ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ತುಟಿಪಿಟಕ್ ಎನ್ನದೇ ಪಾರ್ವತಿ ಸಹಿಸಿಕೊಂಡಳು!' – ವಾಸುದೇವ ನಾಡಿಗ್ ಕವಿತೆ

ಪಾರ್ವತೀ ಪತಯೇ ನಮಃ

ವಾಸುದೇವ ನಾಡಿಗ್


ತೊಡೆಮೇಲೆ ಸೊಟ್ಟ ಸುತ್ತಿಕೊಂಡ ಚರ್ಮ
ತಿಲಕವಿರಬೇಕಾದ ಕಡೆ ಕೆಂಗಣ್ಣು
ಎಣ್ಣೆಗಾಣದಗೂದಲ ತಿರುವಿಕೊಂಡ ಗಂಟು
ಕೊರಳಸುತ್ತ ಬುಸುಗುಡುವ ವಿಷದ ಹಾವು
ಪದಕದಬದಲು ಎದೆ ಕಪಾಲಮಾಲೆ
ಸುಗಂಂಧಪೂಸಿಕೊಳ್ಳದ ತನು ಬೂದಿ ನಂಟು
ಸುಟ್ಟ ಶವಗಳ ಹೊಗೆ ಸ್ನಾನ
ಗುಲಾಬಿ ಇರಬೇಕಾದ ಕೈಯಲಿ
ಮಸೆದುಮಿಂಚುವ ತ್ರಿಶೂಲ
ಗಂಗೆಯನ್ನು ಹೊತ್ತು ನಿಂತರೂ
ಮಜ್ಜನಕೆ ಮನಸೊಪ್ಪದ ದೇಹ
ಕಂಠದಾಳದಲ್ಲಿ ವಿಷದ ಸುಳಿ
ಚಂದಿರನ ಮುಡಿದರೂ ಅಮಾವಾಸ್ಯೆಯಿರುಳಸಂಗ
ಗಂಟಿಕ್ಕಿದ ಮುಖದಲ್ಲಿ ಲಯದ್ದೇ ದಾಹ
ಸದಾ ಹೂಂಗುಟ್ಟಿ
ತಲೆಯಾಡಿಸುವ ಗಣಗಳ ಮೋಹ
ಮಾತು ಮಾತಿಗೆ ಮರುಳಾಗಿ ದೇಹಿ ಅಂದದಕ್ಕೆಲ್ಲ
ಅಸ್ತುಯೆನ್ನುವ ಮರುಳು
ಅಸಂಯಮಿನೇತ್ರದ ಬೆಂಕಿಯುಗುಳು
ತುಟಿಪಿಟಕ್ ಎನ್ನದೇ ಪಾರ್ವತಿ ಸಹಿಸಿಕೊಂಡಳು!
 

‍ಲೇಖಕರು G

1 December, 2014

9 Comments

  1. smitha Amrithraj

    chennaagide…

  2. mmshaik

    nice one…

  3. ಗವಿಸಿದ್ಧ ಹೊಸಮನಿ

    ಚೆನ್ನಾಗಿದೆ ಸರ್..

  4. ಅಕ್ಕಿಮಂಗಲ ಮಂಜುನಾಥ

    ಪದ್ಯ ತುಂಬಾ ಇಷ್ಟವಾಯಿತು,ಸಾರ್. ನಮ್ಮೆಲ್ಲಾ ಐಲಾಟಗಳನ್ನೂ ನಮ್ಮ ಹೆಂಡತಿಯರು ಸಹಿಸಿ ಕೊಂಡಿಲ್ಲವಾ? ಹಂಗೇನೆ ಆಕೇನೂ ಸಹಿಸಿಕೊಂಡಿರಬಹುದಲ್ಲವಾ?

  5. vasudeva nadig

    manjunath neevu sariyaage grahisiddeeri..nanna manasnallu nammantha ailaatada gandandire idru! ha ha.thanks

  6. maruti dasannavar

    kavite tumba chennagude.

  7. Sunil Gurannavar

    Tannannu sahisikondiddale Parvati endu arita dina Shiva shantanagabahudeno.

  8. anand rugvedi

    ಗಂಡನ ಐಲಾಟವನ್ನು ಹೆಂಡತಿ ಸಹಿಸಿಕೊಳ್ಳುವುದಕ್ಕೆ – ಚಾರಿತ್ರಿಕ ಹಿನ್ನೆಲೆಯನ್ನು ಒದಗಿಸಿದಂತಿದೆ ಕವಿತೆ!ಜಗದ ಮೊದಲ ದಂಪತಿಗಳ ಈ ಅನುಸಂಧಾನವೇ ದಾಂಪತ್ಯದ ಸಾದೃಶ ರೂಪ ಅಲ್ಲವೇ ನಾಡಿಗರೇ?

  9. Chandraprabha B

    Excellent..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading