ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ದೇವರನ್ನು ಅರೆಸ್ಟ್ ಮಾಡಲಾಗಿದೆ' – ಹನುಮಂತ ಹಾಲಿಗೇರಿ ಕವನ

ಹನುಮಂತ ಹಾಲಿಗೇರಿ

 

ಸುಖ ಶಾಂತಿಗಾಗಿ ಮಾನವ ದೇವರನ್ನು ಸೃಷ್ಟಿಸಿಕೊಂಡ
ಆದರೆ ಗಲಬೆಕೋರ ದೇವರೇ ಈಗ ಪ್ರಮುಖ ಆರೋಪಿ.
 
ದೇವರ ರಕ್ಷಣೆಗೆ ಬೃಹತ್ ಗುಡಿ ಗೋಪುರಗಳನ್ನು
ಮಂದಿರ ಮಸೀದಿಗಳನ್ನು ಕಟ್ಟಲಾಗಿದೆ.
ಮನೆಮಠವನ್ನು ಮರೆತ ಎಷ್ಟೋ ಜನ
ಗುಡಿ ಗೋಪುರಗಳ ಗೇಟಿನಲ್ಲಿ ಬಂದೂಕು ಹಿಡಿದಿದ್ದಾರೆ
ದೇವರು ಅಕ್ಷರಶಃ ಬಂಧಿ, ಆದರೂ ಸುಮ್ಮನೇ ನಿಂತಿದ್ದಾನೆ.
 
ತನಗಾಗದವರನ್ನು ನಾಶ ಮಾಡಲೆಂದು
ದೇವರಿಗೆ ಡಜನ್ಗಟ್ಟಲೇ ಕೈಗಳನ್ನು ಜೋಡಿಸಲಾಗಿದೆ.
ಪ್ರತಿ ಕೈಗೊ ಬಿಲ್ಲು ಬಾಣ, ಖಡ್ಗ ಕೊಡಲಿ,
ಹತಾರ ತ್ರೀಶೂಲಗಳನು ಕೊಟ್ಟು ಕೊಲೆಮಾಡಲೆಂದು ಹರಕೆ ಹೊರಲಾಗಿದೆ.
ಆದರೂ ದೇವರು ಸುಮ್ಮನೆ ನಿಂತೆ ಇದ್ದಾನೆ.
 
ದೇವರ ಕೈಲಿದ್ದ ತ್ರೀಶೂಲ ಕಸಿದುಕೊಂಡು
ಪರರೆನ್ನಲಾದವರನ್ನು ಇರಿದುಕೊಲ್ಲಲಾಗುತ್ತಿದೆ.
ಜೇಹಾದ್ ಹೆಸರಲ್ಲಿ ಬಾಂಬಿಟ್ಟ ಬಡಾವಣೆಗಳು ಸ್ಮಶಾನಗಳಾಗಿವೆ
ಬೀದಿ ಬೀದಿಗಳಲ್ಲಿ ರಕ್ತ ಮಡುಗಟ್ಟತೊಡಗಿದೆ.
ಈಗಲೂ ದೇವರು ಸುಮ್ಮನೆ ನಿಂತಿದ್ದಾನೆ.
 
ವೇದ, ಉಪನೀಷತ್ತು, ಬೈಬಲ್, ಖುರಾನ್ಗಳನ್ನು ರಚಿಸಿ
ದೇವರ ಹೆಗಲಿಗೆ ಅವತ್ತು ತೂಗುಹಾಕಲಾಯಿತು
ಇವತ್ತು ಅವೆ ದೇವರಿಗೆ ನೇಣುಹಗ್ಗವಾಗಿವೆ
ದೇವರ ಜೀವ ಈಗಲೂ ಆಗಲೋ ಎನ್ನುವಂತಿದೆ
ಆದರೂ ದೇವರೂ ಉಸಿರಿಡುದುಕೊಂಡು ನಿಂತೇ ಇದ್ದಾನೆ.
 
ಮನೆಯೇ ಇಲ್ಲದವರನ್ನು ತಂದು ಗುಡಿ ಮಸೀದಿ ಕಟ್ಟಿಸಲಾಗುತ್ತಿದೆ.
ಅಮಾಯಕ ಭಕ್ತರಿಂದ ನಗ ನಗದು ಕಸಿದು ದೇವಸ್ಥಾನಗಳಲ್ಲಿ ಕೂಡಿಡಲಾಗುತ್ತಿದೆ.
ಕೋಟ್ಯಾಂತರ ಕುರಿ, ಕೋಣ, ನರರನ್ನೂ ಸಹ ಬಲಿ ಕೊಡಲಾಗುತ್ತಿದೆ.
ದೇವರೆದುರಲಿಯೇ ಅಸಹಾಯಕ ಹೆಣ್ಣುಗಳೊಂದಿಗೆ ರತಿಕ್ರೀಡೆಯಾಡಲಾಗಿದೆ
ದೇವರು ಕಣ್ದೆರುದುಕೊಂಡು ಸುಮ್ಮನೆ ನಿಂತಿದ್ದಾನೆ.
 
ಈ ದೈವಾರೋಪಗಳನ್ನು ಪ್ರಶ್ನಿಸುವವರನ್ನು ಜೈಲಿಗಟ್ಟಲಾಗುತ್ತಿದೆ
ನಿಂತೇ ಇರುವ ತಿರುಪತಿ ತಿಮ್ಮಪ್ಪನನ್ನು ಕೂಡ್ರಿಸಿ
ಎಂದು ಹೈಕೋರ್ಟ್ ಗೆ ದೂರು ನೀಡಿದರೂ ಸಹ
ದೇವರನ್ನು ನಿಲ್ಲಿಸಿಕೊಳ್ಳಲಾಗಿದೆ.
ಖಾದಿ, ಕಾಕಿ, ಕರಿಕೋಟಿನವರು ಈ ಆರೋಪಿ ದೇವರ ಮೈ ಮುಟ್ಟುವಂತಿಲ್ಲ.
ದೇವರು ಆಗಲೇ ಉದ್ವಿಘ್ನ ಭಕ್ತರ ಬಿಗಿಮುಷ್ಠಿಯಲ್ಲಿ ಅರೆಸ್ಟ್ ಆಗಿದ್ದಾನೆ.
 
ಪಾಪ, ಈಗಲಾದರೂ ದೇವರನ್ನು ಅವನ ಪಾಡಿಗೆ ಬಿಟ್ಟು ಬಿಡೋಣ
ಅಂವ ಓಡಿ ಹೋಗಿ ಮಣ್ಣ ಕಣಗಳಲ್ಲಿ ನೀರ ಅಲೆಗಳಲ್ಲಿ ಅಗ್ನಿ ಜ್ವಾಲೆಯಲ್ಲಿ
ವಾಯು ವಿಹಾರಲ್ಲಿ ಆಕಾಶ ಬಯಲಿನಲ್ಲಿ ಸೇರಿ ಸಹಜ ಪ್ರಕೃತಿಯಾಗಲಿ
ಬೇಕಾದರೆ ಆ ಪ್ರಕೃತಿಯನ್ನೆ ನಾವು ಪೂಜಿಸೋಣ.
 

‍ಲೇಖಕರು avadhi

11 September, 2013

14 Comments

  1. nagraj.harapanahalli

    ಮೊದಲ ಪ್ರಯತ್ನದಲ್ಲಿಯೇ ಕವಿತೆ ಚೆನ್ನಾಗಿ ಬಂದಿದೆ. ವಾಚ್ಯ ಅನ್ನಿಸಿದರೂ, ಭಕ್ತರನ್ನು ತಟ್ಟುತ್ತದೆ.

    • shantha kumari

      papa avaniddadde prkrutiyalli naave eLedu taMdu kUdi haaki Iga avanige mukti koduva yOchane baMdideyella idu ella baktharigu bandare dEsha dEvaru ella uddara!kavite pratikriyisuvantide.

  2. Ashok Shettar

    “ಅಂವ ಓಡಿ ಹೋಗಿ ಮಣ್ಣ ಕಣಗಳಲ್ಲಿ ನೀರ ಅಲೆಗಳಲ್ಲಿ ಅಗ್ನಿ ಜ್ವಾಲೆಯಲ್ಲಿ
    ವಾಯು ವಿಹಾರಲ್ಲಿ ಆಕಾಶ ಬಯಲಿನಲ್ಲಿ ಸೇರಿ ಸಹಜ ಪ್ರಕೃತಿಯಾಗಲಿ”
    ಅಂವ ಇರುವದೇ ಅಲ್ಲಿ, ಬಾಕಿ ಎಲ್ಲವೂ ಕಥಾಕಾಲಕ್ಷೇಪ..

  3. Prabhakar Nimbargi

    It is we who have created the God, it is we who arrest him and allege him for all our misdeeds. If and only if, we were to worship nature, abide by its rules and regulations and co-exist with it as well as with each other!!!

  4. veerendra ravihal

    thumba channagide geleya.munde kavanagalannu innu uttamavagi bareyabiie emba bharavase modisiddiya.shubhavagali.

  5. veerendra ravihal

    thumba channagide geleya.munde kavanagalannu innu uttamavagi bareyabiie emba

  6. shridhar nayak

    kavana chennagide.best of luck.

  7. ಸಂದೀಪ್ ಕಾಮತ್

    “ಪಾಪ, ಈಗಲಾದರೂ ದೇವರನ್ನು ಅವನ ಪಾಡಿಗೆ ಬಿಟ್ಟು ಬಿಡೋಣ”
    ಬಿಡೋದೇ ಆದ್ರೆ ದೇವರ ಬಗ್ಗೆ ಕವಿತೆ ಯಾಕೆ ಬರೆದಿರಿ ಸಾರ್???
    ದೇವರ ಹೆಸರು ಹೇಳಿ ಮೋಸ ಮಾಡಿ ತಮ್ಮ ಹೊಟ್ಟೆಪಾಡು ನೋಡಿಕೊಳ್ಳುವವರು ಎಷ್ಟಿದ್ದಾರೋ, ಅಷ್ಟೆ ಸಂಖ್ಯೆಯಲ್ಲಿ ದೇವರನ್ನು ಬಯ್ದು ಕವಿತೆ/ಪುಸ್ತಕ ಬರೆದು ಹೊಟ್ಟೆಪಾಡು ನೋಡಿಕೊಳ್ಳುವವರು ಅಷ್ಟೇ ಸಂಖ್ಯೆಯಲ್ಲಿದ್ದಾರೆ!

  8. siddarama G M

    super sir

  9. mmshaik

    nice..poem

  10. Kajooru sathish

    nice

  11. Anonymous

    ನಿಮ್ಮ ಆಲೋಚನೆ ಚೆನ್ನಾಗಿದೆ. ಪ್ರಕೃತಿ ಎಂಬ ಧೈವದ ಮೇಲೆ ನಿರಂತರ ದೌಜ೵ನ್ಯ ನಡೆಸುತ್ತಲೇ ಆದಾಯಕ್ಕಾಗಿ ಗುಡಿ ಗೋಪುರ ಕಟ್ಟಿ ದೇವರ ಹೆಸರಿನಲ್ಲಿ ಭಾರಿ ದಂಧೆಯನ್ನೇ ಮಾಡಲಾಗುತ್ತಿದೆ.

  12. yamuna

    kavana chennagide. kaavyaatmakate kuritu vimarshe bayasabahudu. aadare vishaya nirupane bagge alla. sashya nimma mele warrent jaari aagbahudu.

  13. ಸುದೀಪ್.ಬಿ.ಎಸ್

    ದೇವರ ಬಗ್ಗೆ ಈ ತರದ ಆಲೋಚನೆಯನ್ನು ನಾವು ಇನ್ನೂ ಬೆಳಸಿಕೊಳ್ಳಲೇಬೇಕು, ಅದರ ಬಗ್ಗೆ ಈ ತರ ಮಾತಾಡಲೇಬೇಕು. ಅಲ್ವಾ? ಚೆನ್ನಾಗಿದೆ ಸರ್. ಮುಂದೆ ಇನ್ನೂ ದೇವರು ಯಾವಯಾವ ರೀತಿಯಲ್ಲಿ ಬಂಧಿಯಾಗಬಹುದು. ಅಥವಾ ನಾವೆಲ್ಲ ಅವನನ್ನು ಬಂಧಿ ಮಾಡಬಹುದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading