ಭಾರತೀಯತೆಗೆ ಸಂದ ಗೌರವ
ಶ್ರೀನಿಧಿ ಹರಿಪ್ರಸನ್ನ
ಭಾರತದಲ್ಲಿ ಮಾತ್ರವೇ ಈ ಹಿಂಸೆ, ಕ್ರೌರ್ಯ ,ಅನಾಚಾರಗಳು ಇರೋದು ಅಲ್ಲ , ಹೆಣ್ಣು – ಗಂಡು ಇದ್ದ ಕಡೆಯೆಲ್ಲಾ ಈ ಸಮಸ್ಯೆ ಇದ್ದಿದ್ದೇ ಎಂದು ಅರಿವಾಗಿದ್ದು ನಾನು ಗಲ್ಫ್ ರಾಷ್ಟ್ರಕ್ಕೆ ಬಂದ ಮೇಲೆ .
ಅದೊಂದು ದಿನ ನಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ರಾಬರ್ಟ್ ಎಂಬ ಫಿಲಿಪೈನ್ಸ್ ರಾಷ್ಟ್ರೀಯತೆಯ ಯುವಕ ಒಂದಷ್ಟು ದಾಖಲೆಗಳನ್ನು ನಮ್ಮ ಕಚೇರಿಯಿಂದ ಪಡೆದು ಕೊಂಡು ಹೋಗಲು ಬಂದ. ಆತ ನಮ್ಮ ವ್ಯವಹಾರದ ಒಬ್ಬ ಗ್ರಾಹಕನೂ ಹೌದು . ಮಾತ್ರವಲ್ಲ ಒಂದು ವರ್ಷ ದಿಂದ ದಿನ ನಿತ್ಯ ಎಂಬಂತೆ ಬಂದು ಹೋಗುವಾತ .ಆದರೆ ಆ ದಿನ ನನ್ನ ಕಂಡು ಏನು ಅನ್ನಿಸಿತೋ ನಾನು ಕಾಣೆ ! ನಾನಂತೂ ಅವನ ಪ್ರಶ್ನಾವಳಿ ಕಂಡು ದಂಗಾದೆ.
ಅದುವರೆಗೂ ಹೀಗೆ ಕೇಳದವನು, ಒಂದೇ ಬಾರಿಗೆ “Are you Indian ?,Are you married ?,You have boy friend ?” ನಂಗೆ ಮೊದಲೆರಡು ಪ್ರಶ್ನೆಗಳೇ ಅಧಿಕ ಪ್ರಸಂಗ ಅನ್ನಿಸಿತ್ತು . ಮೊಸರಿಗೆ ಬಂದೊನಿಗೆ ಎಮ್ಮೆ ಬೆಲೆ ಯಾಕೆ ? ಅಂತ .ಆದರೂ ಮೊದಲ ೨ ಪ್ರಶ್ನೆಗಳಿಗೂ “yes ” ಎಂದಷ್ಟೇ ಉತ್ತರಿಸಿ ನನ್ನ ಕೆಲಸದಲ್ಲಿ ಮಗ್ನಳಾದೆ .ಆದರೆ ೩ ನೇ ಪ್ರಶ್ನೆ ಕೇಳಿ ದಂಗಾದೆ . ತುಂಬಾ ಕೋಪ ಬಂತು ,ಕಾಲಿಗೆ ಹಾಕಿದ ಚಪ್ಪಲಿ ಕೈಗೆ ತೆಗೆದುಕೊಳ್ಳಲೋ ಎಂಬಷ್ಟು . ಆದರೆ ಇದು ಸರಿಯಲ್ಲ ,ಇದಕ್ಕೆ ಪರಿಹಾರ “ಶಂಖದಿಂದಲೇ ತೀರ್ಥ” ಬರಬೇಕು ಎಂದು ಸುಮ್ಮನಾದೆ .
ಆತ ಆಚೆ ಹೋದ ಕೂಡಲೇ ಯೋಚಿಸಿದೆ , ಯಾರ ಬಳಿ ಹೇಳಿ ಇವನಿಗೆ ಶಾಸ್ತಿ ಮಾಡಿಸುವುದು ? ನನ್ನ ಮ್ಯಾನೇಜರ್ ಬಳಿ ? ಅಥವಾ ನಮ್ಮ ಕಂಪನಿ ಎಂ.ಡಿ. ಅಥವಾ ಅವನ ಬಾಸ್ ಹತ್ತಿರನಾ ?
