ಸಿದ್ದುಜನ್ನೂರ್
ದಲಿತರ ಮನೆ
ಬಾಬಾಸಾಹೇಬರ ಕನಸು
ನನಸು ಮಾಡಲು ಹುಟ್ಟುವ
ಕೆಚ್ಚೆದೆಯ ಮಕ್ಕಳ ಮನೆ…..
ಹೋರಾಟದ ಕಿಚ್ಚಿರುವ
ಪ್ರತಿರೋಧದ ಕೆಚ್ಚಿರುವ
ಗಟ್ಟಿಗುಂಡಿಗೆಯ
ಅಕ್ಕಂದಿರು
ತಂಗಿಯಂದಿರು
ಅಣ್ಣಂದಿರು
ತಮ್ಮಂದಿರು
ಹುಟ್ಟುವ ಮನೆ…..
ಬುದ್ದನ ಅಂತಃಕರಣ
ಭೀಮನ ಜ್ಞಾನ ಪ್ರಸರಣ
ಹೊಂಬೆಳಕಿನಿಂದುದಯಿಸಿದ
ಕಲಿಗಳು
ಕಿಡಿಗಳು
ಜ್ವಾಲೆಗಳು
ಹುಟ್ಟುವ ಮನೆ…..
ಓದಿ-ಬರೆದು
ಚಿಂತಿಸಿ
ಜಾಗೃತಿ ಮೂಡಿಸಿ
ಸಮಾಜ ಕಟ್ಟುವ
ತಿದ್ದುವ
ಭೀಮ ಕುಡಿಗಳು
ಹುಟ್ಟುವ ಮನೆ…..
ಗುಲಾಮಗಿರಿ ಒಪ್ಪದ
ಸ್ವಾಭಿಮಾನಿ ಹುಲಿಗಳು
ಬಾಬಾಸಾಹೇಬರ ಅಪ್ಪಿದ
ಆಳುವ ಘರ್ಜನ ಸಿಂಹಗಳು
ಹುಟ್ಟುವ ಮನೆ…..
ಗುಡಿಸಲಿನಲ್ಲಿ
ಜೋಪಡಿಯಲ್ಲಿ
ಮಳೆ ಬಿರುಗಾಳಿ
ಯಾವುದನ್ನು ಲೆಕ್ಕಿಸದೆ
ಅಪ್ಪ ಭೀಮರು ಹೇಳಿದ ಹಾಗೆ
ಅದೃಷ್ಟವ ನಂಬದೆ
ಹಣೆಬರಹವ ಅಳಿಸಿ
ತಮ್ಮ ಬದುಕಿನ ಬರಹವ
ಜೈಭೀಮರು ಹೇಳಿದ ಹಾಗೆ
ಓದಿ ಜ್ಞಾನ ಸಂಪಾದಿಸಿ
ತಾವೆ ಬರೆದುಕೊಳ್ಳುವ
ದೊರೆರಾಜರಾಣಿಯರು
ಹುಟ್ಟುವ ಮನೆ……
ಬುದ್ದನಡೆಗೆ ನಡೆವ
ಬದ್ದತೆಯ ಬಿರುಸು ಹೆಜ್ಜೆಗಳು
ಸದಾ ಜೈ ಭೀಮ್ ಉದ್ಗಾರ ನುಡಿವ
ಭೀಮ ಒಗ್ಗಟ್ಟಿನ ಚಿಲುಮೆಗಳು
ಹುಟ್ಟುವ ಮನೆ…..
0 ಪ್ರತಿಕ್ರಿಯೆಗಳು