ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಾರೀಕು ಮುಗಿದ ಪುಟಗಳದು ಮಾತ್ರ ಮೂಕ ವೇದನೆ..

ನನ್ನ ಡೈರಿಯ ಖಾಲಿ ಪುಟಗಳು…

ವಾಗೀಶ ಜೆ.ಎಂ ಕೊಟ್ಟೂರು

ನನ್ನ ಡೈರಿಯ ಖಾಲಿ ಪುಟಗಳು,
ಒಮ್ಮೊಮ್ಮೆ ಮತನಾಡುತ್ತವೆ, ತೊದಲುತ್ತವೆ,
ಗಾಳಿ ಬಂದಾಗ ಮೇಲೆಳಲು ಹವಣಿಸುತ್ತವೆ..
ಬಿಡಿ ಬಿಡಿಯಾಗಿ ನೋಡಿದರೆ
ಖಾಲಿ ಎನಿಸುವ ಪುಟಗಳು..
ಹಿಡಿ ಹಿಡಿಯಾಗಿ ನೋಡಿದರೆ ತುಂಬಾ ಭಾರ ಕಣ್ತುಂಬಿ ಬಂದ ಕಣ್ಣಾಲಿಗಳಂತೆ.
 
ನೂರು, ಸಾವಿರ, ಲಕ್ಷ ಪುಟಗಳಿಗೆ ಲೆಕ್ಕವಿಲ್ಲದಷ್ಟು ಭಾವಗಳಿವೆ
ಅದರೆ
ತುಂಬಿಕೊಳ್ಳಲು ಬಣ್ಣಗಳಿಲ್ಲ, ಬಹುಶಃ ಲೇಖನಿಯ ಮುಳ್ಳು ಮುರಿದಿರಬಹುದು..
ಇಂಕು ಓಣಗಿರಬಹುದು..
ಅಥವಾ
ಯಾರೋ ಒತ್ತಿ ಹಿಡಿದಿರಬಹುದು..?

ತಾರೀಕು, ಇಸವಿ, ತಿಥಿ.. ಇತ್ಯಾದಿಗಳನ್ನು
ಅವು ಕಂಡಿವೆ..
ಆದರೆ ಓಂದು ದಿನವು ಅವಕ್ಕೆ ಗೊತ್ತಿಲ್ಲ ತಾನು ಹುಟ್ಟಿದ್ದು, ನಕ್ಕಿದ್ದು, ಅತ್ತಿದ್ದು ಯಾವಗೆಂದು..
ತನಗಂಟಿದ ಧೂಳು ಕೊಡವುದರಲ್ಲೆ ಕಾಲ ದೂಡುತ್ತಿರುವಾಗ
ಇನ್ನೆಲ್ಲಿಯ ಹುಟ್ಟು ಹಬ್ಬ, ಹೊಸ ಬಟ್ಟೆ, ಸಿಹಿ ತಿನಿಸು..
ತಾರೀಕು ಮುಗಿದ ಪುಟಗಳದು ಮಾತ್ರ ಮೂಕ ವೇದನೆ..
ಅರಣ್ಯ ರೋದನಕೆ ಅತ್ಯುತ್ತಮ ಉದಾಹರಣೆ..
 
ಮುಂದೆ ಬರೆಯಬೇಕಿರುವ ಪುಟಗಳಿಗೆ
ಹಿಂದಿನ ಖಾಲಿ ಪುಟಗಳ ಸಮರ್ಥನೆ ಕೊಟ್ಟು ಖಾಲಿ ಬಿಟ್ಟರೆ ನಷ್ಟವೆನಿಲ್ಲ ಖಾಲಿ ಪುಟಗಳಿಗೆ
ಹೌದು ಹೌದು..
ನಶಿಸಿ ಹೋಗುತ್ತಿರುವ ಕನಸುಗಳಿಗೆಲ್ಲ ಸೂತಕ ಬಡಿದರೆ ನಷ್ಟವೆನಿಲ್ಲ.. ಕನಸುಗಳಿಗೆ
ಪಾಪ..
ಇಷ್ಟಾರ್ಥ ಸಿದ್ದಿರಸ್ತು ಎನ್ನುವವರೆಲ್ಲ.. ಅಷ್ಟ ದಿಗ್ಬಂಧನ ಹಾಕಿದರೆ ನಷ್ಟವೆನಿಲ್ಲ ಅವರಿಗೆ..
 
ಇರಲಿ.. ಖಾಲಿ ಪುಟಗಳು ಬರಿಯ ಒಣ ಹಾಳೆಗಳಲ್ಲ
ಪದವಿದ್ದ ಮಾತ್ರಕ್ಕೆ ಅವು ತುಂಬಿದ ಪುಟಗಳಲ್ಲ..
ಹೂರಣ ತುಂಬಿ ಬೇಯಿಸಿದ ಮಾತ್ರಕ್ಕೆ ಅದು ಎಂದು ಹೋಳಿಗೆಯಲ್ಲ..
ತುಂಬಿ ಬಂದ ಪದಗಳನ್ನೆಲ್ಲ ತಂಬೂರಿ ತಂತಿ ಮಾಡಿ ಮೀಟಬೇಕಿದೆ
ಶ್ರುತಿ ತಪ್ಪಿ, ತಾಳ ತಲೆ ಕೆಳಗಾಗಿ, ಹೊಮ್ಮುವ ನಾದ
ಶೋಕ ಗೀತೆಯೋ, ಸಂದ್ಯಾ ರಾಗವೋ.
ಈ ಜೀವಕ್ಕೆ ಎಲ್ಲವೂ ಸಲೀಸು….
 

‍ಲೇಖಕರು avadhi

12 April, 2014

3 Comments

  1. Anonymous

    ಖಾಲಿಯಾಗಿದೆ ಎಂದ ಮಾತ್ರಕ್ಕೆ ಖಾಲಿಯೆಂದಲ್ಲ.
    ತಾರೀಕು ಮುಗಿದೊಡನೆ ದಿನ ಮುಗಿಯುವುದಿಲ್ಲ.
    ದಾಖಲಾಗುತ್ತದೆ- ಮನದಲ್ಲಿ, ಕನಸಿನಂತೆ ನೆನಪಾಗಿ…!
    ತುಂಬ ಚೆನ್ನಾಗಿದೆ ಕವಿತೆ.

  2. pravara kottur

    ವಾಗೀಶ್ ಅವರೆ… ತುಂಬಾ ಒಳ್ಳೆ ಪದ್ಯ ಓದಿಸಿದ್ದಕ್ಕೆ ಧನ್ಯವಾದಗಳು

  3. ವಾಗೀಶ ಜೆ.ಎಮ್

    Thank you…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading