ಧರ್ಮಸ್ಥಳ, ತಿರುಪತಿ, ಶಬರಿಮಲೈ.. ಯಾರ್ರೀ ರೈಟ್.. ರೈಟ್..

ಈ ಮ೦ತ್ರಿಮ೦ಡಲವನ್ನು ವಿಸರ್ಜಿಸಿ ಆ ದೇವರುಗಳನ್ನೇ ನೇಮಿಸಬಹುದಿತ್ತು

vivekananda hk

ವಿವೇಕಾನಂದ ಹೆಚ್ ಕೆ

ಧರ್ಮಸ್ಥಳಕ್ಕೆ ಹೋಗಿಬ೦ದರೆ ವಯಸ್ಸಾಗುತ್ತಿರುವ ಮಗಳಿಗೆ ಮದುವೆಯಾಗುತ್ತದೆ,

ತಿರುಪತಿಗೆ ಹೋಗಿಬ೦ದರೆ ನಿರುದ್ಯೋಗಿ ಮಗನಿಗೆ ಕೆಲಸ ಸಿಗುತ್ತದೆ,
ಶಬರಿಮಲೈಗೆ ಹೋಗಿಬ೦ದರೆ ಅಪ್ಪ ಅಮ್ಮನ ಆರೋಗ್ಯ ಸುಧಾರಿಸುತ್ತದೆ,
ಸುಭ್ರಮಣ್ಯಕ್ಕೆ ಹೋಗಿಬ೦ದರೆ ನಷ್ಟದ ವ್ಯವಹಾರ ಲಾಭಗಳಿಸುತ್ತದ
ಶಿರಡಿಗೆ ಹೋಗಿಬ೦ದರೆ ಮಗಳು ಫಸ್ಟ್‌ಕ್ಲಾಸ್ ನಲ್ಲಿ ಪಾಸಾಗುತ್ತಾಳೆ,
ಮ೦ತ್ರಾಲಯಕ್ಕೆ ಹೋಗಿಬ೦ದರೆ ವೃತ್ತಿಯಲ್ಲಿ ಬಡ್ತಿ ಸಿಗುವುದು ಗ್ಯಾರಂಟಿ,
ಶನಿದೇವರ ದರ್ಶನ ಮಾಡಿದರೆ ಓಡಿ ಹೋಗಿರುವ ಗ೦ಡ ಮರಳಿ ಮನೆಗೆ ಬರುತ್ತಾನೆ,
13335686_10153710345037773_3959555079002106530_nವ್ಯೆಷ್ಣವೀ ದೇವಿಯ ದರ್ಶನ ಮಾಡಿದರೆ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ,
ಕಾಶಿಗೆ ಹೋಗಿಬ೦ದರೆ ಎಲ್ಲಾ ಪುಣ್ಯ ಫಲಗಳೂ ಸಿಗುತ್ತವೆ,
ಸೋಮವಾರ ಉಪವಾಸ ಮಾಡಿ ಅರಳೀಮರ ಸುತ್ತಿದರೆ ಹಣಕಾಸಿನ ಸಮಸ್ಯೆ ಪರಿಹಾರವಾಗುತ್ತದೆ,
ಹೌದು, ಇದು ನಿಜವೇ ಆಗಿದ್ದಲ್ಲಿ ನಮಗೂ ಸ೦ತೋಷವೇ,
ವಿಧಾನಸೌಧವನ್ನು ಕಿತ್ತೊಗೆದು ಮೇಲಿನ ಸ್ಥಳಗಳನ್ನೇ ಆಡಳಿತ ಕೇ೦ದ್ರಗಳಾಗಿ ಘೋಷಿಸಬಹುದಿತ್ತು,
ಈ ಮ೦ತ್ರಿಮ೦ಡಲವನ್ನು ವಿಸರ್ಜಿಸಿ ಆ ದೇವರುಗಳನ್ನೇ ನೇಮಿಸಬಹುದಿತ್ತು,
ಆಸ್ಪತ್ರೆಗಳನ್ನು ಹೊಡೆದುಹಾಕಿ ದೇವಮ೦ದಿರಗಳನ್ನೇ ಕಟ್ಟಬಹುದಿತ್ತು,
ನಿಮ್ಮ ನಿಮ್ಮ ಅರಿವಿನಲ್ಲಿ,ನಿಮ್ಮ ನಿಮ್ಮ ಅನುಭವದಲ್ಲಿ,
ದ್ಯೆರ್ಯವಾಗಿ,ಆತ್ಮಸಾಕ್ಷಿಗೆ ಅನುಗುಣವಾಗಿ ಯೋಚಿಸಿ,ಇದು ಸಾಧ್ಯವೆ, ?,
ಕೆಲವರು ಹೇಳುತ್ತಾರೆ, ಇದು ನಮ್ಮ ನ೦ಬಿಕೆ, ಆ ಸ್ಥಳಗಳಿಗೆ ಹೋದಾಗ,
ನಮಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ. ಇದು ಸ್ವಲ್ಪಮಟ್ಟಿಗೆ ನಿಜವಿರಬಹುದು,
ನನಗೆ ಗೊತ್ತು, ಈ ಕಾರಣಕ್ಕಾಗಿ ನೀವು ನನ್ನನ್ನು ದ್ವೇಷಿಸಬಹುದು, ಮೂರ್ಖನೆನ್ನಬಹುದು,
ಆದರೂ ನನ್ನ ಅನಿಸಿಕೆ ವ್ಯಕ್ತಪಡಿಸುತ್ತೇನೆ,
ಮೌಡ್ಯದಿ೦ದ ಬರುವ/ಸಿಗುವ ಮಾನಸಿಕ ನೆಮ್ಮದಿ,
ನ೦ಬಿಕೆ ಎನ್ನುವ ಭ್ರಮೆ ತಾತ್ಕಾಲಿಕ ಮತ್ತು ವಿನಾಶಕಾರಿ,
ಅದೇ ನಿಮ್ಮ ಜ್ಙಾನದಿ೦ದ, ಧ್ಯಾನದಿಂದ, ಯೋಗದಿ೦ದ ಸಿಗುವ,
ನೆಮ್ಮದಿ ಶಾಶ್ವತ ಮತ್ತು ನ್ಯೆಜವಾದದ್ದು.
ಇತರರ ಮಾತು,ಪ್ರವಚನಗಳಿಗೆ ಕಿವಿಗೊಡದೆ ನಿಮ್ಮ ಅರಿವಿನಲ್ಲೇ ನಿರ್ಧಾರ ಕ್ಯೆಗೊಳ್ಳಿ.
ಹೇಗಿದ್ದರೂ ಆ ಸ್ವಾತಂತ್ರ್ಯ ನಿಮಗಿದೆ.
ಜ್ಙಾನ ಯಾರಪ್ಪನ ಆಸ್ತಿಯೂ ಅಲ್ಲ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.

‍ಲೇಖಕರು Admin

June 9, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shama, Nandibetta

    ಹೀಗಾಗೋದಕ್ಕೆ ಇನ್ನೂ ಅದೆಷ್ಟು ಶತಮಾನಗಳೋ.. ??? ಆ ಕಾಲದಲ್ಲಿ ಒಮ್ಮೆ ಹುಟ್ಟಿ ಬರುವಾಸೆಯಿದೆ ನನಗೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: