ದೀಪಾ ಗೋನಾಳ
ಮೆಲ್ಲಗೆ ಹೇಳಿದರು ಅವರು
ಗಾಂಧಿ ಇಲ್ಲ ಅಲ್ಲೀಗ..
ಎಲ್ಲಿ ಎಲ್ಲಿಲ್ಲ ಗಾಂಧಿ!?
ಅಂದೆ ಒಂದೇ ಉಸಿರಿನಲಿ
ಅದೇ ನಾನು ನೀನು
ಕುಶಲೋಪರಿಗೆ ಬಳಸುತ್ತಿದ್ದ
ಕಾರ್ಡುಗಳ ಮೇಲೆ ಅಂದರು
ಇನ್ನೂ ಮೆಲುವಾಗಿ,
ಅವಳಿಗೆ ದಿಗಿಲಾಯಿತು
ಹೌದೇ!?
ಶಿ ಸಾ ನಮಸ್ಕಾರಗಳು
ಅಜ್ಜಾ ನಾನಿಲ್ಲಿ ಕ್ಷೇಮ
ನೀವು ಕ್ಷೇಮವೆಂದು ಭಾವಿಸುತ್ತೇನೆ.
ಅಜ್ಜಾ,
ಕ್ಷೇಮವು ನಶಿಸುತ್ತಿದೆ
ಮೆಲ್ಲಗೆ
ಆದರೂ ಐವತ್ತು ಪೈಸೆಯ ಕಾರ್ಡು
ಐವತ್ತು ಪೈಸೆಗೆ ಸಿಗುತ್ತಿದೆ ಇಲ್ಲಿ
ಮಳೆಗಾಲದಲ್ಲಿ ಮಳೆ ಬರುವುದಿಲ್ಲಾ ಇಲ್ಲಿ
ಚಳಿಗಾಲದಲ್ಲಿ ಮರಗಳು ಮರಗಟ್ಟುವಷ್ಟು
ಚಳಿ ಇಲ್ಲಿ
ಬೆಳೆ ಬಂದಾಗಲೇ ನೆರೆಹಾವಳಿ.
ಇಲ್ಲಿ ಎಲ್ಲವೂ ಕ್ಷೇಮ!?

ಇಂತಿ ನಿಮ್ಮ ಮೊಮ್ಮಗಳು-
ಅಪ್ಪ ಬಳಸುತ್ತಿದ್ದಾಗ ಅದರ ಬೆಲೆ
ನಾಲ್ಕಾಣೆ ಇತ್ತಂತೆ
ಶಾಲೆಯ ಮಕ್ಕಳಿಗೆ
ಪತ್ರ ಬರೆಯಲು
ಕಲಿಸಲು ಸಾಲಿ ಮಾಸ್ತರು
ನಾಳೆ ಎಲ್ಲಾರು
ಕಾರ್ಡು ತನ್ನಿ
ಅಂದಾಗ
ರೂಪಾಯಿ ತರುತ್ತಾರೆ
ಕಡ್ಡಾಯ!!
ಎರಡು ಪತ್ರ ತಗೋ ಅಂದರೆ
ಉಹುಂ ಬಿಲ್ಕುಲ್
ಒಪ್ಪುವುದಿಲ್,
ಎಂಟಾಣೆಯ ಬಿಲ್ಲೆ ಅವನ ಬಳಿಯು ಇಲ್ಲ
ಇವಳ ಗಲ್ಲೆಯಲ್ಲೂ,
ಮತ್ತೊಬ್ಬ ಗೆಳಯನ್
ಜತ್ತು ಮಾಡಿಕೊಂಡು
ತಾನೊಂದು ಅವನೊಂದು
ಕೊಳ್ಳುತ್ತಾರೆ ಕಡೆಗೂ..
ಚಿತ್ರ ಬದಲಾಗುತ್ತಿವೆ
ಕತ್ ಗಳು
ಗಾಂಧಿ ಮೊಕ
ನೋಡಿ ಅಭ್ಯಾಸವಾದ
ಅವಳು ಹುಡುಕುತ್ತಾಳೆ
ಕವರಿನ ಮೇಲೆ
ಪತ್ರದ ಮೇಲೆ
ಮತ್ತೆ ಮತ್ತೆ
ಗಾಂಧಿಯನ್ನೆ.
ಅವನು ಮೊದಲು
ಹೇಳಿದಾಗ ಗಾಭರಿಗೊಂಡುವಳು
ರಾಜೀ ಮಾಡಿಕೊಳ್ಳುತ್ತಾಳೆ
ಈಗೀಗ
ಕಾಲದೊಂದಿಗೆ
ಕಚೇರಿಯಲ್ಲೂ
ವಿಚಾರದಲ್ಲೂ
ಬದುಕಿನಲ್ಲೂ
ಪ್ರತಿ ಅನಿರೀಕ್ಷಿತ ಅನಪೇಕ್ಷಿತ
ಬದಲಾವಣೆಗೂ






0 Comments