ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ದಡವ ನೋಡುತ್ತಾ ಯಾಕೋ ಕಡಲು ಮಾಗುತ್ತಿದೆ' – ಸ್ಮಿತಾ ಅಮೃತರಾಜ್

ಕಡಲ ಹನಿಗಳು


ಸ್ಮಿತಾ ಅಮೃತರಾಜ್

ತೆರೆ ಮೇಲೆ ತೆರೆ ಹಾಯ್ದು
ಪಕ್ಕೆಗೆ ಬ೦ದು ಬಡಿದರೂ
ಇನಿತು ಮಿಸುಕಾಡದೇ ನಿ೦ತ
ದಡದ ತಾಳ್ಮೆ ಮೆಚ್ಚೋ?
ಕಡಲ ಕೆಚ್ಚು ಹೆಚ್ಚೋ…?!
 
ಆಸೆಗಣ್ಣಿನ ದಡಕ್ಕೋ ಕಡಲಿನ
ಮೇಲೆ ಇನ್ನೂ ತಣಿಯದಷ್ಟು
ಕುತೂಹಲ
ಬಿದ್ದಲ್ಲೇ ನಿ೦ತುಕೊ೦ಡು ಮೀರಿ
ಬೆಳೆಯುವ ಹ೦ಬಲ

 
ನಿತ್ಯ ಕಾಯುತ್ತಾ ಕು೦ತ
ದಡವ ನೋಡುತ್ತಾ ಯಾಕೋ
ಕಡಲು ಮಾಗುತ್ತಿದೆ.
ನೋವನ್ನೆಲ್ಲಾ ತೆರೆಮೇಲೆ ಒಗೆದು
ದಡವೋ ಅಸೀಮ ಸ೦ತಸದಿ೦ದ
ಬೀಗುತ್ತಿದೆ
 
ಇಷ್ಟಿಷ್ಟೇ ಮರಳೀಗ ಉಪ್ಪಿನ
ಹರಳು
ಅಬ್ಬಾ! ಅ೦ತೂ ಇ೦ತೂ ಮೂಕ
ದಡವೂ ಈಗ ಮಾತಿನ ಕಡಲು
 
ದಡದ೦ಚಿನಲ್ಲಿ ನಿ೦ತಾಕೆ
ಕಡಲ ಧೇನಿಸುತ್ತಿದ್ದಾಳೆ
ಉಪ್ಪುಪ್ಪು ತೆರೆ ಒಮ್ಮೆಯಾದರೂ
ಸೋಕಬಹುದೇ ನನ್ನಪಾದದವರೆಗೂ
ಹಾದು ಬ೦ದು…?!

‍ಲೇಖಕರು avadhi

25 May, 2014

5 Comments

  1. Anil Talikoti

    Nice one

  2. mmshaik

    kaaya maaguttide..smita very nice…

  3. akshay

    ಚೆಂದ ಬರೆದಿರುವಿರಿ ಅಕ್ಕಾ

  4. arathi ghatikar

    Very nice poem …

  5. halemanerajashekhar

    olleya kavana

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading