ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಣಿವು…

ಜಿ ಲೋಕೇಶ

ದಾರಿಯಲ್ಲೀಗ
ದಣಿವು
ಜೊತೆಯಿರದ
ದಾರಿಯಲ್ಲಿ  ಕಾಲುಗಳು
ಸವೆಯುತ್ತಿವೆಯಷ್ಟೇ

ಗುರಿಗಳನ್ನೇ ಗೆಲುವಾಗಿಸಲು
ಬಾಣ ಬಿಟ್ಟರೂ
ಹಿಮ್ಮುಖವಾಗಿ ಬಿಡಬೇಕೆಂಬ
ಸಂದರ್ಭಗಳು ತ೦ದ್ದೊಡ್ಡುವ
ಮಾತುಗಳಿಗೆ ಮನವು
ಬಲವಾಗುವತ್ತ ಸಾಗುತ್ತದೆ.

ದಣಿವು ಬೆವರ ಹನಿಗಳಾಗಿ
ತೋಯಿಸುತ್ತಿದ್ದರೂ
ತೋರಲೊಪ್ಪದ ಮನವನ್ನು
ಹಿಡಿದು ಎಳೆಯಲು ಅಣಿಯಾಗಲು
ತಯಾರಾಗುತ್ತಿರುವಾಗಲೇ

ನಿರ್ಧಾರದ ಎಳೆಗಳನ್ನು
ಹಗ್ಗವಾಗಿಸುವಲ್ಲಿ
ದಾರಿಯನ್ನೇ ಪಕ್ಕಕ್ಕೆ
ಸರಿಸುವಲ್ಲಿ
ನಿನ್ನೊಲವಿನ ಮಾತುಗಳು
ಅದೆಲ್ಲಿ ಕಾಯುತ್ತಿರುತ್ತವೆಯೋ
ದುತ್ತನೇ ಎದೆಗಿಳಿದು
ಮತ್ತೆ ಸಹಕಾರಿ ಸ್ಥಾನದಲ್ಲಿರುತ್ತವೆ.
ಕೈ ಜೋಡಿಸುತ್ತವೆ.
ನಾನೇ ಇಲ್ಲವೆಂದುಕೊಂಡರೂ
ಬೆನ್ನಿಗಂಟಿಕೊಂಡೆ
ನೆರಳಾಗಿ ನಿಲ್ಲುತ್ತಿರುವೆಯಾ?

‍ಲೇಖಕರು Admin

8 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading