ಉಳಿದ ಸಂಜೆ
– ಪ್ರಜ್ಞಾ ಮತ್ತೀಹಳ್ಳಿ
ತೆಗೆದಿಟ್ಟುಕೊಂಡ ಸಂಜೆಯೊಂದು
ಹಾಗೇ ಇದೆ ಕಪಾಟಿನಲ್ಲಿ
ನೀನು ಬಾರದೇನೇ
ಸಣ್ಣಗೆ ನಡುಗುವ ಗಾಳಿ
ಬಣ್ಣದ ಬಿರಡೆ ಬಿಚ್ಚಿದ ಬಾನು
ಸುಳ್ಳೇ ಬೆವರುವ ಮೋಡ
ಸೆರಗು ಜಾರಿಸಿ ತುಟಿ
ಕೊಂಕಿಸಿದಂತೆ ಕಡಲು
ಬೀಸಿಬೀಸಿ ಅಲೆಕೂದಲು
ಒದ್ದೆ ನೆನಪಿನ ತೀರ
ಹಾಯಿ ಹಾರಾಡುವ ದೋಣಿ
ಕಡೆಗೂ ಈಜು ಕಲಿಯದ ಕೋಡುಗಲ್ಲು
ಕತ್ತಲಾದದ್ದೇ ಅಮ್ಮನ ನೆನೆದಳುವ
ನೆಂಟರ ಹುಡುಗನಂತೆ ಸೂರ್ಯ
ಹೆಜ್ಜೆಯುಳಿಸದ ಉದುರುದುರು ಹೊಯ್ಗೆ
ಮನದ ತುಳಸಿಯೆದುರು
ಸಾಲು ಸಾಲು ನೆನಪಿನ ಹಣತೆ
ಮಾಡು ಹತ್ತಿದ ಆಸೆಯಾಕಾಶಬುಟ್ಟಿ
ಕಡೆಯ ಬಸ್ಸೂ ಬಂದು ಹೋದ ಸದ್ದು
ನೀಡಿದ ಕಾಲು ನೇಯ್ವ ನಾಳಿನ ಮೊಗ್ಗು
ಗಾಜು ತಿಕ್ಕಿ ಹಚ್ಚಿದ ಮಬ್ಬು ಲಾಂದ್ರ
ಬಿಕರಿಯಾಗದ ಗೊಂಬೆಯಂತೆ
ಮಂಜುಗಣ್ಣಿನ ಸುಕ್ಕು ಕೆನ್ನೆಯ ಸಂಜೆ
ಸದ್ದಿಲ್ಲದೇ ಕಪಾಟು ಸೇರುತ್ತದೆ







very very nice…..
tuuuuumba ishtavaythu prajna
ಬಣ್ಣದ ಬಿರಡೆ ಬಿಚ್ಚಿದ ಬಾನು
ಸುಳ್ಳೇ ಬೆವರುವ ಮೋಡ
ಸೆರಗು ಜಾರಿಸಿ ತುಟಿ
ಕೊಂಕಿಸಿದಂತೆ ಕಡಲು
ಬೀಸಿಬೀಸಿ ಅಲೆಕೂದಲು
ಒದ್ದೆ ನೆನಪಿನ ತೀರ
ಎಂತಹ ಅದ್ಭುತ ಅಕ್ಷರಗಳ ನಿನಾದ ಇದು….!!!
ನಿಜವಾಗಿಯೂ ತುಂಬಾ ಖುಷಿ ಕೊಟ್ಟ ಕವನ….
Nice poem