ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಲೆ ಬರಹ ಇಲ್ಲದ ಟಿಪ್ಪಣಿಗೆ ಯಾರೋ ಷರಾ ಬರೆದಂತೆ…!

ವೈ.ಬಿ.ಹಾಲಬಾವಿ


ಯಾರೋ
ಷರಾ ಬರೆದಂತೆ…
 
ಹಳೇ ಕಡತ
ಎಂದೋ ಸಹಿ ಹಾಕಿದ ನೆನಪು
ನನ್ನದೇ ಎಂದು ಗುಮಾನಿ ಹುಟ್ಟಿಸುತ್ತಿದೆ
ಸಹಿಯಿಂದ ಸಹಿಗೆ ಎಷ್ಟು ಫರಖ್…
ನನ್ನದೆ ಚಹರೆಗೆ ಮುಖವಾಡ ಒತ್ತಿದಂತೆ
ಅಕ್ಷರ ಮಾಸಿದ ಕಚೇರಿಯ ಸೀಲಿನಂತೆ
ಎಂದೋ ತೆಗೆಸಿದ ಭಾವ ಚಿತ್ರದ ಎದುರು
ಫೋಜು ಕೊಟ್ಟಂತೆ…!
 
ಬದಲಾದ ಸನ್ನಿವೇಷದಲ್ಲಿ
ಯಾರಿಗೆ ಯಾರೂ ಸಾಕ್ಷಿಯಾಗುದಿಲ್ಲ
ಆತ್ಮ ಸಾಕ್ಷಿ ಇಲ್ಲದ ಮೇಲೆ ಯಾವ
ಒಳ ಒಪ್ಪಂದಗಳು ಊರ್ಜಿತವಾಗುವುದಿಲ್ಲ…
 
ಖುಷಿ ಕೊಡುವ ಎಲ್ಲ ಸಂಗತಿಗಳು
ಖಾಸಗಿತನ ಮೀರಿ
ಸಾರ್ವತ್ರಿಕವಾಗಿ ಮೋಹರಾಗಿ ಬಿಡುತ್ತವೆ
ತಲೆ ಬರಹ ಇಲ್ಲದ ಟಿಪ್ಪಣಿಗೆ
ಯಾರೋ ಷರಾ ಬರೆದಂತೆ…!
 

‍ಲೇಖಕರು avadhi

20 April, 2013

1 Comment

  1. ಪ್ರಕಾಶ ಬಿ. ಜಾಲಹಳ್ಳಿ

    `ಅಕ್ಷರ ಮಾಸಿದ ಕಚೇರಿಯ ಸೀಲಿನಂತೆ’ nimma kviteya salugu hostandind kudive nice…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading