ತೇಜಸ್ವಿ ಎಂಬ ವಿಸ್ಮಯವನ್ನು ಬೊಗಸೆಯಲ್ಲಿ ಹಿಡಿದುಕೊಡುವ ಒಂದು ಪ್ರಯತ್ನ ಆರಂಭವಾಗಿದೆ. ವಿಸ್ಮಯ ಪ್ರತಿಷ್ಠಾನ ತೇಜಸ್ವಿ ಕುರಿತ ಎಲ್ಲವನ್ನೂ ಅಂದರೆ ಎಲ್ಲವನ್ನೂ ಒಂದೆಡೆ ಕಲೆ ಹಾಕಿ ಆಸಕ್ತರ ಮುಂದೆ ಇಡುವ ಕೆಲಸಕ್ಕೆ ಕೈ ಹಾಕಿದೆ. ಅದರ ಅಂಗವಾಗಿಯೇ ತೇಜಸ್ವಿ ವಿಸ್ಮಯ ಎಂಬ ವೆಬ್ ಸೈಟ್ ಆರಂಭವಾಗಿದೆ. ತೇಜಸ್ವಿ ಕುರಿತ ಚಿತ್ರಗಳು, ವಿಡಿಯೋ ಇದೆ. ಜೊತೆಗೆ ತೇಜಸ್ವಿ ಕುರಿತು ಬ್ಲಾಗ್, ವೆಬ್ ಸೈಟ್ ಗಳಲ್ಲಿ ಬಂದಿರುವ ಎಲ್ಲಾ ಲೇಖನಗಳನ್ನೂ ಒಟ್ಟು ಮಾಡಿದೆ.
ಮಕ್ಕಳಿಗೆ, ಯುವ ಜನಾಂಗಕ್ಕೆ ಸಂಶೋಧಕರತ್ತಲೂ ಈ ಪ್ರತಿಷ್ಠಾನ ಮುಖ ಮಾಡಿ ನಿಂತಿರುವುದು ತೇಜಸ್ವಿ ಎಂದಿಗೂ ನಿಲ್ಲುವ ನೀರಲ್ಲ, ಸದಾ ಹರಿಯುತ್ತಲೇ ಇರುವವರು ಎಂಬುದನ್ನು ನಿರೂಪಿಸಿದೆ. ಮೂಡಿಗೆರೆಯ ಮಡಿಲಿಂದ ಮೂಡಿರುವ ಈ ಯೋಜನೆ ತೇಜಸ್ವಿ ಅವರ ಸಾಹಿತ್ಯವನ್ನೂ ಮೀರಿ ಮುನ್ನಡೆಯಲು ನಿರ್ಧರಿಸಿರುವುದು ನಾಳೆಗೂ ತೇಜಸ್ವಿಯವರನ್ನು ಜೀವಂತವಾಗಿಡುವ ಪ್ರಯತ್ನ.
ಈ ಪ್ರಯತ್ನಕ್ಕೆ ‘ಅವಧಿ’ಯ ಶುಭ ಹಾರೈಕೆಗಳು.
ಚಿತ್ರಕೃಪೆ: ವಿಸ್ಮಯ ಪ್ರತಿಷ್ಠಾನ
ವಿಸ್ಮಯ ಪ್ರತಿಷ್ಠಾನದ ಯೋಜನೆ ಇಲ್ಲಿದೆ–
ಶ್ರೀ ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಹಾಗೂ ಚಿಂತನೆಗಳ ಸಾಕಾರಕ್ಕಾಗಿ ವಿಸ್ಮಯ ಪ್ರತಿಷ್ಠಾನವು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಿದ್ದು, ಈ ಕುರಿತು ಹಾಗೂ ತೇಜಸ್ವಿಯವರ ಅಸಂಖ್ಯಾತ ಕೊಡುಗೆಗಳ ಮಾಹಿತಿಯನ್ನು ಆಸಕ್ತರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಮತ್ತು ಯುವ ಜನತೆಗೆ ತಲುಪಿಸಲು ವಿಸ್ಮಯ ಪ್ರತಿಷ್ಠಾನದ ವೆಬ್ ಸೈಟ್ ರೂಪುಗೊಂಡಿದೆ.
ಕಲಾ ಮಾಧ್ಯಮ, ಸಾಹಿತ್ಯ,ಗ್ರಾಮೀಣ ಆರ್ಥಿಕ ವ್ಯವಸ್ಥೆ, ಜಾಗತೀಕರಣ, ಸಹಜ ಕೃಷಿ, ಸಾವಯವ ಕೃಷಿ, ಉನ್ನತ ತಂತ್ರಜ್ಞಾನ, ಕನ್ನಡ ಭಾಷೆಯ ಬೆಳವಣಿಗೆ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚೆ, ಸಂವಾದಗಳಿಗೆ ಅವಕಾಶ. ಜಗತ್ತಿನ ಅದ್ಭುತ ರಮ್ಯಗಳು ಮತ್ತು ಬಾಹ್ಯಾಕಾಶದ ಕೌತುಕಗಳ ಅನಾವರಣ, ಜೈವಿಕ ಇತಿಹಾಸದ ಬಗ್ಗೆ ಸಮಗ್ರ ಚಿತ್ರಣ, ವನ್ಯಜೀವಿಗಳ ಜೀವನ ಕ್ರಮ, ಮಾಲಿನ್ಯ ನಿಯಂತ್ರಣ, ಜಲಚರಗಳು, ಕೀಟಗಳು, ಪಕ್ಷಿಸಂಕುಲದ ಮಾಹಿತಿ. ಕನ್ನಡದಲ್ಲಿ ತಂತ್ರಾಂಶ ಬಳಕೆ, ಜಾಗತೀಕರಣದ ಪ್ರಭಾವಗಳು, ಸಹಜಕೃಷಿ, ಇ-ಗವರ್ನೆಂಸ್, ಜಲಮೂಲಗಳ ರಕ್ಷಣೆ, ಔಷಧೀಯ ಸಸ್ಯಗಳು..ಇತ್ಯಾದಿ ಮಾಹಿತಿಗಳ ಆಕರವಾಗಿ ಈ ತಾಣ ಬೆಳೆಯಬೇಕಿದೆ.
ತೇಜಸ್ವಿಯವರ ವ್ಯಕ್ತಿಚಿತ್ರ, ಬದುಕು-ಬರಹ, ಆಸಕ್ತಿ, ಚಿಂತನೆ, ಫೋಟೋಗ್ರಾಫಿ, ಹೋರಾಟಗಳ ಮಾಹಿತಿಯ ಆಗರವಾಗಿ ಈ ತಾಣವನ್ನು ನಿರ್ಮಿಸುವ ಯೋಜನೆಯಿದೆ. ಆಸಕ್ತರು ಯಾವುದೇ ಪೂರ್ವಾಗ್ರಹವಿಲ್ಲದೆ ಕೈ ಜೋಡಿಸಬಹುದು
|
ಉದ್ದೇಶ ಹಾಗೂ ಆಶಯ: ಆಶಯಗಳು: |





I wis the project a great success. It was overdue. Such noble ideas should have stared along with the beginning of IT, even during the lifetime of Mr Tejasvi in the interest of the progress of Kannada and Karnataka as a whole.
– Vijayasheela, Berlin, 11.09.09
ತೇಜಸ್ವಿ ಎಂಬ ಅದ್ಭುತವನ್ನು, ಅಪರೂಪವನ್ನು, ವಿಸ್ಮಯವನ್ನು
ಎಲ್ಲರೊಳಗಿನ ತೇಜಸ್ವಿಯನ್ನು, ತೆಜಸ್ವಿಯೋಳಗಿನ ಎಲ್ಲರನ್ನು
ಬಿಂಬಿಸುವ, ತುಂಬಿಸುವ ಕಾರ್ಯ-ಕರ್ತೃತ್ವ , ಕ್ರಿಯಾಶೀಲತೆಗೆ
ನನ್ನ ಮನಸು ಸೇರಿದೆ..