ದಾದಾಪೀರ್ ತರೀಕೆರೆ
1.
ಬಿಸಿಲಿಗೆ ಬೆವರಿ
ನಿನ್ನ
ಗಲ್ಲದಿಂದ
ಉದುರಿದ
ಮೇಕಪ್ ಮಿಶ್ರಿತ
ಬೆವರ
ಹನಿಗಳ
ಘಮವ
ನೆನಪಿಸಿಕೊಂಡು
ನಸುಕಿನಲ್ಲಿ ಎದ್ದು
ಮಂಜು ಮುಸುಕಿದ
ಟೈಮಿನಲ್ಲಿ
ಹಸಿರ ಹುಲ್ಲ ಮೇಲೆ
Walk..ಮಾಡುತ್ತ
ಇಬ್ಬನಿಯ ಹನಿ ಹನಿಗಳ
ಅಘ್ರಾಣಿಸಿದೆ ;
ಬಿಸಿಲಿಗೆ ಕರಗಿಬಿಡುವ
ಮಂಜಿನ ಹನಿಗಳು
ನಿನ್ನ ಬೆವರ
ಮುತ್ತುಗಳಂತಲ್ಲ

‘ಸಪ್ಪೆ ಸೋಡದಂತೆ
ಗೆಳತಿ
ಕವಳ’
ನಿನ್ನಷ್ಟು ಸಿಹಿಯಲ್ಲ….!
2.
ಮಂಜಿನ ಮುತ್ತ
ಪೋಣಿಸಿ
ನೀನು ಖಾಲಿ ಗಲ್ಲದಿಂದ
ಬರುವ
ದಾರಿಯ
ಕಾದು ನಿಂತರೇ
ನೀನು
ಸೂಯ೯ ಮೂಡಿದ
ಮೇಲೆ
ನೆಲಕ್ಕೆ
ಕಾಲಿಡುವ
ಅಹಂಕಾರಿ
3.
ಇಬ್ಬನಿ
ನೆಲದ
ವಿರಹದ
ನೋವ
ಮಿಡಿವ
ಕಂಬನಿ
4.
ಆಕಾಶವ ನೆನೆದು
ಭೂಮಿ ರಾತ್ರಿ
ಪೂರ್ತಿ ಅತ್ತಿರುವ
ಕುರುಹು
ಇರಬೇಕು ಈ
ಇಬ್ಬನಿ

ನೆಲದ ಮೈಯೆಲ್ಲಾ
ಒದ್ದೆ ಒದ್ದೆ
5.
ಸಂಕ್ರಾಂತಿಗೆ
ಪಥ ಬದಲಿಸಲು
ಹೊರಟ
ಸೂಯ೯ನಿಗೆ
ನೆಲವು
ಕೊಟ್ಟ
ವಿದಾಯದ
ಉಡುಗೊರೆ
ಈ ಇಬ್ಬನಿ






0 Comments