ನಾಚಿಕೆ ಕಣ್ಣು ರೆಪ್ಪೆ ಮುಚ್ಚಿದ ಸದ್ದು
ಪ್ರವರ ಕೊಟ್ಟೂರು
ನಿನ್ನೆ ರಾತ್ರಿ ನೆನಪಿದೆಯೆ ಗೆಳತಿ
ಹಾಸಿಗೆಯ ಮೇಲಿದ್ದ ಏರುಸಿರು,
ಕತ್ತಲೂ ನಾಚುವಂಥ ಪಿಸುಮಾತು
ನಾ ನಿನಗೆ ಹೇಳಿದ್ದು
ನೀ ನನಗೆ ಹೇಳಿದ್ದು
ಮೌನಕ್ಕೆ ಶರಣಾಗಿ ಬಿಸಿಯುಸಿರು
ಬಿಡುತ್ತಾ ತುಟಿಯ ಮೆತ್ತಗೆ ಕಚ್ಚಿದ್ದು,
ಹಸಿ ಹಸಿ ಮೈಯ ತಬ್ಬಲು
ಯಾರೋ ಕಣ್ಣು ರೆಪ್ಪೆಗಳ ಮುಚ್ಚಿದ ಸದ್ದು,
ಕತ್ತಲ ಹೊರತು ಇದ್ದದ್ದು ನಾವೇ ತಾನೆ,
ನಿನ್ನ ನಾಚಿಕೆ ಇರಬೇಕು!
ಮೆಲ್ಲಗೆ ಕದ್ದು ನೋಡುತ್ತಾ
ಹೊರ ಜಾರಿದ್ದು ಎದೆ ಮೇಲಿನ ಬೆವರು,
ಹೊರಗೆ ಮೈ ಕೊರೆವ ಚಳಿ ಇದ್ದರೂ,
ಬೆವೆತ ದೇಹಗಳ ನಡುವೆ
ಕೊನೆಗೂ ಸುಟ್ಟದ್ದು
ರಾತ್ರಿಯ ಏಕಾಂತವ ಹಿಡಿ ಹಿಡಿಯಾಗಿ
ಕಾಡಿದ್ದ ವಿರಹವನ್ನು,
ಮತ್ತೆ ನಾಳೆ ಕಾಡಬಹುದೆಂದು
ಗೊತ್ತಿದ್ದರೂ,
ತಂಡಿ ಗಾಳಿಯು ಸುತ್ತ
ಸುತ್ತಿದ್ದರೂ.
ರಾತ್ರಿಗೆ ಚಳಿಯ ಮೈಥುನ
ಕಣ್ಣೆವೆಯಿಕ್ಕದಂತೆ ಕಾಡಿದ್ದು ಮಾತ್ರ ಸತ್ಯ,
ಅಲ್ಲಿಯವರೆಗೂ
ಮೈಲಿಗೆಯಾಗಿದ್ದ ದೇಹಗಳು
ಮಡಿಗೊಂಡಿದ್ದೇ
ರಾತ್ರಿಯಲಿ ಮಿಂದಾಗ.







ಮೈಲಿಗೆಯಾಗಿದ್ದ ದೇಹಗಳು
ಮಡಿಗೊಂಡಿದ್ದೇ
ರಾತ್ರಿಯಲಿ ಮಿಂದಾಗ………
ನಿಮ್ಮ ಕಾವ್ಯದ ದ್ವನಿಯಲ್ಲಿ ಬಿಸಿ ಬಿಸಿಯಾದ ಭಾವನೆಗಳಿವೆ…. ಆ ಭಾವನೆಗಳಿಗೆ ಜೀವಂತಿಕೆ ಕೊಡುವ, ಅವು ಓದುಗರನ್ನು ಮೈನವಿರೇಳಿಸುವ ತಾಕತ್ತು ಇದೆ….ಕಾವ್ಯ ಹೊರಹೊಮ್ಮುವುದೇ ಕಾಲದ ಜೊತೆ ಮೈ ಬೆಸೆದು ಕೊಂಡಾಗ ….
ಅಭಿನಂದನೆಗಳು …
ರವಿವರ್ಮ ಹೊಸಪೇಟೆ
dear pravara
nimma kavana oduvude majavaadaddu, namma B R Lakshmana raayara next generation taavu..
\wonderful
Olle kavi agtiya munde 🙂 super ag ide, kavyada hinde iruva gelathi yaru???
ನವುರಾದ, ತಿಳಿ-ಘಾಡತೆಗಳ ಮಿಳಿತದ ಕವನ
ಪ್ರೀತಿ, ಪ್ರೇಮ, ಪ್ರಣಯ ಮತ್ತು ಪ್ರವರ. ನಿನ್ನ ಭಾವ-ಭಾಷೆ ಬೆಚ್ಚಗಾಗಿಸುತ್ತದೆ ಓದುಗರನ್ನ!!!
ಚೆನ್ನಾಗಿದೆ ಕವಿತೆ… ಹಸಿ ಹಸಿ ಬಿಸಿ ಬಿಸಿ ಪದಗಳು ಮತ್ತು ಭಾವನೆಗಳಿವೆ… ನೈತಿಕತೆಯ ಕೋಟೆಯ ಕತ್ತಲೊಳಗೆ ಎರಡು ದೇಹಗಳು ಮೀಯುವುದು ಮಡಿಗೊಳ್ಳುವ ಪ್ರತೀಕವೇ ಹೌದು… ಅದು ಸುಳ್ಳಾಗಿದ್ದರೆ ಅಥವಾ ನಿಗ್ರಹಿಸುವ ಒಂದು ಸೃಷ್ಟಿದತ್ತ ವರವಾಗಿದ್ದರೆ ಅಥವಾ ಅಸಹ್ಯ ಪ್ರಕ್ರಿಯೆಯಾಗಿದ್ದರೆ ಕಣ್ಣು ಕಣ್ಣು ನೋಡುವಾಗ, ತುಟಿಗೆ ತುಟಿಗೆ ಸೋಕುವ ಜಾಗದಲ್ಲಿ ಕೆತ್ತಲ್ಪಟ್ಟು, ಕಾಮತೃಷೆಯಂಗಗಳ ಎರಡು ಬೊಂಬೆಗಳ ನಡುವೆಯೇ ಕೆತ್ತಿಡುತ್ತಿರಲಿಲ್ಲ. ಹೆಣ್ಣಿಗೆಲ್ಲೋ ಗಂಡಿಗೆಲ್ಲೋ ಇರಬೇಕಾಗಿತ್ತು.. ಕಾಮವೆಂಬುದೂ ಪ್ರೇಮವೇ… 🙂
super pravara ji
abbaa… tumba chennagide …
sakkath hot maga…
ati suksmathe,
ಪ್ರವರ ಚೆಂದದ ಕವಿತೆ. ಹಸಿ-ಬಿಸಿಯ ಕನಸುಗಳಿಗೆ ಹೊಳಪು ಕೊಟ್ಟು ಓದುಗರ ಮನಗಳಿಗೆ ಕಿಡಿ ಹೊತ್ತಿಸಿದ್ದೀರಿ. ಕವಿತೆ ಒಂದು ಚುಂಬಕ ರೋಮಾಂಚಕ ಕಾವ್ಯದಂತೆ ಕಂಡರೂ, ಮಿಥುನ ಮತ್ತು ಕಾಮಗಳಲ್ಲಿನ ಗಾಢವಾದ ಪ್ರೇಮವನ್ನು ಶೋಧಿಸಿದಂತಿದೆ. ಕಾಮವಿಲ್ಲದ ಪ್ರೇಮ ಅಪರಿಪೂರ್ಣ ಎಂಬುದು ನಿರ್ವಿವಾಧಿತ ಸತ್ಯ! ಮೈಥುನದಿ ಮಡಿಗೊಳ್ಳುವ ಪ್ರಸ್ತುತಿ ವಿಶಿಷ್ಟವಾಗಿ ಉಳಿಯುತ್ತದೆ.