ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೆರೆದ ಕಣ್ಣು ನಿದಾನವಾಗಿ ಮುಚ್ಚಿತು..

geetha hegde kalmane

ಗೀತಾ ಹೆಗ್ಡೆ ಕಲ್ಮನೆ 

1988ರಲ್ಲಿ ಅನಿರೀಕ್ಷಿತವಾಗಿ ಕಳೆದುಕೊಂಡ ಆಯಿಯ ನೆನಪಲ್ಲಿ ಅಮ್ಮನ ದಿನಕ್ಕಾಗಿ ಬರಹ ಅಂಟಿಕೊಂಡ ಈ ವೇಳೆಯಲ್ಲಿಯ ಮೊದಲ ಕವನ.  ಮರಣದ ಕೊನೆ ಗಳಿಗೆಯಲ್ಲಿ ಪಕ್ಕದಲ್ಲೇ ಕುಳಿತು ಕಣ್ಣಾರೆ ಕಂಡೆ ಪ್ರಾಣ ಹೋಗುವ ಗಳಿಗೆ.  ಹಾಕಿದ ಗಂಗಾಜಲ ಗಂಟಲಲ್ಲಿ ಇಳಿಯಿತೊ ಇಲ್ಲವೊ ಗೊಟಕ್ ಅನ್ನುವ ಸಣ್ಣ ಶಬ್ದ ಇನ್ನೂ ಕಿವಿಯಲ್ಲಿದೆ.  ತೆರೆದ ಕಣ್ಣು ನಿದಾನವಾಗಿ ಮುಚ್ಚಿತು ದೃಶ್ಯ ಇನ್ನೂ ಮರೆಯಾಗಿಲ್ಲ.  ಇದೊಂದು ಮರೆಯಾಗದ ಸಂಕಟದ ಉಯಿಲು!

ಅರಿವಾಗಲಿಲ್ಲ ಅಂದು
ನಿನ್ನ ಜೀವಿತಾವಧಿಯಲ್ಲಿ
ನಿನ್ನ ಕಳಕೊಂಡಾಗಿನ
ದಿನಗಳ ಸಂಕಟದ
ಪರಿತಪಿಸುವ ನೋವು.

mom posterಅನುಭವದ ಮಜಲು
ಬಿಚ್ಚಿಕೊಂಡಿದೆ ಇಂದು
ಹಡೆದ ತಾಯಿ
ನಾನೂ ಆಗಿಹೆನಲ್ಲ
ಹೆತ್ತ ಕರುಳ ಸಂಬಂಧದಲ್ಲಿ..

ಕಣ್ಣ ಮುಂದಿನ ಸತ್ಯ
ಉರುಲುಹೊಡೆದಿದೆ ಮನ
ಕಣ್ಕಾಣದ ನಿನ್ನ
ಅಗಲಿಕೆಯ  ದಿನಗಳ
ಗೋರಿಯಲ್ಲಿ.

ಕುಳಿತು ನೋಡುವೆನಲ್ಲಿ
ಬರಿದಾದ ನೆಲದೊಡಲಲ್ಲಿ
ನೆಟ್ಟ ಗಿಡ ನೆನಪಿನ
ಮರವಾಗಿ ನಿನ್ನ ಮಲಗಿಸಿದ
ಸುಟ್ಟ ಜಾಗದ ಕುರುವಾಗಿ.

ಅಶ್ರುತಪ೯ಣ ಇಟ್ಟು
ಇಪ್ಪತ್ತೇಳಾದರೂ ನನ್ನಲ್ಲಿ
ಮರೆಯಾಗಲಿಲ್ಲ
ಮರಣ ನಿನ್ನ ಹೊತ್ತೊಯ್ದ
ಗಂಗಾಜಲ ಬಾಯಿಗಿಟ್ಟ ಗಳಿಗೆ.

ಮಾತೆಯ ಮಮತೆಯ ಸವಿ
ನೆನೆನೆನೆದು ಉಸುರುವೆ
ಇಂದು ನಿನ್ನ ದಿನ
ನಿನಗೆ ಮೀಸಲಾಗಿ ಇಡುವೆ
ನನ್ನ ಬರಹವೆಲ್ಲ ನಿನಗಪಿ೯ಸಿಲ್ಲಿ.

‍ಲೇಖಕರು Admin

8 May, 2016

0 Comments

Trackbacks/Pingbacks

  1. ತೆರೆದ ಕಣ್ಣು ನಿದಾನವಾಗಿ ಮುಚ್ಚಿತು.. | | Sandhyadeepa…. - […] http://avadhimag.online/2016/05/08/%e0%b2%a4%e0%b3%86%e0%b2%b0%e0%b3%86%e0%b2%a6-%e0%b2%95%e0%b2%a3%e0%… […]
  2. ತೆರೆದ ಕಣ್ಣು ನಿದಾನವಾಗಿ ಮುಚ್ಚಿತು.. | – Sandhyadeepa…. - […] http://avadhimag.online/2016/05/08/%e0%b2%a4%e0%b3%86%e0%b2%b0%e0%b3%86%e0%b2%a6-%e0%b2%95%e0%b2%a3%e0%… […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading