ಇತ್ಯಾದಿ
ಮೂಲ ಹಿಂದಿ : ರಾಜೇಶ್ ಜೋಷಿ
ಕನ್ನಡಕ್ಕ : ಸಿಕಂದರ್ ಅಲಿ
ಹುದ್ದೆಗಳಿದ್ದ ಕೆಲವರ ಹೆಸರುಗಳ ಉಲ್ಲೇಖವಾಗಿತ್ತು
ಉಳಿದ ಬಾಕಿ ಎಲ್ಲರೂ ಇತ್ಯಾದಿಗಳಾಗಿದ್ದರು
ಇತ್ಯಾದಿ ಸಂಖ್ಯೆಯಲ್ಲಿ ತುಂಬಾ ಹೆಚ್ಚಾಗಿರುತ್ತಿದ್ದರು
ಹಾಗೋ ಹೀಗೋ ಈ ಇತ್ಯಾದಿ ತರಕಾರಿಗಳನ್ನು ಖರೀದಿಸಿದ ಜೊತೆಗೆ
ಊಟ ಗೀಟಾ ಮಾಡಿ ಪ್ರಮುಖ ವ್ಯಕ್ತಿಗಳ ಭಾಷಣ
ಕೇಳಲು ಹೋಗುತ್ತಿದ್ದರು
ಈ ಇತ್ಯಾದಿ ಪ್ರತಿ ಗೋಷ್ಠಿಯಲಿ ಉಪಸ್ಥಿತಿಯ ಸಂಖ್ಯೆ ಹೆಚ್ಚಿಸುತ್ತಿದ್ದರು
ಈ ಇತ್ಯಾದಿ ಮೆರವಣಿಗೆಯಲ್ಲಿ ಹೋಗುತ್ತಿದ್ದರು
ಫಲಕಗಳನ್ನು ಹಿಡಿದು ಘೋಷಣೆಗಳು ಕೂಗುತ್ತಿದ್ದರು
ಇತ್ಯಾದಿಗಳು ಉದ್ದನೆಯ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದರು
ಈ ಪ್ರಜಾಪ್ರಭುತ್ವದಲ್ಲಿ ಸರಕಾರ ಇವರೇ ರಚಿಸುತ್ತಾರೆಂದು
ಅವರಿಗೆಲ್ಲಾ ಒಂದು ಭ್ರಮೆಯಲ್ಲಿ ತೇಲಿಸಲಾಗಿತ್ತು
ಈ ಇತ್ಯಾದಿ ನಿರಂತರ ಚಳುವಳಿಯಲ್ಲಿ ಭಾಗವಹಿಸುತ್ತಿದ್ದರು
ಅದಕ್ಕಾಗಿ ಆಗಾಗ ಪೋಲಿಸರ ಗುಂಡಿನೇಟಿಗೆ ಸಾವಿಗೀಡಾಗುತ್ತಿದ್ದರು
ಯಾವಾಗ ಪೋಲೀಸರ ಗುಂಡೇಟಿಗೆ ಬಲಿಯಾಗುತ್ತಿದ್ದರೋ ಆಗ
ಶಾಲೆಗೆ ಸೇರಿಸುವ ಸಲುವಾಗಿ ಇಡಲಾಗಿದ್ದ ಅವರ
ಹೆಸರುಗಳು ನಮಗೆ ಹೇಳಲಾಗುತ್ತಿತ್ತು
ಕೆಲವರಿಗೆ ಸಂಬಳ ಸಿಗುತ್ತಿತ್ತು
ಇನ್ನೂ ಕೆಲವರು ಆ ಘಟನೆಗಳಲ್ಲಿ ಇತ್ಯಾದಿ ಆಗಿಬಿಡುತ್ತಿದ್ದರು
ಈ ಇತ್ಯಾದಿಗಳು ಪ್ರತಿ ಅಪಾಯಕ್ಕು ಹೆದರುತ್ತಿದ್ದರು
ಆದರೆ ಆಗಾಗ ಹೆದರುವುದು ಬಿಟ್ಟುಬಿಡುತ್ತಿದ್ದರು
ಬಿಟ್ಟಾಗ ಉಳಿದವರು ಇವರಿಂದ ಭಯಭೀತರಾಗುತ್ತಿದ್ದರು
ಇತ್ಯಾದಿಗಳಂತು ದೇಶ ಮತ್ತು ಸಮಾಜದಲ್ಲಿ ನಡೆಯುವ ಆ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು
ಕೆಲವರಿಗೆ ಕೇವಲ ತನ್ನ ಕುಟುಂಬ ನಿರ್ವಹಣೆ ಮಾಡಲು ಮಾಡುತ್ತಿದ್ದರು ಅನಿಸುತ್ತಿತ್ತು
ಈ ಇತ್ಯಾದಿ ಪ್ರತಿ ಸ್ಥಳಗಳಲ್ಲಿ ಶಾಮೀಲಾಗುತ್ತಿದ್ದರು
ಆದರೆ ಇವರುಗಳ ಹೆಸರು ಎಲ್ಲೂ ಶಾಮೀಲಾಗುತ್ತಿರಲಿಲ್ಲ
ಈ ಇತ್ಯಾದಿಗಳು ಯಾವಾಗಲೂ ಕೆಲ ತಲೆಕೆಟ್ಟ ಕವಿಗಳ ಕವಿತೆಗಳಲ್ಲಿ ಕಂಡುಬರುತ್ತಿದ್ದರು.






ಅನುವಾದ ತುಂಬ ಚೆನ್ನಾಗಿದೆ
ಪ್ರತಿಭಾ ನಂದಕುಮಾರ್