ಥೇಟ್ರು ಬರೀ ನೆನಪು ಮಾತ್ರ..

ಸುಮನ್ ಕಿತ್ತೂರ್ 

ಅಪ್ಪ ಕೆಲಸ ಮಾಡುತ್ತಿದ್ದ ಸಿನಿಮಾ ಥೇಟ್ರು!

ಅದೀಗ ಕಲ್ಯಾಣ ಮಂಟಪ ಆಗಿ ಮಾರ್ಪಾಡಾಗಿದ್ದರೂ ಅಂದು ನನ್ನ ಪಾಲಿಗದು ದಿವ್ಯ ಜಗತ್ತು…

ಅಪ್ಪ ನಾನು ಮತ್ತು ಸಿನಿಮಾ…ಕೆಲವು ನೆನಪುಗಳು ನಮ್ಮನ್ನು ಮಕ್ಕಳಂತಾಗಿಸುತ್ತವೆ.

tent cinema1ಅಪ್ಪನನ್ನು ಪೀಡಿಸಿ ಜೊತೆ ಹೋಗಿ ನೋಡುತ್ತಿದ್ದ ಸಿನಿಮಾಗಳು ಇಂದಿಗೂ ಸಿಹಿ ನೆನಪು. ಸಿನಿಮಾ ಅಂದ್ರೆ ಕೋಟ್ಯಾಂತರ ನೆನಪುಗಳು. ಥೇಟರನಲ್ಲಿ ಹೊಸ ಸಿನಿಮಾಗಳ ಹಾಕುವಿಕೆ ಕಾಯುತ್ತಿದ್ದ ದಿನಗಳು ಈಗಲೂ ಕಣ್ಣ ಮುಂದೆ ಇವೆ.

ಅಪರೂಪಕೊಮ್ಮೆ ಬರುವ ಹೊಸ ಸಿನಿಮಾ ನೋಡಲು ತುದಿಗಾಲ ಮೇಲೆ ನಿಂತಿರುತ್ತಿದ್ದೆ.  ಹಳೆಯ ಥೇಟರಿನಲ್ಲಿ ಸಿನಿಮಾ ನೋಡುವಾಗ ಬಣ್ಣ-ಬಣ್ಣದ ಕನಸುಗಳು ಕಾಣುತ್ತಿದ್ದೆ. ಫೈಟು ಸೀನಿನಲ್ಲಿ ಜನ ಸಿಳ್ಳೆ, ಕೇಕೆ ಹೊಡೆದು ಸಂಭ್ರಮ ಪಡುತ್ತಿದ್ದ ಕ್ಷಣ ಮರೆಯೊಕೆ ಆಗಲ್ಲ.  ಜನ ಜಾಸ್ತಿ ಬಂದ್ರೇ ಮೂಲೆಯಲ್ಲಿ ನಿಂತಕೊಂಡೇ ಸಿನಿಮಾ ನೋಡಬೇಕಿತ್ತು. ಸಿನಿಮಾ ಹಾಕಿದ ಮೊದಲ ದಿನಗಳಲ್ಲಿ ಥೇಟರ್ ಪುಲ್ ಆಗಿರತ್ತಿತ್ತು ಸಿನಿಮಾ ಥೇಟ್ರು ನನ್ನ ಪಾಲಿನ ಸ್ವರ್ಗ ಆಗಿತ್ತು.

ಇಂದಿನ ಪಂಚತಾರಾ ಹೋಟೆಲ್ ನಂತಿರುವ ಐಷಾರಾಮಿ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ನೋಡುವ ಪರಿಸ್ಥಿತಿ ಬಂದ್ದೋಗಿದೆ. ಥೇಟರ್ ಗಳಿದ್ದರೂ ಆಗಿನ ಕಾಲದ ಹಾಗೇ ಸಿನಿಮಾ ನೋಡುವ ಜನರಿಲ್ಲ. ಯಾರಿಗ್ಯಾರು ಪರಿಚಯವಿಲ್ಲದಂತೆ ಮೂಕ ಪ್ರೇಕ್ಷಕರಂತೆ ಸಿನಿಮಾ ವೀಕ್ಷಿಸುವ ಜನ.  ಯಾವತ್ತು ಜನರಿಂದ ತುಂಬದ ಥೇಟ್ರುಗಳು.

ಕೇಕೆ, ಸಿಳ್ಳೆಗಳಿಲ್ಲದ ಮಲ್ಟಿಪ್ಲೆಕ್ಸ್ ಗಳನ್ನು ನೋಡಿದಾಗ ಹಳೆಯ ನೆನಪುಗಳು ಕಣ್ಣ ಮುಂದೆ ಬಂದ ಹೋಗ್ತವೆ.  ಸಿನಿಮಾ ಥೇಟ್ರ ಇರೋ ದಾರಿಯಲ್ಲಿ ಹೋದರೆ ಬಾಲ್ಯದ ನೆನಪುಗಳು ಮರುಕಳಿಸುತ್ತವೆ.  ಸಿನಿಮಾಗಳನ್ನು ಎಂಜಾಯ್ ಮಾಡುವ ಮನಸ್ಸುಗಳ ಸಂಖ್ಯೆಗಳು ಕಮ್ಮಿಯಾಗುತ್ತಿವೆ. ನೂರಾರು ಸಿನಿ ಪ್ರಿಯರಿಗೆ ಸಿನಿಮಾ ತೋರಿಸಿದ ಥೇಟ್ರು  ಇಂದೂ ಮದುವಣಗಿತ್ತಿಯಂತೆ ಸಜ್ಜಾಗಿ ಕಲ್ಯಾಣ ಮಂಟಪವಾಗಿ ತಲೆ ಎತ್ತಿ ನಿಂತಿದೆ. ನನಗೆ ಸಿನಿಮಾ ಅಂದ್ರೆ ಏನು ಎಂಬುದನ್ನು ಕಲಿಸಿದ ಥೇಟ್ರು ಬರೀ ನೆನಪು ಮಾತ್ರ.

tent cinema3

Theater2

‍ಲೇಖಕರು admin

July 16, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: