ಬರಹಗಾರರಾದ ,
ಶ್ರೀ ಪರಮೇಶ್ವರ್ ರವರಿಗೆ ಮುರಳೀಧರ ಗೀತಾಚಾರ್ಯ ಮಾಡುವ ನಮನ…
ನನ್ನ ಪರಿಚಯ ನಿಮಗೆ ಇಲ್ಲ ನಿಮ್ಮ ಪರಿಚಯ ನಿಮ್ಮ ಬರವಣಿಗೆ ಶಕ್ತಿಯಿಂದ ಆಗ್ತಾ ಇದೆ….
ಮೊನ್ನೆ ನಿಮ್ಮ ಪುಸ್ತಕ ತೇಜಸ್ವಿ ಸಿಕ್ಕರು ಓದಿದೆ…
ಓದಿದ ನಂತರ ಇನ್ನು ನನ್ನ ಮನಸ್ಸು ಮೂಡಿಗೆರೆಯೆಲ್ಲಿ ಇದೆ….
ನೀವು ನಿಮ್ಮ ಸ್ನೇಹಿತರು ನಡೆಸಿದ ಈ ಮಹಾ ಯಾಗ ಶಾಶ್ವತವಾಗಿ ನಿಲ್ಲಲಿದೆ……
ನಿಮ್ಮ ತಮ್ಮ ನವರಿಗೆ special thanks…

ನಿಮ್ಮ ಬರವಣಿಗೆ ರೀತಿ ಕೂಡ ಎಂಥವರನ್ನೂ ಕೂಡ ಓದಿಸಿಕೊಂಡು ಹೋಗತ್ತದೆ…
ಶ್ರೀ ತೇಜಸ್ವಿರವರ ಬಗ್ಗೆ ಹೇಳಿದವರು ಕೂಡ ಅವರನ್ನು ತುಂಬಾ ಹೊಗಳದೆ,/ ಇಲ್ಲ ಸಲ್ಲದನ್ನು ಹೇಳದೆ ನೇರವಾದ ವಿಚಾರಗಳನ್ನು ತಿಳಿಸಿದ್ದಾರೆ….
ನೀವು ಓಡಾಡಿದ ಜಾಗಗಳ ಬಗ್ಗೆ ಓದುತ್ತಿದ್ದರೆ ನಾನು ಅಲ್ಲಿ ಮಾನಸಿಕವಾಗಿ ಇದ್ದೆ ಎಂಬ ಭಾವನೆ ಮೂಡುತ್ತದೆ…
ಈ ಪುಸ್ತಕದ ಇನ್ನೊಂದು ವಿಶೇಷ ಎಂದರೆ ಕೆಲವು ಪಂಚಿಂಗ್ ವಾಕ್ಯಗಳು..
ಉದಾಹರಣೆಗೆ…
ಯಾವ ಚೀಲದಲ್ಲಿ ಹಿಂಸೆಗೆ ಸಂಬಂಧಪಟ್ಟ ಕ್ರೌರ್ಯಕ್ಕೆ ಸಂಬಂಧಪಟ್ಟ ಮದ್ದುಗುಂಡಿನ ಚೀಲ ಇರ್ತಾ ಇತ್ತೋ , ಅದೇ ಚೀಲದಲ್ಲಿ ಅಹಿಂಸೆಗೆ ಸಂಬಂಧಪಟ್ಟ ರಾಮಕೃಷ್ಣ ಪರಮಹಂಸರು ಇರ್ತಾ ಇದ್ರು…
ಅವರು (ಕುವೆಂಪು ರವರು ) ಒರಗಿ ಕುಳಿತ ಮರದ ಬೊಡ್ಡೆಯಿಂದ ಮೇಲೇರಿದ ಬಳ್ಳಿ , ಅದರಲ್ಲಿ ಬಿಟ್ಟ ಹೂವು, ಮೇಲೆ ಕಾಣದಂತೆ ಕುಳಿತು ಹಾಡುವ ಹಕ್ಕಿ ..
(ನರೇಂದ್ರ ರೈ ಜೊತೆ ಸಂವಾದದಿಂದ )

ವಿಜ್ಞಾನದಲ್ಲಿ ರಾಮನ್ ಎಫ್ಫೆಕ್ಟ್ ಅಂತಾರೆ ಹಾಗೆ ಕನ್ನಡದಲ್ಲಿ ತೇಜಸ್ವಿ ಎಫ್ಫೆಕ್ಟ್…
ಅವರು ಮೌನದ ತವರು ಮನೆ ..
ಕಡು ಮೌನಕ್ಕೆ ಎಲ್ಲಿಯಾದರೂ ನೆಲೆಸೋದಕ್ಕೆ ಅವಕಾಶ ಕೊಟ್ಟರೆ ಅದು ತೇಜಸಿಯವ್ರನ್ನ ಅರಿಕೊಳ್ಳುತ್ತೆ…
(ಶ್ರೀ ಜಯಂತ ಕಾಯ್ಕಿಣಿ ಸಂವಾದ )
ಯಾರದ್ದೇ ಪುಸ್ತಕ ನಾವು ಪ್ರಿಂಟ್ ಮಾಡ್ಲಿ ಕರೆಕ್ಟಾಗಿ ದುಡ್ಡು ಕೊಟ್ಟುಬಿಡ್ಬೇಕು,
That is the respect we pay for the writer ..
(ಶ್ರೀರಾಮ್ ರವರ ಸಂವಾದ )
ಈ ಪುಸ್ತಕದ ಬಗ್ಗೆ ಬರೆಯುತ್ತಿದ್ದರೆ ಸಮಯ ಸಾಲಲ್ಲ,
ಒಟ್ಟಿನಲ್ಲಿ best the best book.
even printing also excellent sir,
txs to ಬಹುರೂಪಿ ಪ್ರಕಾಶನ..
ಈ ಮೇಲ್ಕಂಡ ವಿಚಾರಗಳು ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಹೇಳಿದ್ದೇನೆ….
ಕೆಲವು ವಿಚಾರಗಳನ್ನು ಮರೆತಿರಬಹುದು , ದಯವಿಟ್ಟು ಕ್ಷಮಿಸಿ…
ಇಂತಿ
ಕನ್ನಡ ಸಾಹಿತ್ಯದ ಅಭಿಮಾನಿ
ಮುರಳೀಧರ್ ಗೀತಾಚಾರ್ಯ
—
‘ತೇಜಸ್ವಿ ಸಿಕ್ಕರು’ ಕೃತಿ ಬೇಕಾದಲ್ಲಿ..

'ತೇಜಸ್ವಿ ಸಿಕ್ಕರು' ಯಾಕೆ ಇಷ್ಟ ಅಂದ್ರೆ..
ನಿಮಗೆ ಇವೂ ಇಷ್ಟವಾಗಬಹುದು…




0 Comments