ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಲೆಯಲ್ಲುಳಿದ ಸೀರಿನಂತೆ..

ರೇಣುಕಾಧರಿ

 

 

ಬಾಚಣಿಕೆಯ ಹಲ್ಲುಗಳ ನಡುವೆ ಸಿಕ್ಕಿಕೊಂಡಿದ್ದ
ಸೀರು, ಅಲಲೇ…ಹೇನಿನ ಮರಿಯೂ ಮೇಯುತ್ತಿದೆ
ತಲೆ ಕೆರೆದಾಗೆಲ್ಲಾ ಅನುಮಾನ
ಎರಡು ಗುತ್ತಗಿನ ಹಲ್ಲಿನ ಬಾಚಣಿಕೆಯಿಂದ
ತಲೆಯ ಬೈತಲೆ ತೆಗೆದು ಬಾಚಿದೆ
ಅಂಗಿ ಜಾಡಿಸಿದರೆ ಏನೂ ಇಲ್ಲ
ಅಮ್ಮನ ನಗು ಹೇನಿಲ್ಲ…ಆದರೂ ಇದೆಲ್ಲಿಂದ ಬಂತು?
ಅದು ನಿನ್ನದಲ್ಲ, ನಿನ್ನಪ್ಪಂದು..
ಏನು ಅಪ್ಪನ ತಲೆಯಲ್ಲಿ ಹೇನು…
ಇಲ್ಲ ಅಮ್ಮ, ಅಪ್ಪನ ಕೂದಲು ಚಿಕ್ಕದು ಅದ್ಹೇಗೆ..
ಏನಾದರೂ ತಿಂದೆಯಾ..ಹು ಆಗಲೇ ಚಾಕೋಲೇಟ್‍
ಹಲ್ಲಿನಡಿಯಲ್ಲಿ ಸಿಕ್ಕಿರಬೇಕಲ್ಲ
ಹೇನಿಗೂ ಹಲ್ಲಿಗೂ ನಂಟೇನು..
ಅದೇ ಬಾಚಿದಾಗ ಹಲ್ಲಿನ ಮಧ್ಯೆ ಸಿಕ್ಕಿ ಬರುತ್ತಲ್ಲ!
ಅನ್ಯ ಪರಿಚಾಯಿ ಅದೆಲ್ಲಿಂದ ಸಿಕ್ಕಿತೋ
ದಡಬಡಿಸಿದೆ ಕನಸಲ್ಲವೇ?
ಅಪ್ಪ ಮತ್ತ್ಹೇಗೆ ಜೀವಂತವಾದಾನೂ
ಇಲ್ಲದ ನಾಳೆಗಳಲ್ಲಿ ಸತ್ತ ಹೇನಿನಂತೆ
ತಲೆಯಲ್ಲುಳಿದ ಸೀರಿನಂತೆ
ಕೆರೆಯುತ್ತಲೇ ಇರುತ್ತೇನೆ…ಅಲ್ಲಲ್ಲ
ನೆನಪುಗಳ ಕೆದಕುತ್ತಲೇ ಇರ್ತೀನಿ
ಅದಕ್ಕೆ ಇರಬೇಕು ಹೇನು, ಸೀರಿನ ನಂಟಿನಂತೆ
ಮರಿಯಾದ ನಾನೊಂದು ಹೇನು…ಸೀರು..
ಏನಾದರಾಗಲಿ ಸಾಯದಿದ್ದರೆ ಸಾಕು
ಮತ್ತೊಂದು ನೆನಪು ಮರಳಿಸುವುದರೊಳಗೆ….

 

‍ಲೇಖಕರು admin

19 July, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading