ದೀಪದ ಮಲ್ಲಿ
ನಕ್ಷತ್ರಗಳು ಉರುಳುವ ಹೊತ್ತಿಗಾಗಿ
ಮುದ್ದು ಕಂಗಳ ನೆಟ್ಟು
ಚಾಕೊಲೇಟು, ಹೊಸ ಅಂಗಿ,
ಕನಸಿನ ಸೈಕಲ್ಲು, ಹೆಚ್ಚಿನ ಅಂಕ..
ಇನ್ನೂ ಏನೇನೋ..
ಪಟ್ಟಿ ಹಿಡಿದು
ಚೌಕಾಸಿಗಿಳಿದಿದ್ದ
ಸಿರಿಯಾದ ದೇವರ ಮಕ್ಕಳು
ಇಂದು
ಧರ್ಮದ ಗುತ್ತಿಗೆದಾರರಲ್ಲಿ
ಜೀವಭಿಕ್ಷೆಗಾಗಿ ಮೊರೆಯಿಡುತ್ತಿವೆ.
ನನಗೆ ಗೊತ್ತು,
ನನ್ನ ಗುಂಡಿಗೆಗಿಂತ
ನಿಮ್ಮ ಗುಂಡು ಬಲಶಾಲಿ
ಆದರೂ
ಇಂದಲ್ಲ ನಾಳೆ
ನಿಮ್ಮ ಕಲ್ಲು ಎದೆಯೊಳಗೆ
ನಡುಕ ಹುಟ್ಟಲಿದೆ
ನನ್ನ ಕಣ್ಣು ಎಂದೋ ಹರಿಸಿದ
ವಜ್ರಕಾಂತಿಗೆ
#ಸಿರಿಯಾದಲ್ಲಿ_ಶಾಂತಿ_ನೆಲೆಸಲಿ






0 Comments