– ಅನು ಪಾವ೦ಜೆ
ಅವನೂರಿ೦ದ
ಸಾಗಿ ಬ೦ದ
ತಣ್ಣಗಿನ ಸುಳಿಗಾಳಿ
ಕೈಗೆ ಸಿಗದೇ
ನುಸುಳುತ್ತಿತ್ತು…
… ಅದರೊಳಗೆ
ಸದ್ದಿಲ್ಲದೇ….
ಅದರಷ್ಟಕ್ಕೆ ತೇಲುತ್ತಿತ್ತು
ನೀಲನೀಲ ಚಿಟ್ಟೆ….
ನಾನೂ ಕೈಬಿಟ್ಟೆ….
ಕಣ್ಮುಚ್ಚಿ…. ಎದೆಯೊಡ್ಡಿ….
ಗಾಳಿಗೆದುರಾದರೆ
ಅದು ನನ್ನ ಸುತ್ತೆಲ್ಲಾ
ಪೂರ್ತಿಯಾಗಿ
ಮುತ್ತಿಕೊ೦ಡಿತು…
ಸುತ್ತಿಕೊ೦ಡಿತು…
ಥೇಟ್
ಅವನ೦ತೆಯೇ….








ಥೇಟ್ ನಿಮ್ಮಂತೆಯೇ ಸುಂದರ ಚಿತ್ರಕವನ ..ಅಭಿನಂದನೆಗಳು .
kai bitta ghalige manassu buddhanaagutte ….
ಚಿಕ್ಕದಾಗಿದೆ, ಚೊಕ್ಕದಾಗಿದೆ,ಮೋಹಕವಾಗಿದೆ..
ಸೊಗಸಾಗಿದೆ. ಆದ್ರೆ ನಿರಾಸೆಯಾಯಿತು ಮೇಡಮ್! ಇನ್ನೂ ಮುಂದೆ ಏನೋ ಹೇಳುತ್ತೀರಿ ಅಂತ ಕಣ್ಣೋಡಿಸಿದರೆ ಮುಕ್ತಾಯ!
chennagide
ಕಣ್ಮುಚ್ಚಿ ಅನುಭವಿಸಿದರೆ ನಿಜಕ್ಕೂ ಎಲ್ಲೆಲ್ಲೂ ಅವನೇ!
ಮಾರ್ಮಿಕವಾದ ಕವಿತೆ ಇಷ್ಟವಾಯ್ತು!
ಕಣ್ಮುಚ್ಚಿ…. ಎದೆಯೊಡ್ಡಿ….
ಗಾಳಿಗೆದುರಾದರೆ
ಅದು ನನ್ನ ಸುತ್ತೆಲ್ಲಾ
ಪೂರ್ತಿಯಾಗಿ
ಮುತ್ತಿಕೊ೦ಡಿತು…
ಸುತ್ತಿಕೊ೦ಡಿತು…
ಥೇಟ್
ಅವನ೦ತೆ……excelllent
nanage ondu sanna clue kodtira nimma kavanada hageya nimma sahityda prabhava yaarinda.