ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಧ್ಯಾನ ನಿಲ್ಲುವುದೇ ಇಲ್ಲ..

ಬಿರುಕು

-ನಿರ್ಮಲ ಶೆಟ್ಟರ

ಪಕ್ಕದಲ್ಲೇ ಮಲಗಿದ್ದರೂ
ರಾತ್ರಿ ಇಡೀ ಧ್ಯಾನಿಸುವ ಅವನಿಗೆ
ಒಲಿಯುವುದು ಅಪರೂಪವೇ ನಾನು
ಧ್ಯಾನ ನಿಲ್ಲುವುದೇ ಇಲ್ಲ

ಮಣ್ಣ ನೆಲವನ್ನು
ಸಗಣಿ ಸಿಮೆಂಟು ಗಾರೆ ಗಚ್ಚು
ಬಡಿದು ಗಟ್ಟಿ ಮಾಡಿದರು
ಸಣ್ಣ ಬಿರುಕು ಸಾಕು
ಈ ಪ್ರೀತಿ ಮೇಲೆದ್ದು ಬರಲು
ಹಿಂದೆ ಯುದ್ಧವು

ಯಾಕೆ ಪ್ರೀತಿ ಹೆಚ್ಚಿದಾಗೆಲ್ಲ ಯುದ್ಧಗಳು
ಎದ್ದು ಕುಣಿಯುತ್ತವೆ
ಮಂಚಿನಿಂದಲೂ ಹಾಗೆ
ನಡೆದು ಬಂದದ್ದಲ್ಲವೆ

ನಕ್ಷತ್ರಗಳ ಹಿಂದೆ ಚಂದ್ರ ಅವಿತು
ಆಟವಾಡುವ ಪ್ರೀತಿ
ಅವುಗಳ ಸುಡಲೆಂದು
ಹಠ ತೊಟ್ಟು ಸೂರ್ಯನುದಯಿಸುವ ರೀತಿ

ಅವನ ಹೃದಯಕೆ ಎರಡು ಮುಖಗಳು
ಯುದ್ಧದ ಬಣ್ಣ ಕಪ್ಪು ಮತ್ತು ಬಿಳಿ
ಪ್ರೀತಿ ಬಣ್ಣ ತರೇವಾರಿ
ಯುದ್ಧಕ್ಕಿಂತಲೂ ಅಪಾಯಕಾರಿ ಈ ಪ್ರೀತಿ

‍ಲೇಖಕರು Admin

17 September, 2025

1 Comment

  1. Shravanakumari TS

    ಚಂದವಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading