ರಮೇಶ್ ನೆಲ್ಲಿಸರ
ಮೇಲೇರುತಿಹ ಮನೆಗಳ ತಲೆಯಲ್ಲೊಂದೊಂದು
ಭಯಾನಕ ಬೆದರುಬೊಂಬೆ!
ಕಣ್ಗಳಗಲಿಸಿ,ಕಿವಿಗಳರಳಿಸಿ
ತಿರುವಿದ ದಪ್ಪ ಮೀಸೆ ,ಇಳಿಬಿಟ್ಟ ಜಿಹ್ವೆ
ತಲೆಯ ಮೇಲೆರಡು ಕೋಡು ಕಳಶವಿಟ್ಟಂತೆ

ಗಂಭೀರವದನ,ಗಂಟಿಕ್ಕಿದ ಹುಬ್ಬು
ನಗುವಿನ ಛಾಯೆ ಎಂದೋ ಮಬ್ಬು
ಮನೆಕಟ್ಟುವವರ ಗೋಳು ಗೊತ್ತಿರಬೇಕು ಕಲೆಕಾರನಿಗೆ;
ತನ್ನ ವೃತ್ತಿ ಮತ್ತೆ ಮಾಲಿಕರ ಮನೋವೃತ್ತಿ…!
ಕಣ್ಣಿಡುವವರ ಕೊಲ್ಲುವ ನೇರನೋಟ
ಸುಡಲೆಂದೇ ಪೋಣಿಸಿರುವ
ಉರಿಮೆಣಸು,ಗಜನಿಂಬೆ
ದೃಷ್ಟಿಯ ಸೃಷ್ಟಿಯೇ ಅಪರೂಪ
ಇದೇ ಇರಬಹುದೇ ಮನುಜನ ನಿಜರೂಪ….!?






super
ಚೆನ್ನಾಗಿದೆ ಕವನ.
good one…