ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವರಾಗಬೇಕಿಲ್ಲದ…

ವಸುಂಧರಾ ಕದಲೂರು

ತೂಗೀ ತೂಗೀ ಕೈ ಸೋತರೂ
ತೊಡೆ ಮೇಲೇರಿಸಿಕೊಂಡು
ತೊಟ್ಟಿಲಿಗೆ ಮತ್ಸರ ಕಾಡುವ ಹಾಗೆ
ಮಡಿಲ ಜೋಳಿಗೆ ಮಾಡಿ ತೂಗುತ್ತಾಳೆ.
ಹಗಲೂ ಇರುಳೂ ಸೂರ್ಯ ಚಂದ್ರರ
ಒಡನೆ ಪೈಪೋಟಿಗಿಳಿಯುತ್ತಾ…

ಸೋಲುವುದಿಲ್ಲ ಅವಳು. ಸಹಜ ನಗು
ಮೆರೆಸಲು, ಜಗದ ನಿಯಮ ಗಾಳಿಗೆ
ತೂರಿ; ಹೊಳೆಯ ನೀರುಪಾಲು ಮಾಡಿ,
ಮುನ್ನುಡಿ ಬರೆಯುತ್ತಾ, ಅಡಿ ಮುಂದಿಡುತ್ತಾ.. ಆಗಾಗ್ಗೆ ಸಿಡಿದೇಳುವ ಒಡಲೊಳಗೆ
ಕುದಿಗೊಂಡ ಲಾವಾದಂತೆ..

ಅವಳೆಂದರೆ, ಅಕ್ಕರೆಯವಳು.
‘ಅ’ ಎಂದರೆ ಅಮ್ಮನಾಗುವವಳು!

ಆಕೆಯನ್ನು ದೇವರು ಮಾಡಬೇಡಿ.
ದೇವರಾದರೆ ಸುಮ್ಮಗಾಗುತ್ತಾಳೆ.
ನುಡಿಗೊಡದಂತೆ, ಗುಡಿಯೊಳಗೆ
ವಿಗ್ರಹವಾದಂತೆ, ನಿಂದನೆ -ಸ್ತುತಿಗಳಿಗೆ
ಕಲ್ಲಾಗಿ ನಿಲ್ಲುವಂತೆ, ಅನಾಚಾರ,
ಸದಾಚಾರ, ದುರಾಚಾರಗಳಿಗೆ ಹೇಗೂ
ಪ್ರತಿಕ್ರಿಯಿಸದಂತೆ… ಆಕೆ ಯಾವ
ಸೀಮೆಯ ದೇವರಾಗುವುದೂ ಬೇಡ.

‍ಲೇಖಕರು Avadhi

17 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading