ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವನೂರು ಫ಼ೇಸ್ ಬುಕ್ ಗೆ ಬರ್ತಾರಂತೆ…

ಮುರಳೀಧರ ಉಪಾಧ್ಯ

ಉಡುಪಿಗೆ ’ ಎದೆಗೆ ಬಿದ್ದ ಅಕ್ಷರ ’ ಕ್ಕೆ ಇನಾಂದರ್ ಪ್ರಶಸ್ತಿ ಸ್ವೀಕರಿಸಲಿಕ್ಕೆ ಬರಲು ದೇವನೂರು ಮಹಾದೇವರು ಮೊದಲು ಒಪ್ಪಲಿಲ್ಲ . ಎರಡು ಬಾರಿ ಕಾರ್ಯಕ್ರಮ ಮುಂದೂಡಬೇಕಾಯಿತು . ೧೩-೭-೨೦೧೩ ಎಮ್.ಜಿ. ಎಮ್ ಕಾಲೇಜಿನ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಎನಾಂದಾರ್ ಪ್ರಶಸ್ತಿ ಸ್ವೀಕರಿಸಿ ದೇವನೂರು, ಬೆಂಗಳೂರಿನಲ್ಲಿ ಆರಂಭವಾಗಲಿರುವ ಜಾತಿ ಟೌನ್ ಶಿಪ್ ಗಳ ಕುರಿತು ’ಉರಿಯ ನಾಲಗೆ’ಯಿಂದ ಮಾತನಾಡಿದರು. ಅವರ ಭಾಷಣದ ಆಡಿಯೊ ನನ್ನ ಬ್ಲಾಗ್ನ್ ನಲ್ಲಿ ಪ್ರಕಟವಾಗಿದೆ. ’ಅವಧಿ’ ಯಲ್ಲೂ ಇದರ ಲಿಂಕ್ ಪ್ರಕಟವಾಗಿದೆ . ಅಂತರ್ಜಾಲದಲ್ಲಿ ೫೫೦ ಮಂದಿ ಈ ಭಾಷಣ ಕೇಳಿದ್ದಾರೆ. ಜೈ ಮಹಾದೇವ!

ಎಮ್. ಜಿ. ಎಮ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ದೇವನೂರು ನಮ್ಮ ನಾಡಿನಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಯನ್ನು ಕುರಿತು ಮಾತನಾಡಿದರು . ಚರ್ಚೆಯಲ್ಲಿ ಭಾಗವಹಿಸಿದ ಉಪನ್ಯಾಸಕರೊಬ್ಬರು, ಒಬ್ಬರು ಸ್ವಾಮೀಜಿ ಫ಼ೇಸ್ ಬುಕ್ ನಲ್ಲಿ ಮಾರ್ಗದರ್ಶನ ನೀಡುತ್ತಿರುವುದನ್ನು ಪ್ರಸ್ತಾಪಿಸಿದರು. ಆಗ ’ಹೌದಾ , ಸ್ವಾಮಿಗಳು ಫ಼ೇಸ್ ಬುಕ್ ನಲ್ಲಿ ಇದ್ದಾರಾ ? ನಾನೂ ಫ಼ೇಸ್ ಬುಕ್ ಗೆ ಬರ್ತೇನೆ ” ಎಂದರು . ದೇವನೂರು ಫ಼ೇಸ್ ಬುಕ್ ಗೆ ಬರ್ತಾರಾ ? ಕಾದು ನೋಡಿ.
 

‍ಲೇಖಕರು G

27 July, 2013

4 Comments

  1. arun joladkudligi

    ಬರಲಿ, ಮಹದೇವ್ ಬುಕ್ ಓಪನ್ ಆಗಲಿ.

  2. nagaraj hettur

    Adastu bega barali…

  3. ಸುದೀಪ್.ಬಿ.ಎಸ್

    ದೇವನೂರು ಫೇಸ್ ಬುಕ್ ಗೆ ಎಂಟ್ರಿ ಕೊಟ್ರೆ,,ಫೇಸ್ ಬುಕ್ ನ ಫೇಸ್ ಚೇಂಜ್ ಆಗಬಹುದು.. ಜೊತಗೆ ‘ಅವಳಿ’ ಅವರಿಗೂ ಯೋಚನೆ ಉಂಟಾಗಬಹುದು. ಬೇಗ ಬನ್ನಿ ಸರ್…

  4. ಕೃಷ್ಣೇಗೌಡ ಟಿ.ಎಲ್.

    Most welcome..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading