ಶಿವು ಮೋರಿಗೇರಿ
ಬ್ಯಾಸಿಗಿ ದಿನದೊಳಗ ಬೇವಿನ ಗಿಡ ಚಿಗುತು
ಹೂವ್ಯಾಕೋ ಈಸೊಂದು ಮೆತ್ತ್ಯಾವು ಅನಬ್ಯಾಡ
ತಾರೆಗಳವು ಹಗಲಾಗ ಬಂದಿಲ್ಲಿ ಮಲಗ್ಯಾವು
……….
ಆ ಮರದ ತುಂಬೆಲ್ಲಾ ಹಳದಿಯ ಹೂಗುಳು
ಹೂವಲ್ಲ ಬಿಡು ಅವು ಹರೆದೋರ ಹರಕೆಗಳು
ಹಗಲೊತ್ತಿನೊಳಗ ಹುಚ್ಚೆದ್ದು ಅರಳ್ಯಾವು
……….

ಬಳ್ಳಿ ಹಬ್ಬಿಕೆ ನೋಡ ಬೆಳ್ಳಿ ಮಲ್ಲಿಗೆ ನೋಡ
ಬೆಳ್ಳಾನೆ ಅವಳ ನಗುವಂಗೆ ಅರಳ್ಯಾವೆ
ನನ್ನವಳ ಮುಡಿಗಾಗಿ ಕಾದಾವೆ
…………
ಹೊಂಗೆಯ ತುಂಬೆಲ್ಲಾ ಹೂ ಹೊದ್ದು ಮಲಗ್ಯಾವೆ
ದುಂಬಿಯ ಕಚಗುಳಿಗೆ ಮೈತುಂಬಾ ನಲುಗ್ಯಾವೆ
ಬ್ಯಾಸಿಗಿ ಭೂಮಿಗೆ ತಂಪಿನ ಹಾಸಿಗೆ ಹಾಸ್ಯಾವೆ
………..
ಬ್ಯಾಸಿಗಿ ಬಿಸಲಿಗೆ ಬಗ್ಗದೆ ಮೈಯೊಗ್ಗಿ
ಜಾಲಿಯ ಹಸಿರು ನಗುತೈತಿ ಹೂಬಿಟ್ಟು
ಸೆಲುವಿಯ ಹಸಿರು ಬಳಿ ನನ್ನ ಸೆಳೆದ್ಹಾಂಗ






ಸೆಳೆಯುವ ಸಾಲುಗಳ ಹಾಡು
Vaaaavvaaa Shivu… 🙂
good..very nice..!!!