ಚಂದಿನ
ಅವನ ಖಾಯಂ ಕೋಣೆಯ ಠಾಣೆಯಿಂದ ಎಂದೋ ಪರಾರಿಯಾಗಿದ್ದಾನೆ.
ದೇವಾಲಯಗಳಿಂದು
ಬ್ರಾಹ್ಮಣ್ಯದ ಬಯಲುರಂಗ ಮಂದಿರಗಳಾಗಿವೆ,
ಕೆಲವು ಅರ್ಚಕರ ಅಂಗಡಿಗಳಾಗಿ ನಳನಲಿಸುತ್ತಿವೆ.
ಭಕ್ತಿಯ ಭಯೋತ್ಪಾದನೆಗೆ ಈಗ
ಭರ್ಜರಿ ವ್ಯಾಪಾರ.
ಭಕ್ತಿ ಭಯಕ್ಕೆ ಬೆಂಕಿಗಾಹುತಿಯಾದ ಭಕ್ತ,
ಹಿಂದುಳಿದ ಶೂದ್ರಾತಿಶೂದ್ರ ಶಿಖಾಮಣಿಗಳು, ದೀನ ದಲಿತರು ಸಿಲುಕಿ, ಮಾನಸಿಕ ಸಂಕೋಲೆತೊಟ್ಟು ಆಜೀವ ಜೀತದಾಳುಗಳಾಗಿ ವಿನಮ್ರದಿಂದವರ ಸೇವೆಗೈಯುತ್ತಿದ್ದಾರೆ.
ವಿವೇಚನೆ, ವೈಚಾರಿಕತೆ,
ಸಾಮಾನ್ಯ ಅರಿವಿನ ಸುಳಿವಿಲ್ಲದೆ, ಭಯಾನಕ ಸುಳಿಯಲ್ಲಿ ಸ್ವಯಿಚ್ಛೆಯಿಂದ ಬೇಷರತ್
ಶರಣಾದ ಖುಷಿಯಲ್ಲಿದ್ದಾರೆ.
ಪರಿಪರಿ ಬೂಟಾಟಿಕೆ ದೊಂಬರಾಟದ ಕುಣಿತಕ್ಕೆ ದಣಿದು ದಿಕ್ಕೆಟ್ಟಿದ್ದಾರೆ.
ದೇವರು ಪರಾರಿಯಾಗಿದ್ದಾನೆ,
ಆಳುವವನಿಂದು, ಆಡಿಸುವಾತನ ಕೈಗೊಂಬೆ ಒಮ್ಮೆ ಛದ್ಮವೇಷ, ಮಗದೊಮ್ಮೆ ವಿವಸ್ತ್ರಗೊಳಿಸಿ ನಸುನಗುವ ಮರೆಯಲ್ಲೆಲ್ಲೋ ಕೂತು,
ತುತ್ತು ಅನ್ನಕ್ಕಾಗಿ,
ಸಣ್ಣ ಉದ್ಯೋಗಕ್ಕಾಗಿ
ಬಡವ ಕಾಡಿ ಬೇಡಿದರೂ ಕಂಡೂಕಾಣದಂತೆ, ಕುರುಡಾಗಿ
ಕದಡಿ, ಕೆಣಕುತ್ತಿರುವ.

ಇವರ ಪ್ರಚಂಡ ಪ್ರತಿಭೆಗೆ,
ಕುತಂತ್ರಗಳಿಗೆ –
ಬುದ್ಧ ಎಂದೋ ಪಲಾಯನಗೈದ,
ಬಸವ ಬಸವಳಿದು ಬಡವಾದ,
ಗಾಂದಿಗೂ ಗುಂಡಿಟ್ಟು ದೃತಿಗೆಡದೆ,
ಅಂಬೇಡ್ಕರ್ ಸಂವಿದಾನಕ್ಕೂ ಲಗ್ಗೆಯಿಡಲು ಹೆಣಗಾಡುತ್ತಿದ್ದಾರೆ,
ಪೆರಿಯಾರ್ ಸರ್ವ ಪ್ರಯತ್ನಗಳನ್ನು ಹತ್ತಿಕ್ಕುವ ಕನಸು ಕಾಣುತ್ತಾ,
ಅನ್ನದಾತನ ಅಸಹಾಯಕನಾಗಿಸಿ ಬೀದಿಗಿಳಿಸಿದ್ದಾರೆ,
ಯುವಕರಿಗೆ ಧರ್ಮದ ಅಪೀಮು ಕುಡಿಸಿ, ನಿತ್ಯ ನಶೆಯಲ್ಲಿರಿಸುತ್ತಾ
ದಿನಕ್ಕೊಂದು ವಿನೂತನ ಪ್ರದರ್ಶನ ತೋರಿಸಿ, ರಂಜಿಸುತ್ತಾ,
ಅವರ ಭವ್ಯಭವಿಷ್ಯಕ್ಕೆ ಕೊಲ್ಲಿಯಿಟ್ಟು ನಿಟ್ಟುಸಿರಿಡುತ್ತಿದ್ದಾರೆ.
ಮಾನವತ್ವ ಮರೀಚಿಕೆಯಾಗಿ,
ಸತ್ಯದ ಪುಟ್ಟ ಅಣತೆಯೂ ಮಸುಕಾಗಿದೆ
ಬಡವ, ಬಲ್ಲಿದರನ್ನು ತಮ್ಮ ಅಘೋಷಿತ ಯುದ್ಧಕ್ಕೆ ಆಯುಧಗಳನ್ನಾಗಿಸಲು ಸಾಣೆಹಿಡಿಯುತ್ತಿದ್ದಾರೆ.
ಎಚ್ಚರಗೊಳ್ಳುವ ಅವಕಾಶಕ್ಕೆ ತಣ್ಣೀರೆರಚಿ, ಪಾನಮತ್ತರನ್ನಾಗಿಸಿ ವಿಜೃಂಭಿಸಿ ವಿನಾಶದಂಚಿಗೆ ದೂಡಿದ್ದಾರೆ.
ಇವರ ಶತಮಾನಗಳ ಹುನ್ನಾರಕ್ಕೆ, ನಿರಂತರ ಶೋಷಣೆಗೆ
ಬಲಿಯಾದವರ ಸಂಖ್ಯೆಗೆ ಲೆಕ್ಕವುಂಟೇ,
ಜಾತೀಯತೆಯ ದುರ್ವಾಸನೆ ಉಸಿರುಗಟ್ಟಿಸುವ ಸನ್ನಿವೇಶದಲ್ಲೂ,
ಇವರ ಪಂಚಾಮೃತ ಪ್ರಸಾದ, ತೀರ್ಥ, ತಿಳಕಗಳ ಕೈಚಳಕದಿಂದ ಮೈಮನ ಪುಳಕ!
ಪ್ರತಿಗೆಲಸಕ್ಕೂ ಖಡ್ಡಾಯ ಇವರ ಸಲಹೆ ಸೂಚನೆ –
ಪ್ರಸ್ಥಕ್ಕೂ, ಪರಿಣಯಕ್ಕೂ, ಪಿಂಡ ಪ್ರದಾನಕ್ಕೂ ಅಂಗಲಾಚುವರು ಹಲ್ಲುಗಿಂಜುತ್ತಾ.

ಅವರ ದರ್ಮಯುದ್ಧಕ್ಕೆ
ಘಟಿಸಿದ ದೌರ್ಜನ್ಯಗಳ,
ಎಲ್ಲ ಅಪಮಾನಗಳ ಮರೆತು,
ಸ್ವಾಭಿಮಾನ ಅಡವಿಟ್ಟು
ನಿರಕ್ಷರ ಕುಕ್ಷಿಗಳಂತೆ
ಅವರ ಕುಣಿತಕ್ಕೆ ಕುಡಿದ ಮಂಗಗಳಾಗಿ ಧಾವಂತದಿ ಧುಮುಕಿ ಧೂಳಾಗುತ್ತಿದ್ದಾರೆ.
ಇಷ್ಟಾದರೂ ನಾನೊಬ್ಬ ಆಶಾವಾದಿ,
ಯಾವುದೂ ಶಾಶ್ವತವಲ್ಲವೆಂಬ ನಂಬಿಕೆ,
ಬದಲಾವಣೆ ಬಂದೇ ಬರುವುದೆಂಬ ಹುಚ್ಚು ಭರವಸೆಯಿನ್ನೂ ಜೀವಂತ.
ಏಕೆಂದರೆ ನಾನೊಬ್ಬ ಅಪ್ಪಟ
ದೇಶಭಕ್ತ, ದೈವಭಕ್ತ,
ಅಂಧಭಕ್ತನಲ್ಲ.
ಇವರ ಸಂರಕ್ಷಣೆ ಈಗ ಅತ್ಯಗತ್ಯ,
ಅದಕ್ಕೆ ದೇವರು ಅನಿವಾರ್ಯ,
ದಯಮಾಡಿ ದೇವರನ್ನು ಹುಡುಕಿಕೊಡಿ,
ಸೂಕ್ತ ಬಹುಮಾನ ಪಡೆಯಿರಿ.






0 Comments