ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತುಕ್ಯಾನ ವೀಣೆ..

ದಿವಂಗತ ಬಾಬೂರಾವ್ ಬಾಗೂಲ್ ಅವರ ಒಂದು ಕ್ರಾಂತಿಕಾರಿ ಕವಿತೆ ಇದು.

ಮೂಲ ಮರಾಠಿ ಕವಿತೆಯ ಲಿಂಕ್ ಮತ್ತು ಕವಿ ಪರಿಚಯ ಇಲ್ಲಿದೆ.

umesh desai

ಉಮೇಶ್ ದೇಸಾಯಿ

ಅನಾದಿಯಿಂದಲೂ ನಾ ಕೂಗುತಿರುವೆ
ನಿನಗೆ ಕೇಳಿಸದಾಗಿದೆ….
ನೀ ಮಾಯಾವಿ, ಅದೃಶ್ಯೆ….

ಎದೆಗೂಡಲ್ಲಿ ಬೆಂಕಿ ಹೊತ್ತಿ ಅನೇಕFire
ಆಸ್ಫೋಟಗಳಾಗಿವೆ ನೀ ಬಲ್ಲೆಯಾ…

ಒಮ್ಮೆ ಈ ಕೇರಿಗೂ ಬಾ
ಇಲ್ಲಿಯ ದಾಸ್ಯ, ದೈನ್ಯ ದುಃಖ ನೋಡು ಬಾ
ನೀ ಬರಲೊಲ್ಲಿ ನೀ ಉಳ್ಳವರ ಹಾಸಿಗೆಯಲ್ಲಿ
ಮುದುಡಿ ಹೋಗಿರುವಿ…!

ಅರೇ ಯಾರಲ್ಲಿ ಆ ನನ್ನ ಬಂದೂಕು ತನ್ನಿ
ಇಲ್ಲವಾದಲ್ಲಿ ತುಕ್ಯಾನ ವೀಣೆಯಾದರೂ ತನ್ನಿ
ಊರೂರು ಕೇರಿ ಕೇರಿ ಹಿಂಡಲೆಯುವೆ
ವೀಣೆಯೊಂದಿಗೆ ಕ್ರಾಂತಿ ಗೀತೆ ಹಾಡ ಬಯಸಿಹೆ

ಯುಗಯುಗಗಳಿಂದ ಕೈ ಗಳು ಬಂದಿಯಾಗಿವೆ
ಆದರೂ ಪ್ರತಿವರ್ಷ ಕೆಂಪುಕೋಟೆಯ ಮೇಲಿಂದ
ಕೇಳುತಿದೆ ಭಾರತ ಭಾಗ್ಯ ವಿಧಾತ…
ತುಕ್ಯಾನ ಎಲ್ಲ ಚೀತ್ಕಾರ ಆಕ್ರೋಶಗಳು
ನೋವು ಬೇವುಗಳೇ ಈ ವೀಣೆಗೆ ಬೇರುಗಳು…
ಇದರಿಂದ ಹೊಮ್ಮಿದ ಹಾಡಿನಿಂದ ಕಣ್ಣೀರು
ಕಪಾಳದಿ ಹೆಪ್ಪುಗಟ್ಟಿದುದು ಹರಿಯಲಿ…

ಅಂದಿನಿಂದ ಕಿಲುಬು ಗಟ್ಟಿದ
ಜೊಂಡು ಬೆಳೆದ ಕೈಗಳಿಗೆ ಹೇ ಸ್ವಾತಂತ್ರ್ಯ
ಇನ್ನಾದರೂ ಬಲ ತುಂಬು ಪಾಡು ಹಾಡಾಗಿ ಹೊಮ್ಮಲಿ
ಯುಗದ ತೃಷೆ ಇನ್ನಾದರೂ ಹಿಂಗಲಿ….

‍ಲೇಖಕರು Admin

6 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading