ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವರ ಜಾಗ 

ಶಿವಕುಮಾರ್  ಮಾವಲಿ 

ದೇವರ ಜಾಗದ ಬಗ್ಗೆ
ಮನುಷ್ಯರು ದಾವೆ ಹೂಡಬೇಕು

ದೇವರ ಜಾಗದ ಬಗ್ಗೆ
ಮನುಷ್ಯರು ವಾದ- ವಿವಾದ ಮಾಡಬೇಕು

ದೇವರ ಜಾಗದ ಬಗ್ಗೆ
ಮನುಷ್ಯರೇ ಷರಾ ಬರೆಯಬೇಕು

ದಾವೆ , ವಾದ, ವಿವಾದಗಳು ದೇವರಿಗೆ ಅಪತ್ಯ
ಇವೆಲ್ಲ ಮನುಷ್ಯನೇ ಮಾಡಬೇಕಿರುವುದು ಸತ್ಯ

ಇದರಿಂದಾಗಿ ದೇವರು ದೇವರಾಗಿ ಉಳಿಯುತ್ತಾನೆ
ಮನುಷ್ಯ ದೇವರ ಮೊರೆ ಹೋಗುತ್ತಾನೆ

ದೇವರು ನಮ್ಮ ಮೇಲೆ , ನಾವು ಅವ‌ನ ಮೇಲೆ
ಇಬ್ಬರೂ ಪರಾವಲಂಬಿಗಳೇ

ಹಾಗಾಗಿ…
ಮನುಷ್ಯ ದೇವರನ್ನು ಕಾಪಾಡಿಕೊಳ್ಳಬೇಕು
ದೇವರು ಮನುಷ್ಯನನ್ನು ಕಾಪಾಡಿಕೊಳ್ಳಬೇಕು

‍ಲೇಖಕರು avadhi

10 November, 2019

3 Comments

  1. T S SHRAVANA KUMARI

    ಚೆನ್ನಾಗಿದೆ

  2. ಇತ್ಯಾದಿ

    ಮನುಷ್ಯ ದೇವರನ್ನು ಕಾಪಾಡಿಕೊಳ್ಳಬೇಕು.. ಎಂತಹ ಮಾರ್ಮಿಕ ಮಾತು..
    ಚೆಂದ..

  3. Vasundhara k m

    ವಾಹ್…!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading