‘ದ್ವೀಪ’ ಫೋಟೋ ಆಲ್ಬಂ…

ಶುಭ ಗೌರಿ

Photo Courtesy : Adithi

‘ದ್ವೀಪ’ ಒಂದು ರೀತಿ ನಿರಾಭರಣ ಸುಂದರಿಯಂಥ ತೀವ್ರವಾಗಿ ಅಂತರಂಗಕ್ಕೆ ಇರಿಯುವ ನಾಟಕ. ಪುತ್ತೂರಿನ ಚಂದ್ರಸೌಗಂಧಿಕ ದಿಂದ ಆಯೋಜಿಸಲಾದ ‘ಆಯನ ಮನೆ’ ನಾಟಕ ತಂಡ (ಪ್ರಭಾಕರ್ ಕಾಪಿಕಾಡ್, ಚಂದ್ರಹಾಸ ಉಳ್ಳಾಲ್) ದವರು ನಟಿಸಿದ ರಂಗಭೂಮಿಯ ಈ ಕಾಲದ ತುರ್ತಿಗೆ ಒಪ್ಪಿಸಿದ ಮಾದರಿಯಂಥ ಸಣ್ಣ ಕೊಡುಗೆ.

ದ್ವೀಪ ದೊಳಗೆ ಅಮಾನುಷವಾಗಿ ಶಿಕ್ಷೆಯನ್ನು ಅನುಭವಿಸುತ್ತಾ ಹಲವು ವರ್ಷಗಳಿಂದ ತಾವು ಅನುಭವಿಸುತ್ತಿರುವ ಹೀನಾಯ ಜೀವನಕ್ಕೆ ಸಾರ್ಥಕತೆ ಯನ್ನು ಹುಡುಕುತ್ತಿರುವಂತೆ ಬದುಕುತ್ತಿರುವ ಇಬ್ಬರು ರಾಜಕೀಯ ಖೈದಿಗಳು. ಅವರು ಉಕ್ಕುವ, ಬಿಕ್ಕುವ, ತೊಳಲಾಡುವ, ಉಡುವ, ಉಚ್ಚೆಹೊಯ್ಯವ, ಹುಡುಗಾಟಿಕೆ ಯಾಡುವ, ತಾಲೀಮು ನಡೆಸುವ ಎಲ್ಲ ಶಕ್ತಿಯನ್ನು ಹತೋಟಿಯಲ್ಲಿಡಲು, ಹಿಂಸಿಸಲು ಶತಪ್ರಯತ್ನ ನಡೆಸುತ್ತಿರುವಂಥ ರೇಜಿಗೆ ಹುಟ್ಟಿ ಸುವ, ಹಿಂಸೆ ಅನ್ನಿಸುವ ಜೈಲಿನ ಅತಿ ಸಣ್ಣ ಹೀನಾಯ ಕೋಣೆ.

ಇಂಥ ಕರಾಳ ಸ್ಥಿತಿ ಯಲ್ಲಿದ್ದರೂ ಅವರಿಂದ ನುಡಿಯಲ್ಪಡುವ Nobel ಮಾತುಗಳು’ we honor them to those honor belongs to” ಮತ್ತು ಅವರ ಎದೆಯಲ್ಲಿ ಬೆಳೆಯುತ್ತಿರುವುದು ಪ್ರಭುತ್ವವನ್ನು ಪ್ರತಿಭಟಿಸುವ ವಸ್ತುವು ಳ್ಳ ನಾಟಕ ‘ಅಂತಿಗೊನೆ’! ಇದು ಎಲ್ಲವನ್ನು ಕಳಕೊಂಡವರ ಹೋರಾಟತನದ ಆಳಕ್ಕೆ ಕುರುಹು. ಬದುಕಲ್ಲಿ ಏನೂ ಉಳಿದಿಲ್ಲದೆ ಬರಿಯ ಆತ್ಮಬಲ ಮತ್ತು ಸ್ನೇಹಬಲದಲ್ಲಿ ಬದುಕುವ ಪಾತ್ರಗಳ ಹಾಗೇ ನಾಟಕ ದ್ವೀಪವು ಕೂಡ ವೇದಿಕೆಯ ಆಡಂಬರಗಳಿಲ್ಲದೆ ಕಲಾವಿದರ ಅಭಿನಯ, ಸಂಭಾಷಣೆಗಳ ಕೆಚ್ಚು, ವಿಶಿಷ್ಟ ಶೈಲಿಯ ನಾಟಕದ ಸಂಯೋಜನೆ – ಸಂರಚನೆಗಳ ಸೌಧದಲ್ಲಿ ನಿಂತಿದೆ.

ಪ್ರಯೋಗಶೀಲ ನಿರ್ದೇಶಕ ಲಕ್ಷ್ಮಣ ಕೆ.ಪಿ. ಅವರ ನಿರ್ದೇಶನ ವೇದಿಕೆಯ ಭಾರವನ್ನು ಹಗುರಗೊಳಿಸಿ, ನಾಟಕದ ತೂಕ ಹೆಚ್ಚಿಸಿದೆ. ಆಪ್ತ ರಂಗಭೂಮಿಯಲ್ಲಿ, ಯಾರ ಮನೆಯಂಗಳ, ಟೆರೇಸ್ಗಳಲ್ಲೂ ಪ್ರದರ್ಶಿಸಲು ಸಾಧ್ಯವಾಗುವಂಥ ಒಟ್ಟು ತಂಡದ ತಯಾರಿ ‘ದ್ವೀಪ’ ನಾಟಕದ ಹೆಗ್ಗಳಿಕೆ. ಅಂತಿಗೊನೆ ಸ್ತ್ರೀ ಪಾತ್ರವನ್ನು ಮಾಡಲು ತಕರಾರು ಮಾಡುವ ಒಬ್ಬ ಖೈದಿಯನ್ನು ನಾಟಕದ ಇನ್ನೋಬ್ಬ ಖೈದಿ ಒಪ್ಪಿಸುವ ಸೊಗಸಿಗೆ, ದ್ವೀಪದೊಳಗಿನ ಶಿಕ್ಷೆಯ ಬದುಕಲ್ಲಿ ಜೀವನ ಪ್ರೀತಿ ಹೇಗಿರುತ್ತದೆಂಬ ಕುತೂಹಲಕ್ಕೆ, ನೋವನ್ನು ಮರೆತು ಕ್ಷಣದಲ್ಲಿ ತಲ್ಲೀನವಾಗಬಲ್ಲ ರಹಸ್ಯ ದ ಅನುಭವಕ್ಕೆ ಚಂದ್ರಹಾಸ ಉಳ್ಳಾಲ ‘ಮತ್ತು ಪ್ರಭಾಕರ ಕಾಪಿಕಾಡ್ ಅಭಿನಯದ ಕಾಂಬಿನೇಶನಿನ ದ್ವೀಪ’ ನಾಟಕ ನೋಡಬೇಕು.

ನಾಟಕದ ಸ್ವಲ್ಪ ಹೊತ್ತು ನಿನ್ನನ್ನು ಸ್ತ್ರೀ ಪಾತ್ರಧಾರಿ ಅಂತ ಗೇಲಿಮಾಡಬಹುದು, ಆಮೇಲೆನಿದ್ದರೂ ಪ್ರೇಕ್ಷಕರು ನಾಟಕವನ್ನು ಕೊಂಡಾಡುವುದು ಅಂತಿಗೊನೆಯ ನ್ಯಾಯಪರ ಹೋರಾಟಕ್ಕೆ, ಧೈರ್ಯ ಕ್ಕೆ..’ ‘ಕಲಾವಿದರು ಸೂಕ್ಷ್ಮಾಣು ಜೀವಿಗಳ ಹಾಗೆ ನಾಶ ಮಾಡದಿದ್ದರೆ ಅಸಂಖ್ಯ ಸಂಖ್ಯೆ ಯಲ್ಲಿ ಬೆಳೆದು ಕುತ್ತು ತರುತ್ತಾರೆ” ಇತ್ಯಾದಿ ಮೆಲುಕಲು ಉಳಿವ ಮಾತುಗಳು ನಾಟಕದ ಹೆಚ್ಚು ಗಾರಿಕೆ. ಇದೆಲ್ಲದರ ಮಧ್ಯೆ ಸುದೀರ್ಘ ವರ್ಷ ಗಳಿಂದ ಜತೆಯಲ್ಲಿದ್ದ ಒಬ್ಬ ನಿಗೆ ಬಿಡುಗಡೆ ಮಾಗುವ ಸುದ್ದಿ ಸಿಕ್ಕಾಗ ಇಷ್ಟು ವರ್ಷ ದ ಬಾಂಧವ್ಯ ದಲ್ಲಿ ತಣ್ಣಗೆ ಮೂಡುವ ಬಿರುಕು, ಹೋರಾಟದ ಬದ್ಧತೆ ಯಲ್ಲಿ ಹಾಯುವ ಡೊಂಕು ನಾಟಕದ ನಂತರವೂ ಕಾಡುತ್ತದೆ.

ಮಧ್ವರಾಜ್ ನೀನಾಸಂರ ಬೆಳಕು ಮತ್ತು ತಂಡದ ನಿರ್ವಹಣೆ ಕೂಡ ನಾಟಕದ ಯಶಸ್ವಿಯಲ್ಲಿ ಪಾಲು ಪಡೆಯುತ್ತದೆ.

ವಿನೂತನ ನಾಟಕ ಆಯೋಜಿಸಿದ ಚಂದ್ರಸೌಗಂಧಿಕ ಬಳಗಕ್ಕೆ ಅಭಿನಂದನೆ ಮತ್ತು ಕ್ರೃತಜ್ಞ ತೆಗಳು.

‍ಲೇಖಕರು Admin

September 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: