ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೃಪ್ತಿ ಬರೆದ ಕಿರುಗವಿತೆಗಳು

ತೃಪ್ತಿ ವಿ ಹಿರೇಮಠ

1
ನಿನ್ನುಸಿರು ಬೆರೆತಿದೆಯೇನೊ
ಈ ಹೂವಿಗೆ!
ಪರಿಮಳ ಬೀರಿದಾಗಲೆಲ್ಲ
ನಿನ್ನದೆ ನಿನ್ನದೇ ನೆನಪು..

2
ಹೃದಯದಲ್ಲಿಟ್ಟುಕೊಳ್ಳುವೆಯೆಂದು
ಪದೇ ಪದೇ ಹೇಳಬೇಡ ನೀನು
ಹೃದಯ ಬಡಿತ ನಿಂತು ಹೋದರೆ
ಅದಕ್ಕೂ ಸಾವಿದೆಯೆಂದು ಮರೆಯಬೇಡ
 
3
ಮದರಂಗಿತಾಕಿದೆ ನಿಜ
ಉಸಿರೊಳಗಿಳಿದ ಪ್ರೀತಿ
ಕಣ್ಣ ಬಟ್ಟಲೊಳಗೆ ಗಳಿಗೆ ಗಳಿಗೆಗೂ ಬೆಳದೈತಿ

4
ಪ್ರೀತಿಯಅರ್ಥ ಹುಡುಕುತ್ತಿದ್ದೇನೆ
ಎಲ್ಲೂ ಸಿಗುತ್ತಿಲ್ಲ!
ಸಿಕ್ಕವರ ಹುಡುಕುತ್ತಿದ್ದೇನೆಅವರು ಸಿಗುತ್ತಿಲ್ಲ!
 
5
ಶಬ್ದಗಳ ಸಂತೆಯಲ್ಲಿ
ಶಬ್ದ ಹುಡುಕುತ್ತಿದ್ದೇನೆ
ಶಬ್ದ ಕಾಣದಾಗಿದೆ
ಮಾತಿನ ಮೂಲದಲ್ಲಿ
ಮಾತು ಹುಡುಕುತ್ತಿದ್ದೇನೆ
ಮಾತುಕಾಣದಾಗಿದೆ
ಬೆಳದಿಂಗಳಿರುಳಲ್ಲಿ ಬೆಳಕ
ಹುಡುಕುತ್ತಿದ್ದೇನೆ
ಬೆಳಕು ಕಾಣದಾಗಿದೆ
ಇದ್ದಲ್ಲಿಇಲ್ಲದ್ದು
ಇನ್ನೆಲ್ಲಿ ನಿಲ್ಲುವುದು!

‍ಲೇಖಕರು G

11 January, 2015

11 Comments

  1. mmshaik

    koneyadu arthapurNa..shubhvaagali madam..

  2. ಲಲಿತಾ ಸಿದ್ಧಬಸವಯ್ಯ

    ೨ ಮತ್ತು ೪ನೇ ಕಿರುಗವಿತೆ ಖುಷಿಕೊಡುತ್ತವೆ

  3. ಅಕ್ಕಿಮಂಗಲ ಮಂಜುನಾಥ

    ಚಿಕ್ಕ ಪದ್ಯಗಳು ಚೊಕ್ಕವಾಗಿ ಇವೆ.

  4. ಮಂಜುನಾಥ್. ಪಿ

    chennagive…!

  5. ಪ್ರಕಾಶ ಬಿ

    kavite chennagive…

  6. Renuka A. kathari

    kivite isatavadvu…

  7. Anonymous

    nimma kiru kavite channagive.

  8. Anonymous

    nange thumba ista Aythu friend nim kavitegalu

  9. Prashant

    Super

  10. Anonymous

    Very meaningful thrupthi, nice poems

  11. Anonymous

    ಚೆನ್ನಾಗಿವೆ ಕವಿತೆ ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading