‘ನಿರೀಕ್ಷೆ’
– ರಮೇಶ್ ನೆಲ್ಲಿಸರ

ಎಷ್ಟೊಂದು ಬದಲಾಗಿದೆ ಈ ನದಿ
ಅಳಿದುಳಿದ ನೀರು ಬತ್ತಿ
ಸವಕಲಾಗಿ,
ಎಲ್ಲೆಲ್ಲೂ ಮರಳಿನ ರಾಶಿ.
ದಡದಿ
ಮೂಡಿರುವ ಹೆಜ್ಜೆಗಳಿಗೆ
ವಿಳಾಸವಿಲ್ಲ.
ಹೆಗಲೇರಿದ ನೆನಪುಗಳ
ಭಾರ ,ಸರದಿಯಂತೆ
ಎಲೆಯುದುರಿಸಿವೆ, ದಡದ ಮರಗಳು
ಹರಡಿರುವ ಆಗಸ,
ಎಂದಿನಿಂದಲೋ ಜೊತೆಗಿರುವ
ಸ್ನೇಹಿತ,
ನದಿಗೆ ವಯಾಸ್ಸಾಗಿದೆ
ನೀರಿಗೆ ಮುಗಿಯದ ಯೌವನ
ನೂರು ನದಿಗಳ ತಿಂದ
ಉಪ್ಪು ಸಾಗರ
ಇನ್ನೇನು ಸಮೀಪಿಸುತಿದ್ದರೂ
ನದಿಯೊಳಗೆ ನೀರಿಲ್ಲ!
ಸಮುದ್ರದ ನೀರು
ನದಿಯತ್ತ ತಿರುಗಿದೆ
ಬರುವ ಮಳೆಗೆ
ನದಿ ಮೊದಲಿನಂತಾಗಬಹುದು!
ಮಡುಗಟ್ಟಿರುವ ರಕ್ತನಾಳಗಳೂ
ಅರಳಿ,ಉಸಿರು ಹರಿಯಬಹುದು
ನನಗೂ ನದಿಯಂತಹದೇ
ಸಣ್ಣ ನಿರೀಕ್ಷೆ….






Artha purna kavana dahabarithavaagi
uttama kavana…
olleya kavana. nimagaste alla e jagattu nintirode nireksheyalli. tumba hidisitu
ಒಳ್ಳೆಯ ಪ್ರತಿಮೆಯ ಕವಿತೆ
nimma nirIkshe nijavagali