ನಂಗೆ ಅವನ ಬಾಸ್ ಕೈಯಿಂದ ಶಾಸ್ತಿ ಮಾಡಿಸುವುದು ಸರಿಯೆನಿಸಿ , ಅವನ ಬಾಸ್ ಮಿಸ್ಟರ್.ಬೊಎನ್ ಗೆ (Mr.Boen )(ಫಿಲಿಪೈನ್ಸ್ ರಾಷ್ಟ್ರೀಯತೆ) ಫೋನ್ ಮಾಡಿ ‘ನಿಮ್ಮ ಹತ್ತಿರ ವೈಯಕ್ತಿಕ ವಾಗಿ ಮಾತನಾಡಬೇಕು ಎಂದು ಹೇಳಿದೆ.’ ಆತ ಈಗ busy ೧೦ ನಿಮಿಷ ಕೊಡಿ ಅಂದು ಫೋನ್ ಲೈನ್ ಕಟ್ ಮಾಡಿ ಬಿಟ್ಟ.೨ ಘಂಟೆ ಕಳೆದರೂ ಹಿಂತಿರುಗಿ ಕರೆ ಮಾಡಲಿಲ್ಲ ಆದರೂ ತಾಳ್ಮೆಯಿಂದ ಕಾದೆ. ೪ ಘಂಟೆ ಕಳೆದು ಅವನ ಕರೆ ಬಂತು. ನೇರ ಹೇಳಿದೆ “ನನ್ನನ್ನು ನಿಮ್ಮ ತಂಗಿ ಎಂದು ತಿಳಿಯಿರಿ . ನಿಮ್ಮ ಸಹಾಯಕ ರಾಬರ್ಟ್ ಈ ದಿನ ನನಗೆ ಈ ಪರಿ ಪ್ರಶ್ನೆಗಳನ್ನ ಕೇಳಿದ್ದಾನೆ. ನಿಜವಾಗಿ ಅವನ ಕೆಲಸ ನಮ್ಮ ಕಚೇರಿಯಿಂದ ದಾಖಲೆಗಳನ್ನು ಸಂಗ್ರಹಿಸಿ ಕೊಂಡು ಹೋಗುವುದಷ್ಟೇ !! ಹೀಗಿದ್ದಾಗ ಇದೆಲ್ಲ ಯಾಕೆ ಅವನಿಗೆ ? ನೋಡಿ – ನಮ್ಮ ಭಾರತದ ಸಂಸ್ಕೃತಿ ತುಂಬಾ ಶ್ರೀಮಂತವಾದುದು .ನಮ್ಮ ಸಂಗಾತಿಗೆ ನಿಷ್ಠ ರಾಗಿರುತ್ತೇವೆ .
ದಯವಿಟ್ಟು ಆ ರಾಬರ್ಟ್ ಗೆ ಹೇಳಿ , ಸಭ್ಯ ನಡವಳಿಕೆಯಿಂದ ವರ್ತಿಸುವುದು ಒಳಿತು. ಇದು ಪುನರಾವರ್ತನೆ ಆದರೆ ಮುಂದೇನು ಮಾಡಬೇಕಿದೆ ಎಂದು ಗೊತ್ತು .ನಿಮಗೂ ಈ ದುಬೈ ಕಾನೂನು ಗೊತ್ತು ತಾನೇ ? ಹೀಗಾಗಿ ಅವನಿಗೆ ಬುದ್ದಿ ಹೇಳಿ ಅಂದೆ. ಸರಿ ತಂಗಿ ಎಂದು ಲೈನ್ ಕಟ್ ಮಾಡಿದ್ದೂ ಆಯಿತು .
೨ ದಿನ ಬಿಟ್ಟು ಬಂದಾಗ ಈ ರಾಬರ್ಟ್ ಉದ್ಗಾರ “Why you told to Mr.Boen ?”!!!!!
Mr.Boen ನಂಗೆ ಸರಿಯಾದ ನ್ಯಾಯ ಕ್ಲಪ್ತ ಸಮಯದಲ್ಲಿ ಒದಗಿಸಿದ್ದ …







ಮೇಡಮ್, ಸೂಕ್ತ ಸಮಯದಲ್ಲಿ ನೀವು ತೆಗೆದುಕೊಂಡ ನಿರ್ಧಾರದಿಂದ ಆ ಪಾಪಿಗೆ ತಕ್ಕ ಶಾಸ್ತಿ ಮಾಡಿಸಿದ್ದೀರಿ…ಹೀಗೆ ನಮ್ಮ ಭಾರತೀಯ ಹೆಣ್ಣುಮಕ್ಕಳು ಬುದ್ಧಿವಂತಿಕೆಯಿಂದ ನಡೆದುಕೊಂಡರೆ ಎಲ್ಲಿಯೂ ತೊಂದರೆಯಾಗದು ಅಲ್ಲವಾ ? ಶುಭದಿನ
ಏನೋ ಪಾಪ ಅಂತ ಇಷ್ಟಕ್ಕೆ ಬಿಟ್ಟೆ ಅವನಿಗೂ ಮದ್ವೆ ಆಗಿದೆ. ಅ ಹುಡುಗಿ ಮುಖ ನೋಡಿ ಇಷ್ಟಕ್ಕೆ ಸುಮ್ಮನಾದೆ .
ಫಿಲಿಪೈನ್ಸ್ ದೇಶದ ಜನರು ಹೆಣ್ಣಾಗಲಿ, ಗಂಡಾಗಲಿ ಅವರು ಫಿಲಿಪೈನ್ಸ್ ನಲ್ಲಿ ಮದುವೆಯಾಗಿರುತ್ತಾರೆ ಹೆಂಡತಿ ಮಕ್ಕಳು ಊರಲ್ಲಿದ್ದರೆ ಇಲ್ಲಿ ಬಂದು ಈ ಫಿಲಿಪೈನ್ಸ್ ಗಂಡು ಪ್ರಾಣಿಗಳು ಇಲ್ಲಿ ಹೊಸ ಸಂಗಾತಿಯನ್ನು ಹುಡುಕಿಕೊಳ್ಳುತ್ತಾರೆ. ಹಾಗೆ ಫಿಲಿಪೈನ್ಸ್ ಹೆಣ್ಣು ಮಕ್ಕಳೇನು ಹೊರತಲ್ಲ. ನನಗೆ ಗೊತ್ತಿರುವ ಅನೇಕ ಫಿಲಿಪೈನ್ಸ್ ಮಹಿಳೆಯರಿಗೆ ಫಿಲಿಪೈನ್ಸ್ ನಲ್ಲಿ ಮದುವೆಯಾಗಿದೆ ಗಂಡ ಮತ್ತು ಮಕ್ಕಳನ್ನು ಅಲ್ಲಿಯೇ ಬಿಟ್ಟು ಬಂದಿದ್ದಾರೆ. ಕೆಲಸ ನಿಮಿತ್ತ ಗಲ್ಫ್ ಗೆ ಬಂದ ಫಿಲಿಫೈನ್ಸ್ ಹೆಂಗಳೆಯರೂ ಸಹ ಮತ್ತೊಂದು ಮದುವೆಯಾಗಿದ್ದಾರೆ, ಬಾಯ್ ಫ್ರೆಂಡ್ ಗಳಿದ್ದಾರೆ. ಅದು ಅವರ ಜೀವನಶೈಲಿ ಮತ್ತು ಅವರು ಎಷ್ಟೇ ವಯಸ್ಸಾದರು ಬದಲಾಗದ ಸೌಂದರ್ಯ, ದೇಹಕಾಯವೇ ಕಾರಣ ಇರಬಹುದು.
ಒಳ್ಳೆಯ ಕೆಲಸ ಮಾಡಿದ್ರಿ
ಕಷ್ಟ ಎಲ್ಲೇ ಇದ್ದರೂ ಇರುತ್ತದೆ ಅದನ್ನು ಎದುರಿಸಿ ಧೈರ್ಯ ಇರಬೇಕು…
ಶುಭವಾಗಲಿ ಮತ್ತಷ್ಟು ನಿಮ್ಮ ಲೇಖನಗಳು ಬರಲಿ!
ದುಬೈ ಕಾನೂನು ತುಂಬಾ ಕಠಿಣ ಎಂಬ ಕಾರಣದಿಂದಲೇ ಅವನು ನಿಮ್ಮನ್ನು ಮತ್ತೆ ಪೀಡಿಸಲು ಧೈರ್ಯ ಮಾಡಲಿಲ್ಲವೆನ್ನುವುದು ಸತ್ಯ ಸಂಗತಿ..ನಿಮ್ಮ ಕಂಪ್ಲೇಂಟ್ ಎಲ್ಲಾದರೂ ನಮ್ಮ ಭಾರತ ಅಥವಾ ವೆಸ್ಟೆರ್ನ್ ರಾಷ್ಟ್ರದಲ್ಲಿಯಾಗಿದ್ದರೆ ನೀವು ಅವನಿಂದ ತುಂಬ ಕಷ್ಟಕ್ಕೊಳಗಾಗುವ ಸಂಭವ ಇತ್ತು…
ಅದಕ್ಕೇ ಒಳ್ಳೆಯದನ್ನು ಬಯಸುವ ಪುರುಷ ಮತ್ತು ಮಹಿಳೆಯರೆಲ್ಲ ಈ ವಿಷಯದಲ್ಲಿಯಾದರೂ ಅರಬ್ ಕಾನೂನನ್ನು ಇಷ್ಟ ಪಡುತ್ತಾರೆ.