ದೀಪಾ ಗೋನಾಳ ಹೊಸ ಕವಿತೆ- ಉಕ್ಕುವ ಬಿಕ್ಕ ನುಂಗುತ್ತ..

ದೀಪಾ ಗೋನಾಳ

ಯಾವುದೋ ದೊಡ್ಡ ಸಂಕಟಕ್ಕೆ
ಅಣಿಯಾಗುವವಳಂತೆ
ಸಣ್ಣ ಪುಟ್ಟ ಏಟು
ತಿನ್ನುತ್ತಲೇ‌ ಇದ್ದಾಳೆ

ಏಟು ನೋಡಿಕೊಂಡು
ಮೆಲ್ಲನೆ ನಕ್ಕು
ಹೆತ್ತ ಕೂಸ ತಲೆ ಸವರಿದಂತೆ
ಗಾಯದ ನೆತ್ತಿ ಸವರಿ
ಎದೆಗವಚಿ ಬಿಕ್ಕುವ ಬದಲು
ಮತ್ತೂ ನಗುತ್ತಾಳೆ.

ಹೊಕ್ಕಳ ನೋವಿಗೆ
ಎಣ್ಣೆ ಸವರಬೇಕೊ!?
ಸುಣ್ಣ ಮೆತ್ತಿ
ಬಗ್ಗನೇ ಉರಿದಾಗ
ಕರುಳ ನೋವು
ಕಡೆಗಣಿಸಿ ಸುಣ್ಣದುರಿಗೆ
ಸಲಾಮು ಹೊಡೆದು
ಮುಗಳ್ನಗಬೇಕೊ!?
ತಿಳಿಯದವಳಂತೆ
ನಕ್ಕು ನಕ್ಕು ಹಗುರಗುತ್ತಾಳೆ,

ನಗುವಿನ ರಭಸಕೆ
ಎದ್ದು ಕುಣಿವ
ಉಸಿರ ನೋವಿಗೆ
ಮತ್ತೂ ನಕ್ಕು
ಮುದ್ದು ಮಾಡಿ
ಮದ್ದು ಇದುವೇ
ಎಂದು ಎದೆ ಗುದ್ದಿ
ಗದರಿಸುತ್ತಾಳೆ
‘ನಕ್ಕದ್ದು ಸಾಕು
ನಾಳೆಯ ನೋವಿಗೆ
ಅಣಿಯಾಗಿ ನಡಿಯಿರಿ’
ಎಂದು ಶಾಲೆಗೋಡುವ
ಕಂದನನ್ನು ಬೇಗ ಮಲಗಿಸುವ
ಅಮ್ಮನಂತೆ,

ತಟ್ಟಿ ಮಲಗಿಸಿ ನೋವ
ಕಣ್ಣ ಮುಚ್ಚತ್ತಾಳೆ;

ನಕ್ಕ ಎದೆ ಹಗೂರಾಗುವ
ಬದಲು ಭಾರವಾಗುತ್ತ
ತೂಗುತ್ತದೆ ಕತ್ತಲಿನೊಂದಿಗೆ
ನಿದ್ದೆ ನಾಟಕದಂಕಕ್ಕೆ
ಪರದೆ ಸರಿಸುತ್ತ
ಕನಸಲ್ಲಿ ನಗುವ
ಹಸುಗೂಸಂತೆ ಮಂದಹಾಸ
ಸೂಸುತ್ತಾಳೆ ಕತ್ತಲಲೆ
ಉಕ್ಕುವ ಬಿಕ್ಕ ನುಂಗುತ್ತ..

‍ಲೇಖಕರು Admin

August 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: