ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೂಗುಗತ್ತಿ

krishna sreekanta devangamutt

ಕೃಷ್ಣ ಶ್ರೀಕಾಂತ ದೇವಾಂಗಮಠ

ಪ್ರತಿಮೆಗಳೆಬ್ಬಿಸಿ ಮಂದಿರ ಮಸೀದಿ
ಕಟ್ಟದೇ  ಸುಮ್ಮನಿದ್ದಿರಿ
ಕಾಲ ಕಳೆದಂತೆಲ್ಲ ನಾನು ರೂಪಗಳಿಂದ
ರೂಪಾಂತರಗೊಂಡು ದೈವವಾಗಿ
ಮಾರ್ಪಟ್ಟಾಗ  ಧರ್ಮ ಸುತ್ತುವರಿದು ವಸ್ತ್ರವಾಯ್ತು
bloodಈಗ ಏಸುವಿನ ಮುಳ್ಳು ಕಿರೀಟ ನೆತ್ತರು ಬಸಿಯುತ್ತದೆ
ರಕ್ತಕ್ಕೆ ಕಾದು ಕೂತ ನಾಲಿಗೆಗಳು ಊರುದ್ದ ಚಾಚಿಕೊಳ್ಳುತ್ತವೆ

ಬಣ್ಣವನ್ನೂ  ಸೇರಿಸಿ ಖರೀದಿಸಿದ್ದಾಗಿದೆ
ಕೇಸರಿ ಬಿಳಿ ಹಸಿರು
ಉಟ್ಟ ಬಟ್ಟೆಗಳಿಗೂ ಧರ್ಮ ಸಂಕಟ
ಹೆಸರು ಸಂತ ಪಾದ್ರಿ ಫಕೀರ

ಧರ್ಮದ ಗೋಡೆಗಳನ್ನ ನುಣುಪಾಗಿ ನಾಜೂಕಾಗಿ ನಿರ್ಮಿಸಿದ್ದಾರೆ
ಒಂದರಿಂದ ಮತ್ತೊಂದಕ್ಕೆ ಸಲೀಸಾಗಿ  ಜಾರಿಕೊಳ್ಳಲು ಮತ್ತು ಜಾರಿಸಿಕೊಳ್ಳಲು

ಒಳಗೆ ಅರ್ಥವಿಲ್ಲದ ಗೊಡ್ಡು
ಚೂಪಾದ ಹತಾರಗಳು
ವಿಷ ಉಣ್ಣಿಸುವ ಮೊಲೆ
ಕೇವಲ ಪೂಜೆಗಾಗಿ ತೋರಿಕೆಗಾಗಿ
ಓದುವ ಸಹಸ್ರ ಪುಟಗಳ ಗ್ರಂಥ
ಗಾಳಿಯಿದ್ದೂ ಉಸಿರು ಆಡುವುದಿಲ್ಲ ಅಲ್ಲಿ
ಪ್ರಾಣ ವಶಕ್ಕೆ ತೂಗು ಬಿಟ್ಟ ಕತ್ತಿ
ಬಾಯಿಗೆ ರಕ್ತ ಅಂಟಿಸಿಕೊಂಡು
ಸದಾ ನೇತಾಡುತ್ತದೆ

‍ಲೇಖಕರು Admin

14 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading