ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ದಿ ಫ್ರೀಡಂ ಥಿಯೇಟರ್’ ಉಳಿಸಿ..

ಪ್ಯಾಲೆಸ್ಟೈನ್ ನ ಒಂದು ರಂಗ ತಂಡವಾದ ‘ದಿ ಫ್ರೀಡಂ ಥಿಯೇಟರ್’ ತನ್ನ ರಂಗನಡೆಗಳಲ್ಲಿ ಸಾಂಸ್ಕೃತಿಕ ಪ್ರತಿರೋಧದವನ್ನು ವ್ಯಕ್ತಪಡಿಸುತ್ತಾ ಇಸ್ರೇಲ್‌ ದೇಶದ ಆಕ್ರಮಣದಿಂದ ತಮ್ಮ ದೇಶದ ಉಳಿವಿಗಾಗಿ ಹೋರಾಟ ನಡೆಸುತ್ತಿದೆ. ಎಂಟು ವರ್ಷಗಳ ಹಿಂದೆ ಈ ತಂಡ ಬೆಂಗಳೂರಿಗೆ ಬಂದಾಗ ಅವರ ನಾಟಕವನ್ನು ‘ಸಮುದಾಯ’ ಕರ್ನಾಟಕ ಪ್ರಾಯೋಜಿಸಿತ್ತು.

ಆ ತಂಡವೀಗ ಇಸ್ರೇಲ್ ಸೈನಿಕ ರ ನೇರ ದಾಳಿಯ ಬಲಿಪಶುವಾಗಿದೆ. ಯಾವುದೇ ದುರಾಕ್ರಮಣವನ್ನು ನಾವು ಖಂಡಿಸಬೇಕಿದೆ. ಇಸ್ರೇಲ್‌ ನಡೆಸುತ್ತಿರುವ ಈ ಭಯೋತ್ಪಾದನೆಯನ್ನೂ ಖಂಡಿಸಲೇಬೇಕು. ದ ಫ್ರೀಡಮ್‌ ಥಿಯೇಟರ್‌ ಮೇಲಾಗಿರುವ ದಾಳಿ ಲೋಕಸಂಸ್ಕೃತಿಯ ಮೇಲಿನ ದಾಳಿ. ಶಾಂತಿಯುತ ಪ್ರತಿರೋಧದ ಮೇಲಾಗಿರುವ ದಾಳಿ. ಅಹಿಂಸೆಯನ್ನು ಹೋರಾಟದ ಅಸ್ತ್ರವೆಂದು ನಂಬಿದ, ನಂಬಿ ಗೆದ್ದ ಈ ದೇಶದ ಜನ ಈ ದಾಳಿಯನ್ನು ವಿರೋಧಿಸುವುದರಲ್ಲಿ ಮೊದಲಿಗರಾಗಬೇಕು.
ಟಿ. ಎಫ್ಆ.ಟಿ ಮೇಲಿನ ಆಕ್ರಮಣ ಖಂಡಿಸಿ ಜುಲೈ 15 ರಂದು ಸಂಜೆ 7 ರಿಂದ ಒಂದು ಆನ್‌ಲೈನ್ ಸಭೆ ಏರ್ಪಡಿಸಲಾಗಿದೆ.

ಸುಧನ್ವಾ ದೇಶಪಾಂಡೆ, ಜನ ನಾಟ್ಯ ಮಂಚ್‌, ನವದೆಹಲಿ ಅಲ್ಲಿನ ಇಂದಿನ ಸ್ಥಿತಿಯ ಕುರಿತು ಮಾತನಾಡುತ್ತಾರೆ.

‍ಲೇಖಕರು admin j

12 July, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading