ಕಡಲ ಹಾಡು
ಆರತಿ ಘಟಿಕಾರ್
ದುಬೈ
ತೂಗುವ ತಂಗಾಳಿ ,ಮುಸ್ಸಂಜೆಯ ಹೊನಲು
ತಂಪಾಗಿ ಮಲಗಿದೆ ಬೆಚ್ಚನೆಯ ಮರಳು
ತನ್ನದೇ ಗುಂಗಿನಲಿ ಅವಿಶ್ರಾಂತದಲೆಗಳು
ನಾನಲ್ಲಿ ಮೌನ ಸೇತುವೆ , ಕುದಿವ ಒಡಲು .
ಹೆಜ್ಜೆಗಳು ನೂರಾರು ಸುತ್ತ ಮುತ್ತಲೂ
ಇಣುಕಿ ನೋಡಿವೆ ಬೆಳ್ಳಿ ಮೋಡಗಳ ಸಾಲು
ಅಲೆಗಳದೆ ಬೆರಗು , ತಣೆಯುವವರೆಗೂ
ಹಾಸಿ ಹೊದ್ದಂತೆ ವಿಸ್ಮಯದಾ ಸೆರಗು
ತುಟಿ ಬಿಚ್ಚದ ಕಡಲಿಗೆ ನನ್ನವೇ ಕಥೆಗಳು
ಬಿಚ್ಚಿಕೊಂಡಂತೆ ಎಳೆಎಳೆಯಾಗಿ ಕಟ್ಟಿಟ್ಟ ನೂಲು .
ಹರವಿಕೊಂಡ ರಾಶಿ ಶಂಖಗಳಿಗೊಂದಿಷ್ಟು
ದಕ್ಕೀತೆ ಕಡಲ ದಿವ್ಯ ಮೌನ ?
ಅದಕ್ಕೂ ಕಿವಿಯಾಗುವ ಮರಳ ಕಣ
ಮುತ್ತಿನಾಸೆಗಿಲ್ಲಿ ಲೋಕವೇ ಮರುಳು
ಹಪಾಹಪಿ ಬಾಳ ಲೋಹದ ಸರಳು
ತೆರೆಗಳಾಟವಿದು ಯಾರಿಗಿಲ್ಲ ಏಳು – ಬೀಳು ?
ಬೆಳಗುತ್ತಿರುವ ಸಂಜೆ ಸೂರ್ಯನ ಕದಲಾರತಿ
ಹಾಲ್ಗೆನ್ನೆ ಚಂದಿರನ ಮತ್ತೆ ಕಾಣುವಾ ಸರತಿ
ಅವ್ಯಕ್ತ ಭಾವಸ್ಪುರಣದಾರೋಹ ನನ್ನಲೂ
ಮೀರುತಾ , ಏಕತಾನತೆಯ ಬಂಜೆ ಬಯಲು
ಹೆಪ್ಪುಗಟ್ಟಿದೆದೆಯಲಿ ಕರಗುತಿದೆ ಪ್ರಶಾಂತ ಕಡಲು .







ಚೆನ್ನಾಗಿದೆ
Chennagide
ಚೆನ್ನಾಗಿದೆ ಕವಿತೆ
ಅರ್ಥಪೂರ್ಣ ಕವನ ಆರತಿಯವ್ರೆ,,,,
ಮೀರುತಾ , ಏಕತಾನತೆಯ ಬಂಜೆ ಬಯಲು
ಹೆಪ್ಪುಗಟ್ಟಿದೆದೆಯಲಿ ಕರಗುತಿದೆ ಪ್ರಶಾಂತ ಕಡಲು,,,,,,,,,
ಮನದಲ್ಲಿ ಉಳಿಯುವ ಸಾಲುಗಳು!
Kavithe tumbaa chennagide Odalu Khushi Aagutthade
Rajashekhar Honakere
avana tumbaa chennaagide. “haravikonda ……..marala kana” “eeiu beelu” sahaja.
ಕವನ ಓದಿ ಮೆಚ್ಚಿಕೊಂಡ ಎಲ್ಲ ಸನ್ಮಿತ್ರರಿಗೂ ಧನ್ಯವಾದಗಳು 🙂
ತುಟಿ ಬಿಚ್ಚದ ಕಡಲಿಗೆ ನನ್ನವೇ ಕಥೆಗಳು….
ಈ ಸಾಲು ನನಗೆ ತುಂಬಾನೇ ಇಷ್ಟ ಆಗಿದ್ರಲ್ಲಿ ಆಶ್ಚರ್ಯವಿಲ್ಲ… ಆದರೆ ಇಡೀ ಕವನ ಮರಳುನಾಡಿನ ಮೌನರಾಗ
ಕಡಲ ಮೌನದ ಮುಂದೆ
ಪದಗಳ ರಾಶಿ
ಬಹಳ ಚೆನ್ನಾಗಿದೆ