ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಿರುಗುತ್ತಾನೆ ಇವ ನಿಮ್ಮ ಸುತ್ತಲೂ..

ವಿ ಎಸ್ ಶ್ಯಾನ್ ಭಾಗ್

ತಿರುಗುತ್ತಾನೆ ಇವ ನಿಮ್ಮ ಸುತ್ತಲೂ
ಸುತ್ತಲು
ಒಮ್ಮೊಮ್ಮೆ ಷಣ್ಮುಗನ ಹಾಗೆ
ಸಮಯಕ್ಕೆ ಪಾಬಂದಿ ಇದ್ದರೆ
ಗಣೇಶನ ಹಾಗೆ

ಇವ ತಿರುಗುತ್ತಾನೆ ಫ್ಯಾನಿನ ಹಾಗೆ
Pan ನಿಂದ Fan ವರೆಗೆ
ಬಾಸುಂದಿಗಾಗಿ ಬಾಸುಂಡೆ ತಿನ್ನುತ್ತಾನೆ
ಹಣಕುತ್ತಾನೆ ಮಂದಿಗಳ ನಡುವಿನ ಸಂದಿಗಳಲಿ
ನೀವು ಹೊರಡಿಸುವ ಕಲರವಕ್ಕೆ
ಕೂಗುತ್ತಾನೆ ಕಾಗೆ, ಕೋಗಿಲೆ,bಬೈತಲೆಯ ಮದ್ಯೆ
ನೈದಿಲೆ ಹಾಗೆ
ಕೈತುಂಬ ಕೆಸರಿನಲ್ಲಿ ಬಾಯಿತುಂಬ ಮೊಸರು
ಯಾಕೆ ಬೇಕು ಹೆಸರು ?

ಇವ ಇದ್ದಾನೆ ನಿಮ್ಮ
ತಿರುಗಣೆಯಲ್ಲಿ ಮಣ್ಣಿನ ಮುದ್ದೆಯ ಹಾಗೆ
ಕಾದು ಕಾದೂ ಕಾದ ಮಜಬೂರಿನ ನಿದ್ದೆಯ ಹಾಗೆ
ಒದ್ದೆಯಾದರೂ ಮೈಬಿಸಿಗೆ ಒಣಗಿದ ಹಾಗೆ
ಗಾಹೇ ತವಜಯ ಗಾಥಾ

ಜಯ ಗಣ ಮನದಲ್ಲಿ
ಭಾಷಣದ ಆಖೇರಿ ನೀವು ಭಾರತ್ ಮಾತಾಕಿ
ಚಡಪಡಿಸಿದರೂ,ಪಡಪಡಿಸದ ಪಟಾಕಿಯ ಹಾಗೆ
ಅವರಿವರು ಕೊಟ್ಟ ಸ್ವೆಟರಲ್ಲಿ
ಗಾಂಧಿ ಮೈದಾನ ಶಕ್ತಿಸ್ಥಳ
ಶಾಂತಿಸ್ಥೂಪ, ಧರ್ಮಸ್ಥಳ
ಶಿವಾಜಿಪಾರ್ಕು, ಕೇಕೆ ಹಾಕು
ಮರುಗು ಮತ್ತು ನಿದ್ದೆಹೋಗು

ಇವ ಫ್ಯಾನು
ನಿಮ್ಮ ಗ್ರಹಗತಿಯ ಹಾಗೆ
ನೀವು ದೊಡ್ಡೋರಾದ ಹಾಗೆ
ಇವ ಚಿಕ್ಕವನಾಗುತ್ತಾನೆ
ಇದ್ದಕಡೆಯೇ ಹವಾಮಾನದಂತೆ
ತಿರುಗುತ್ತಾನೆ

‍ಲೇಖಕರು avadhi

28 March, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading