ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ತುಂಟ ಚಂದಿರ ಎಂದು ಹುಸಿ ಮುನಿಸಲಿ ಪಿಸುಗುಟ್ಟಿದಾಗ…' – ಸುಚಿತ್ರಾ

ಸುಚಿತ್ರ ಕೆ ಮಂಗಳೂರು

ಅದು ಮಂದಿರ…
ಇದು ಮಸೀದಿ…
ಚರ್ಚುಗಳೆಂಬ
ಜಾತಿ-ಧರ್ಮದ ಹಂಗಿಲ್ಲದೆ
ಬೆಳಕ ಬೀರುತ
ಹಾಲುಗಲ್ಲದ ಮಗುವಿನಂತೆ
ಮುಗ್ಧವಾಗಿ
ಹುಣ್ಣಿಮೆ ಚಂದಿರ ನಗುತ್ತಿದ್ದಾನೆ…
 
ಜಗವಿಡೀ ಬೆಳಗಿತು…
ಕಗ್ಗತ್ತಲ್ಲಲ್ಲೂ ಬೆಳಕಿನ ಆಹ್ವಾನ..
ಅಮ್ಮ ಕಂದಗೆ ತುತ್ತನಿಡುತ್ತಿದ್ದಾಳೆ
ಬೆಳದಿಂಗಳ ರಾತ್ರಿ ಚಂದಿರನ ತೋರಿ
ಪುಟ್ಟ ಕೈ ಚಾಚುತ್ತಿದೆ
ಅದ ಬಾ ಎಂದು ಕೂಗಿ
ಕರೆದಾಗ
ಹುಣ್ಣಿಮೆ ಚಂದಿರ ನಗುತ್ತಿದ್ದಾನೆ..
 
ಹುಣ್ಣಿಮೆಯ ರಾತ್ರಿಯಲ್ಲಿ
ನಲ್ಲ ನಲ್ಲೆಯ ಕೈ ಸ್ಪರ್ಶದ
ಸುಖ ಬೆರೆತು
ಪ್ರೀತಿಯ ಸಿಹಿಮುತ್ತ ನೀಡಿದ
ನಲ್ಲೆ ಕೆಂಪೇರಿ ನಾಚಿ
ತುಂಟ ಚಂದಿರ ಎಂದು ಹುಸಿ ಮುನಿಸಲಿ
ಪಿಸುಗುಟ್ಟಿದಾಗ
ಹುಣ್ಣಿಗೆ ಚಂದಿರ ನಗುತ್ತಿದ್ದಾನೆ…

 
ಈ ಊರು ನಮ್ಮದು, ಈ ದಾರಿ ನಮ್ಮದು
ಈ ನೀರು ನಮ್ಮದು ಈ ಗಾಳಿ ನಮ್ಮದು
ಈ ಬೆಳಕು ನಮ್ಮದು ಎನ್ನುವ
ಟೊಳ್ಳು ಪೊಳ್ಳಾದ ನಂಬಿಕೆಗೆ
ಹೋರಾಟದ ಕಿಚ್ಚಿಗೆ
ಬಲಿಯಾದ ಜೀವಜಂತುಗಳ ಜೊತೆಯಾಗಿ
ಕಂಡು ವಿಷಾದದಿ
ಹುಣ್ಣಿಮೆ ಚಂದಿರ ನಗುತ್ತಿದ್ದಾನೆ…
 
ಬದುಕುವ ದಾರಿಯ ತಿಳಿಯದೆ
ಮಸಣದ ದಾರಿಯೂ ಒಂದೇ
ಅರಿವಿರದ ಈ ಮೂಢ ಮನಗಳ
ಕಂಡು
ಹುಣ್ಣಿಮೆ ಚಂದಿರ ನಗುತ್ತಿದ್ದಾನೆ.
 
ತನ್ನ ಬೆಳಕ ಹಿಂದೆ ಕತ್ತಲ ಮಹತ್ವ
ಅರಿಯದ ಮನಗಳ
ಕಂಡು…
ಹುಣ್ಣಿಮೆ ಚಂದಿರ ನಗುತ್ತಿದ್ದಾನೆ…
ವಿಷಾದದಿ ಹುಣ್ಣಿಮೆ ಚಂದಿರ ನಗುತಿದ್ದಾನೆ.
 

‍ಲೇಖಕರು avadhi

19 March, 2014

5 Comments

  1. mmshaik

    nice..

  2. satish javaregowda

    Sarala…sundara…sahaja…baravanige…bhavagala meravanige…

  3. K.M.Vishwanath

    ಸುಪರ್ ಐತಿರಿ

  4. manjunath dasanapura

    ಎಲ್ಲರ ಮುಖದಲ್ಲಿಯೂ ಚಂದಿರನ ನಗು ಮೂಡುವಂತಾಗಲಿ ಎಂಬ ನಿಮ್ಮ ಕವನದ ಆಶಯ ಚೆನ್ನಾಗಿ ಮೂಡಿಬಂದಿದೆ….

  5. prakasha. dore

    nimma kavana channagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading