
ಕುಪ್ಪಳ್ಳಿಯಲ್ಲಿ ರೂಪಿಸಿರುವ ತೇಜಸ್ವಿ ಸ್ಮಾರಕ. ಖ್ಯಾತ ಕಲಾವಿದ ಕೆ ಟಿ ಶಿವಪ್ರಸಾದ್ ವಿನ್ಯಾಸದ ಈ ಸ್ಮಾರಕ ಇಂದು ಅನಾವರಣ./ ಚಿತ್ರ ಒದಗಿಸಿದವರು: ಹೇಮಾ ವೆಂಕಟ್
ತೇಜಸ್ವಿ ಇಲ್ಲವಾದರು. ಹಾಗಂತ ನಾವು ನಂಬಬೇಕು. ಹೀಗೆ ನಂಬಿಸುವ ಸಂಚನ್ನು ಧಿಕ್ಕರಿಸಿ ಹೊರಟವರು ಅದೆಷ್ಟೋ. ತೇಜಸ್ವಿಯವರನ್ನು ಬಿರಿಯಾನಿ ಕರಿಯಪ್ಪನ ಸಾಂಗತ್ಯದಲ್ಲಿ, ಪಶ್ಚಿಮ ಘಟ್ಟದ ಕಾಡುಗಳಲ್ಲಿ, ಪಕ್ಷಿಗಳ ಫೋಟೋ ತೆಗೆಯುವುದರಲ್ಲಿ, ಶ್ರದ್ಧೆಯಿಂದ ಗದರಿಕೊಳ್ಳುವ ಶೈಲಿಯಲ್ಲಿ, ಕಂಪ್ಯೂಟರ್ ಪರದೆಯ ಮೇಲೆ ಚಿತ್ರ ಬಿಡಿಸುತ್ತಾ ಕೂರುವಲ್ಲಿ, ಮತ್ತೆ ಮತ್ತೆ ಕರ್ವಾಲೋ, ಜುಗಾರಿ ಕ್ರಾಸ್, ಮಾಯಾಲೋಕ ಬೆನ್ನತ್ತುವುದರಲ್ಲಿ, ಕೃಪಾಕರ ಸೇನಾನಿಯ ಸಾಕ್ಷ್ಯಚಿತ್ರ ನೋಡಿ… ಹೀಗೆ ತೇಜಸ್ವಿ ಇಲ್ಲ ಎಂಬುದನ್ನು ಧಿಕ್ಕರಿಸುತ್ತಲೇ ಬಂದಿದ್ದಾರೆ. ಆ ಸಾಲಿಗೆ ಸೇರಿಕೊಳ್ಳಲು ‘ಅವಧಿ’ಗೂ ಹೆಮ್ಮೆ.
ಆ ತೇಜಸ್ವಿ ಎಂಬ ಪೂರ್ಣಚಂದ್ರನ ಬಗ್ಗೆ ‘ಅವಧಿ’ ಇಲ್ಲಿಯವರೆಗೆ ನೋಡಿದ ನೋಟದ ಕೆಲವನ್ನು ನಿಮ್ಮ ಕೈಗಿಡುತ್ತಿದೆ. ತೇಜಸ್ವಿ ಎಂಬ ನೆನಪಿನ ದೋಣಿಯಲ್ಲಿ ಕುಳಿತು ಹರಿಗೋಲು ಹಿಡಿಯೋಣ ಬನ್ನಿ..





0 Comments