾಡಿ, ಸಾಕು!”

ಹತ್ತೂ ಕತ್ತುಗಳಿಗೆ ಮಫ್ಲರ್ ಸುತ್ತುತ್ತ
ಗೋಳಿಟ್ಟ ದಶಕಂಠ-
‘ಹತ್ತು ತಲೆಗಳನ್ನು ಬೆಚ್ಚಗಿಟ್ಟುಕೊಳ್ಳುವ ಕಷ್ಟ
ನನ್ನ ಶತ್ರುವಿಗೂ ಬೇಡ!’

‍ಲೇಖಕರು Admin

12 December, 2025

1 Comment

  1. Kotresh Arsikere

    ಚೆಂದ ಇವೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading