ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇದ ಗಂಧದಂಥ ಪರಿಮಳದವನಿಗಾಗಿ

untitled.jpgಇದು ಟೀನಾ ಬರೆದ ಕವನ. ಈ ಕವಿತೆಯೇ ತೇದ ಗಂಧದಂತಿದೆ. ಆ ಕಾರಣಕ್ಕಾಗಿಯೇ ಇಲ್ಲಿ ನಿಮಗಾಗಿ. ಇನ್ನೂ ಹೆಚ್ಚು ಕವನಗಳು ಬೇಕಾದರೆ ಟೀನಾರ ಬ್ಲಾಗ್ ಗೆ ಲಗ್ಗೆ ಹಾಕಿ.

1.
ನಿನ್ನ ನಗುವನು
ಸುಮ್ಮನೆ
ಬಚ್ಚಿಟ್ಟುಕೊಂಡಿರುವೆ
ಎಲ್ಲರಿಂದ
ಸಂಜೆ ಕಳೆವಾಗ
ಆಕಾಶಮಲ್ಲಿಗೆ ಹೂಗಳ
ಹಾದಿಯಿಂದ
ಹೇಗಾದರು
ಅಚ್ಚರಿ ಉಕ್ಕುವಂತೆ
ಬಂದೀಯ
ಎಂದು ಕಾದು
ಕುಳಿತಿರುವೆ

2.
ನನ್ನ ಈ ಅನುಕೂಲ
ನಿನ್ನ ಮಗುವಿನ ಮುಗ್ಧತೆ
ಅವನ ಮುಗುಳುನಗೆ
ಅವಳ ಹುಬ್ಬುಗಂಟು
ನನ್ನ ಅಸಹಾಯಕತೆ
ನಿನ್ನ ಮಾತುಕತೆ
ಎಲ್ಲವನು ಅಳೆದು ಸುರಿದು
ತೂಕಕ್ಕೆ ಬಿಸುಟು
ನಿನ್ನ ಮತ್ತಿನಲಿ
ಹಾಯಾಗಿ
ಕಾಲು ಚಾಚಬೇಕು
ಎಂಬ ಬಯಕೆ.

3.
ಬಿಸಿ ಹೊಯಿಗೆಯ ಮೇಲೆ
ನೀರು ಹುಯ್ದ ಹಾಗೆ
ನಮ್ಮಿಬ್ಬರ ಸಂಭಾಷಣೆ
ಹೊಗೆಯೆದ್ದು ಭಗ್ಗನೆ
ಎಲ್ಲ ಇಂಗಿದ ಹಾಗಾಗಿ
ಮಾತಿನಲಿ ಇರುವಾಗಲೆ
ಪುನಃ ನೀರಡಿಕೆ

-ಟೀನಾ ಶಶಿಕಾಂತ್

‍ಲೇಖಕರು avadhi

5 February, 2008

2 Comments

  1. chetana thirthahalli

    ಕಣ್ಣ ಕೋಣೆಯ ಕಿಟಕಿಯಲ್ಲಿ, ಅವಧಿಯಲ್ಲಿ, ಅಲ್ಲಿ- ಇಲ್ಲಿ, ಎಲ್ಲಾ ಕಡೇನೂ ನಿನ್ನ ಪಡಾಖಾನೆಯ ಹುಡುಗಿಯನ್ನ ಮತ್ತೆ ಮತ್ತೆ ನೋಡೋದಂದ್ರೆ ನಂಗೆ ತುಂಬಾ ಖುಶಿ.
    ಅವಳು ನಮ್ಮೆಲ್ಲರ ಪಿಸುಮಾತುಗಳನ್ನ ಕದ್ದು, ಜಾಹೀರು ಮಾಡ್ತಿದಾಳೆ!!

    ನಲ್ಮೆ,
    ಚೇತನಾ

  2. Tina

    ಪ್ರ್ರೀತಿಯ ಚೇತೂ,
    ಪಡಖಾನೆಯ ಹುಡುಗಿಗೆ ಎಲ್ಲರ ಪಿಸುಮಾತುಗಳನ್ನ ಕದ್ದು ಜಾಹೀರು ಮಾಡೋದೇ ಖುಶಿ!
    ಟೀನಾ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading