ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತುತ್ತಿನ ಚೀಲ ತುಂಬಲು

-ತಿರುಪತಿ ಭಂಗಿ

ಮನೆಯ ನೋವಿನ ಮೊಲಾಮು

ಬಿಸಿಲು ಮಳೆ ಚಳಿಯನ್ನದೇ
ನಿತ್ಯ ಕಾಯಕಯೋಗಿ
ತುತ್ತಿನ ಚೀಲ ತುಂಬಲು
ದಿನವೂ ಒಬ್ಬರ ಕೈಯಲ್ಲಿ ಬಂಧಿ

ಎಡಗಾಲಲಿನ ಹರಿದ ಹವಾಯಿಯ
ಉಂಗುಟಕ್ಕೆ ಪಿನ್ನ ಸಿಕ್ಕಿಸಿ
ನಡೆಯುವ ಪದಾಗಳು
ಸದಾ ದನಿದಿರುತ್ತಿದ್ದವು.

ಮನೆಯಲ್ಲಿ ಅವ್ವ
ಮಾತು ಉಗಳುವ ರೈಲು ಬಂಡಿ
ಬರೀ ವಟವಟ ಪಿಟಪಿಟ
ತಿರುಗಿ ಮಾತಾಡದ ಮೌನ ದೇವರು.

ತಿಂಗಳ ಕೊನೆಯಲ್ಲಿ ಕೈ ಖಾಲಿ
ಅವರಿವರ ಮಂದೆ ಕೈ ಚಾಚುವ ಮನಸ್ಸಿಲ್ಲದೆ
ಹಾಸಿಗೆ ಇದ್ದಷ್ಟು ಕಾಲು ಚಾಚುವ
ನಿರ್ಧಾರಕ್ಕೆ ಶರಣು.

ಅಂಗೈ ಅಗಲ ಆಸ್ತಿ ಇಲ್ಲದಿದ್ದರೂ
ಬದುಕಿನೊಂದಿಗೆ ಕುಸ್ತಿ
ಅಜ್ಜ ಅಜ್ಜಿ ದವಾಖಾನೆ ಕರ್ಚು
ಅವ್ವನ ಅಡುಗೆ ಮನೆ ದಿನಿಸು
ಮೂರು ಮಕ್ಕಳ ಶಾಲೆ ಲಿಗಾಡು
ಎರಡು ರಟ್ಟೆಗಳ ಶಕ್ತಿಯ ಮೇಲೆ

ಅಪ್ಪ ಬರೀ ಅಪ್ಪನಲ್ಲ
ಮನೆಯ ನೋವಿನ ಮೊಲಾಮು.

‍ಲೇಖಕರು Admin

31 July, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading